ಬೆಂಗಳೂರು:ಪ್ರಯಾಣಿಕರಿಗೆ ಉತ್ಲೃಷ್ಟ ದರ್ಜೆಯ ಸೇವೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸದಾಗಿ ಐಷಾರಾಮಿ ಸೌಲಭ್ಯವುಳ್ಳ ವಿನೂತನ ಮಾದರಿಯ ಸ್ಲೀಪರ್​ ಬಸ್​ಗಳನ್ನು ಪರಿಚಯಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಾಂಕೇತಿಕ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಮಹಾದ್ವಾರದ ಬಳಿ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ‌ ಈ ವರ್ಷ ಒಂದು ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಅಂತಾರಾಜ್ಯ ಪ್ರಯಾಣಿಕರಿಗಾಗಿ ಸಿದ್ಧವಾದ ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್​’ ಬಸ್​ಗೆ “ಅಂಬಾರಿ ಉತ್ಸವ” ಎಂದು ನಾಮಕರಣ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್​ ಬಸ್​ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ಅಂಬಾರಿ ಉತ್ಸವ್- ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಕೆಎಸ್​ಆರ್​ಟಿಸಿ ಬಸ್ ಸೇವೆ ನೀಡಲಿದೆ.
#KSRTC(#Karnataka) inducts#Europeanstyle#Volvo9600 series#LuxuryAC#Sleeper#Buses. These new long buses are labelled#AmbaariUtsav.(🎥 by TOI Sunil)@NammaBengaluroo@WFRising@namma_BTM@peakbengaluru@TOIBengaluru@BBPVedike@NammaKarnataka_@vinaysreenipic.twitter.com/1pKsPccD7B— Rakesh Prakash (@rakeshprakash1)February 21, 2023
#KSRTC(#Karnataka) inducts#Europeanstyle#Volvo9600 series#LuxuryAC#Sleeper#Buses. These new long buses are labelled#AmbaariUtsav.(🎥 by TOI Sunil)@NammaBengaluroo@WFRising@namma_BTM@peakbengaluru@TOIBengaluru@BBPVedike@NammaKarnataka_@vinaysreenipic.twitter.com/1pKsPccD7B
1.70 ಕೋಟಿ ರೂ ವೆಚ್ಚವ್ಯವಸ್ಥಿತ, ಸುಖಕರ ಪ್ರಯಾಣಕ್ಕೆ ಸುಸಜ್ಜಿತ ಸೌಲಭ್ಯವುಳ್ಳ ಪ್ರತಿ ಬಸ್ ಖರೀದಿಗೆ ಸಾರಿಗೆ ಸಂಸ್ಥೆಯು 1.70 ಕೋಟಿ ರೂ. ವೆಚ್ಚ ಮಾಡಿದೆ. ಮೊದಲ ಹಂತದಲ್ಲಿ 20 ಬಸ್ ಗಳನ್ನು ವೋಲ್ವೋ ಸಂಸ್ಥೆ ಪೂರೈಸಿದೆ. ಈ ವರ್ಷ ಒಟ್ಟು‌ 50 ಬಸ್ ಗಳನ್ನು ಖರೀದಿಸಲು ಸಂಸ್ಥೆ ತೀರ್ಮಾನಿಸಿದೆ.
ರೋಪಿಯನ್​ ಮಾದರಿ ಎಸಿ-ಸ್ಲೀಪರ್​​ ಬಸ್​ ಆಗಿದ್ದು, ಈ ಬಸ್​​​ಗಳು ಬೆಂಗಳೂರು ನಗರದಿಂದ ಮಂಗಳೂರು, ಕುಂದಾಪುರ, ಪುಣೆ, ಹೈದರಾಬಾದ್​, ಪಣಜಿ, ಸಿಕಂದ್ರಾಬಾದ್​, ಎರ್ನಾಕುಲಂ, ತ್ರಿಶೂರ್, ತಿರುವನಂಥಪುರಂಗೆ ಸಂಚರಿಸಲಿವೆ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಂದ ಈ ಬಸ್‌ಗಳು ಕಾರ್ಯನಿರ್ವಹಿಸಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 2 =
Remember me
