ಬೆಂಗಳೂರು:ಕೆಎಸ್​ಆರ್​ಟಿಸಿ ಬಸ್​ನಲ್ಲಿ ಇಂದಿನಿಂದ ಮೂರು ದಿನ ವಲಸೆ ಕಾರ್ಮಿಕರು ತಮ್ಮ ಊರಿಗಳಿಗೆ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಈ ಆದೇಶ ಹೊರಡಿಸಿದ್ದು, ಕಾರ್ಮಿಕರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.
ಲಾಕ್​ಡೌನ್​ನಿಂದಾಗಿ ಕೆಲಸವೂ ಇಲ್ಲದೆ, ಇತ್ತ ಊರಿಗೂ ಹೋಗಲಾಗದೆ ಬೆಂಗಳೂರಿನಲ್ಲೇ ಪರದಾಡುತ್ತಿದ್ದ ಕಾರ್ಮಿಕರೀಗ ಯಾವುದೇ ಹಣ ಕೊಡದೆ ಉಚಿತವಾಗಿ ಪ್ರಯಾಣಿಸಬಹುದು. ಎಲ್ಲ ಪ್ರಯಾಣಿಕರಿಗೂ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ರಾತ್ರಿ ವೇಳೆ ಪ್ರಯಾಣ ಇರುವುದಿಲ್ಲ, ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಸ್​ ಸಂಚರಿಸಲಿದ್ದು, ನಾನ್​ ಸ್ಟಾಪ್​ ಆಗಿರಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿಕೆಎಸ್​ಆರ್​ಟಿಸಿಗೆ 1 ಕೋಟಿ ರೂ. ದೇಣಿಗೆ ಕೊಟ್ಟ ಕೆಪಿಸಿಸಿ, ಕಾರ್ಮಿಕರ ಕಷ್ಟ ಆಲಿಸಿದ ಕಾಂಗ್ರೆಸ್
ಅಗತ್ಯಬಿದ್ದರೆ ನಾಲ್ಕನೇ ದಿನವೂ ಈ ಸೌಲಭ್ಯ ಮುಂದುವರಿಯಲಿದೆ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಟಿಕೆಟ್​ ಪಡೆದಿರುವ ಕಾರ್ಮಿಕರಿಗೆ ಹಣ ವಾಪಸ್ ಆಗಲಿದೆ ಎಂದು ಸಾರಿಗೆ ಸಚಿವರು ಅಭಯ ನೀಡಿದ್ದಾರೆ.
ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು. ಬಸ್​ ಹತ್ತುವಾಗ ನೂಕುನುಗ್ಗಲು ಮಾಡಿಕೊಳ್ಳಬಾರದು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿಕಾರ್ವಿುಕರ ಪ್ರಯಾಣ ವ್ಯವಸ್ಥೆಯೇ ಅವ್ಯವಸ್ಥೆ: ಊರಿಗೆ ತೆರಳಲು ಮೆಜೆಸ್ಟಿಕ್​ಗೆ ಬಂದ ಸಾವಿರಾರು ಜನರು
ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಬಸ್ ಹತ್ತಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಹತ್ತಾರು ಬಸ್​ಗಳು ಕಾರ್ಮಿಕರ ಊರುಗಳತ್ತ ಹೊರಟಿವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿರುವ ಕಾರ್ಮಿಕರಿಗೂ ಅವರ ಊರಿಗೆ ತೆರಳಲು ಆಯಾ ಭಾಗದಲ್ಲಿ ಬಸ್​ ಸೌಲಭ್ಯ ಮಾಡಲಾಗುತ್ತಿದ್ದು, ಇದು ರಾಜ್ಯದ ವಲಸೆ ಕಾರ್ಮಿಕರಿಗಷ್ಟೆ ಅನ್ವಯವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
