ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ದೇವಾಲಯ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98.92 ಕೋಟಿ ರೂ.ಆದಾಯ ಗಳಿಸಿದ್ದು, ಇದು ಶತಕೋಟಿ ರೂ. ತಲುಪುವುದು ಕರೊನಾ ಹಾವಳಿಯಿಂದಾಗಿ ಸ್ವಲ್ಪದರಲ್ಲೇ ಮಿಸ್ ಆಗಿದೆ.
2019 ಏಪ್ರಿಲ್‌ನಿಂದ 2020 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ 6.83 ಕೋಟಿ ರೂ. ಅಧಿಕ ಆದಾಯ ಬಂದಿದೆ.
ಲಾಕ್‌ಡೌನ್‌ನಿಂದಾಗಿ ದೇವಸ್ಥಾನ ಫೆಬ್ರವರಿಯಿಂದ ಬಂದ್ ಆಗಿತ್ತು. ಈ ಬಾರಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆದಾಯ ಬರುತ್ತಿದ್ದರೆ ಅಥವಾ ದೇವಳದಲ್ಲಿ ಹುಂಡಿ ಎಣೆಕೆಯಾಗಿದ್ದರೂ, ದೇವಳದ ಆದಾಯ ನೂರು ಕೋಟಿ ತಲುಪುತ್ತಿತ್ತು. ಅಲ್ಪ ಪ್ರಮಾಣದಲ್ಲಿ ನೂರು ಕೋಟಿ ಆದಾಯ ಗಳಿಕೆ ಮಿಸ್ ಆಗಿದೆ.
ಇದನ್ನೂ ಓದಿ109 ವರ್ಷದ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಈ ಬಾರಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಎರಡು ತಿಂಗಳು ಭಕ್ತರ ಆಗಮನ ಕಡಿಮೆಯಾಗಿತ್ತು. ಹಾಗಿದ್ದರೂ ಈ ಆರ್ಥಿಕ ವರ್ಷದಲ್ಲಿ 6.83 ಕೋಟಿ ರೂ. ಅಧಿಕ ಆದಾಯ ಬಂದಿರುವುದು ಗಮನಾರ್ಹವಾಗಿದೆ.
2006-07ರಿಂದಲೂ ಈ ದೇವಸ್ಥಾನ ಅಧಿಕ ಆದಾಯ ಗಳಿಸುತ್ತಿದ್ದು, ಸತತ ಎಂಟನೇ ವರ್ಷ ರಾಜ್ಯದ ನಂಬರ್ ಒನ್ ಆದಾಯ ಗಳಿಕೆಯ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ32 ವರ್ಷದವರೂ ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ನೇಮಕಾತಿಗೆ ವಯೋಮಿತಿ ಹೆಚ್ಚಳ
ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 12 =
Remember me
