ಬೆಂಗಳೂರು: ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ತಮ್ಮಿಂದ ಆಗುವ ಕೆಲಸಗಳನ್ನು ಮಾಡುತ್ತಿವೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಅಂಥದ್ದೊಂದು ಉಪಕ್ರಮವನ್ನು ಕೈಗೊಂಡಿದೆ. ಹಳೆಯ ಬಸ್​ ಒಂದನ್ನು ಮೊಬೈಲ್ ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಿದ್ದು, ಸಾರಿಗೆ ಸಂಜೀವಿನಿ ಎಂಬ ಹೆಸರನ್ನೂ ಇರಿಸಿದೆ.
20 ಸಾವಿರ ರೂಪಾಯಿ ವೆಚ್ಚದಲ್ಲಿ ಹತ್ತು ವರ್ಷ ಹಳೆಯಬಸ್ಸನ್ನು ಈ ರೀತಿಯಾಗಿ ಪರಿವರ್ತಿಸಲಾಗಿದೆ. ಈ ಬಸ್​ ಬೆಂಗಳೂರು ಮಹಾನಗರದಲ್ಲಿ ಸಂಚರಿಸಲಿದ್ದು, ಪೊಲೀಸ್, ಮೆಡಿಕಲ್, ಪೌರ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಬಸ್ ಮುಂಭಾಗ ಹತ್ತಿ ಹಿಂಭಾಗ ಇಳಿದರೆ ಸಂಪೂರ್ಣವಾಗಿ ದೇಹಕ್ಕೆ ದ್ರಾವಣ ಸಿಂಪಡಣೆ ಆಗಿ, ಇಡೀ ಶರೀರ ಸ್ಯಾನಿಟೈಸ್ ಆಗಲಿದೆ. ಇದು ಕೊರೋನಾ ಸೊಂಕು ನಿವಾರಣೆಗೆ ಮುಂಜಾಗ್ರತಾ ಕ್ರಮದ ಒಂದು ಭಾಗವಾಗಿದೆ. ಜಿಲ್ಲಾ ಮಟ್ಟದಲ್ಲೂ ಡಿಪೊಗಳಲ್ಲಿ ಇರುವ ಸ್ಕ್ರ್ಯಾಪ್ ಬಸ್ಸುಗಳನ್ನು ಈ ರೀತಿ ಪರಿವರ್ತಿಸಿ ಅಲ್ಲಿನ ಆರೋಗ್ಯ ಸಿಬ್ಬಂದಿ, ಪೊಲೀಸರು ಮತ್ತು ಪೌರ ಕಾರ್ಮಿಕರ ಅನುಕೂಲಕ್ಕೆ ಒದಗಿಸಲಾಗುವುದು ಎಂದು ಕಳಸದ ವಿವರಿಸಿದರು.
ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಈ ಮೊಬೈಲ್ ಸ್ಯಾನಿಟೈಸರ್ ಬಸ್​ಗೆ ಚಾಲನೆ ನೀಡಿದರು. ನಿಮಗದ ಬೆಂಗಳೂರು ‌ಕೇಂದ್ರೀಯ ವಿಭಾಗದ ಬಸ್ ಘಟಕ – 2 ರಲ್ಲಿ ಈ ಬಸ್​ ಅನ್ನು ಅನಾವರಣಗೊಳಿಸಿದ ಕಳಸದ್ ಅವರು ತಾವೇ ಸ್ಯಾನಿಟೈಸರ್ ಸ್ಪ್ರೇ ಗೆ ಒಳಗಾಗಿ ಪ್ರಾತ್ಯಕ್ಷಿತೆ ತೋರಿಸಿದರು. ಡಾ. ರಾಮ್ ನಿವಾಸ್‌ ಸಪೆಟ್,ನಿರ್ದೇಶಕರು (ಭದ್ರತಾ & ಜಾಗೃತ) ಕವಿತಾ ಎಸ್ ಮನ್ನಿಕೇರಿ, ನಿರ್ದೇಶಕರು (‌ಸಿಬ್ಬಂದಿ & ಪರಿಸರ) ,ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ವಾರಂಟೈನ್ ನಿಯಮ ಪಾಲಿಸದವರಿಗೆ ಮಧ್ಯಪ್ರದೇಶ ಪೊಲೀಸರೊಂದು ಪಾಠ ಕಲಿಸಿದ್ರು: ಅದು ದೇಶಕ್ಕೇ ಮಾದರಿಯಾಗದಿದ್ದರೆ ಸಾಕು- ಅನ್ನಬಹುದೇನೋ ನಿಯಮ ಉಲ್ಲಂಘಕರು!

ಸಹಕಾರ ಸಚಿವರೇ, ಜನಪ್ರತಿನಿಧಿಗಳೇ… ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲನೆ ಬಗ್ಗೆ ಇಷ್ಟೇಕೆ ನಿರ್ಲಕ್ಷ್ಯ ಹೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
