ಕೋಲಾರ:ಪ್ರತಿಭಟನಾನಿರತ ಸಾರಿಗೆ ನೌಕರರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಲಾಠಿ ಚಾರ್ಜ್ ಮಾಡಲಾಗಿದೆ.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಗೊಂಡಹಳ್ಳಿ ಬಳಿ ಪ್ರತಿಭಟನೆ ಮಾಡುತ್ತಿದ್ದ ನೌಕರರನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮಂಗಳವಾರ ಬೆಳಗ್ಗೆ ಯತ್ನಿಸಿದ ಸಾರಿಗೆ ನೌಕರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಕೋವಿಡ್​ ಹಿನ್ನೆಲೆಯಲ್ಲಿ ಗುಂಪು ಸೇರುವಿಕೆ, ಪ್ರತಿಭಟನೆ, ಸಭೆ, ಸಮಾರಂಭಕ್ಕೆ ಅವಕಾಶ ಇಲ್ಲ. ಇಲ್ಲಿಂದ ಹೊರಡಿ ಎಂದರೂ ನೌಕರರು ನಮ್ಮವರನ್ನು ಬಿಟ್ಟುಬಿಡಿ ಎನ್ನುತ್ತಾ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾನಿರತ ಸಾರಿಗೆ ನೌಕರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕೆಲ ಸಾರಿಗೆ ನೌಕರರನ್ನ ಅಟ್ಟಾಡಿಸಿ ಹೊಡೆದರು.
ಸಾರಿಗೆ ನೌಕರರ ಮೇಲೆ ಪೊಲೀಸ್​ ಲಾಠಿ ಚಾರ್ಜ್​ ನಡೆಸಿದ ವಿಡಿಯೋ ನೋಡಲು ವಿಜಯವಾಣಿ ಫೇಸ್​ಬುಕ್​ ಲಿಂಕ್​ ಅನ್ನು ಕ್ಲಿಕ್​ ಮಾಡಿhttps://www.facebook.com/VVani4U/videos/336254347836192
ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 13 =
Remember me
