ಬೆಂಗಳೂರು: ಪೊಲೀಸ್ ಸಿಬ್ಬಂದಿ ನಂತರ ಇದೀಗ ಕೆಎಸ್ಸಾರ್ಟಿಸಿ ಚಾಲಕನಿಗೂ ಕರೊನಾ ಸೋಂಕು ತಗಲಿದ್ದು, ಪ್ರಯಾಣಿಕರಲ್ಲೂ ಆತಂಕ ಸೃಷ್ಟಿಯಾಗುವಂತಾಗಿದೆ. ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಅಗತ್ಯ ಸೇವೆ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸೋಂಕು ಹರಡುತ್ತಿದೆ. ಅದರಲ್ಲೂ ನಿತ್ಯ ನೂರಾರು ಜನರನ್ನು ಬಸ್ ಮೂಲಕ ಕರೆದೊಯ್ಯುವ ಕೆಎಸ್ಸಾರ್ಟಿಸಿ ಚಾಲಕರೊಬ್ಬರಿಗೆ ಕರೊನಾ ಸೋಂಕು ಹರಡಿದ್ದು, ಸಹೋದ್ಯೋಗಿಗಳಷ್ಟೇ ಅಲ್ಲದೆ, ಪ್ರಯಾಣಿಕರೂ ಭಯ ಪಡುವಂತಾಗಿದೆ.
ಇದನ್ನೂ ಓದಿ:1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ
ಸೋಂಕಿತ ಚಾಲಕ ತುಮಕೂರಿನ ಬೆಳ್ಳಾವಿಯವರಾಗಿದ್ದು, ಬೆಂಗಳೂರು-ಮಾಗಡಿ ಮಾರ್ಗವಾಗಿ ಸಂಚರಿಸುವ ಬಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ತುಮಕೂರಿನಲ್ಲಿ ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದರು. ಅದಾದ ನಂತರ ಬೆಂಗಳೂರಿನಲ್ಲೂ ಒಮ್ಮೆ ತಪಾಸಣೆ ಮಾಡ ಲಾಗಿತ್ತು. ಆದರೆ, ಈ ವೇಳೆ ಸೋಂಕಿನ ಲಕ್ಷಣ ಇರಲಿಲ್ಲ. ಅದರಿಂದ ಬಸ್ ಚಾಲನೆ ಮಾಡಲು ಅವಕಾಶ ನೀಡಲಾಗಿತ್ತು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ
ಒಂದು ದಿನ ಸೇವೆ ಸಲ್ಲಿಸಿದ್ದರು:ಕರೊನಾ ಸೋಂಕು ಸೇರಿ ಯಾವುದೇ ರೋಗದ ಲಕ್ಷಣಗಳಿಲ್ಲದ ಕಾರಣ ಮತ್ತು ವೈದ್ಯಕೀಯ ವರದಿಯಲ್ಲೂ ಅದೇ ರೀತಿಯ ಅಂಶಗಳಿದ್ದ ಕಾರಣ ಸೇವೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಕಳೆದ ಶುಕ್ರವಾರ ಬೆಂಗಳೂರು – ಮಾಗಡಿ ನಡುವೆ ಬಸ್ ಚಾಲನೆ ಮಾಡಿದ್ದರು. ಅದಾದ ನಂತರ ರೋಗದ ಲಕ್ಷಣಗಳಿರುವ ಅನುಮಾನ ಬಂದ ಕಾರಣ ಶನಿವಾರ ಅವರ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಸೋಮವಾರ ಸೋಂಕಿರುವುದು ದೃಢಪಟ್ಟಿದೆ.
ಇದನ್ನೂ ಓದಿ:ರೈತರ ಸಂಕಷ್ಟ ನಿವಾರಣೆಗೆ ಹೊಸ ಆಪ್ ಅನ್ನದಾತ
ಸಿಬ್ಬಂದಿಯಲ್ಲಿ ಆತಂಕ:ಬಸ್ ಚಾಲಕ ತುಮಕೂರಿಗೆ ತೆರಳದೆ, ಕಳೆದ ನಾಲ್ಕು ದಿನಗಳಿಂದ ಮಾಗಡಿಯಲ್ಲಿಯೇ ವಾಸ್ತವ್ಯ ಹೂಡಿದ್ದರು. ಜತೆಗೆ ಉಳಿದ ಚಾಲಕ, ನಿರ್ವಾಹಕ ಮತ್ತು ರಾಮನಗರ ಡಿಪೋ ಸಿಬ್ಬಂದಿ ಜತೆಗೂ ಸಂಪರ್ಕ ಹೊಂದಿದ್ದರು. ಹೀಗಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಿಬ್ಬಂದಿ ಆತಂಕಕ್ಕೊಳಗಾಗುವಂತಾಗಿದೆ. ಅದರ ಜತೆಗೆ ಶುಕ್ರವಾರ ಆತ ಚಲಾಯಿಸಿದ್ದ ಬಸ್​ನಲ್ಲಿ ಪ್ರಯಾಣಿಸಿದ ಪ್ರಯಾಣಿಕರನ್ನು ಪತ್ತೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಲಾ ಆ್ಯಂಡ್​ ಆರ್ಡರ್​: ವೈದ್ಯಕೀಯ ಉಪಕರಣ ನಿಯಂತ್ರಣಕ್ಕೆ ಕಾನೂನು
ಸಮರ್ಪಕ ಪರೀಕ್ಷೆ ವ್ಯವಸ್ಥೆಯಿಲ್ಲ:ಕೆಎಸ್ಸಾರ್ಟಿಸಿ, ಬಿಎಂಟಿಸಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ಸಿಬ್ಬಂದಿ ನಿಗಮದ ವೈದ್ಯಕೀಯ ಅಧಿಕಾರಿ ಬಳಿ ಪರೀಕ್ಷೆಗೊಳಪಡಬೇಕು ಮತ್ತು ಅವರು ನೀಡುವ ಪ್ರಮಾಣಪತ್ರ ಪಡೆಯ ಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ. ಆದರೆ, ವೈದ್ಯಕೀಯ ಪರೀಕ್ಷೆ ವೇಳೆ ಕೇವಲ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೆಮ್ಮು, ಶೀತದ ಲಕ್ಷಣಗಳಿವೆಯೇ ಎಂಬ ಪ್ರಶ್ನೆ ಮಾಡಲಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಪರೀಕ್ಷೆಗೊಳಪಡಿಸಲಾಗುತ್ತಿಲ್ಲ. ಹೀಗಾಗಿ ಸೋಂಕಿದ್ದರೂ ಸಂಬಂಧಿಸಿದ ಲಕ್ಷಣ ಕಾಣಿಸದಿದ್ದರೆ ಪ್ರಮಾಣಪತ್ರ ನೀಡಲಾಗುತ್ತಿದೆ. ಇದು ಕೂಡ ಕರೊನಾ ಸೋಂಕು ಹರಡಲು ಕಾರಣ ಎಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ.
ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
