ಸುಬ್ರಹ್ಮಣ್ಯ:ಐದು ತಿಂಗಳ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸೇವೆಗಳು ಆರಂಭಗೊಂಡಿದ್ದು, ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬಂತು.
ಕೋವಿಡ್ ಮಾಗಸೂಚಿಗೆ ಅನುಗುಣವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಭಕ್ತರು ದೈಹಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ರಾತ್ರಿ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸರ್ಪಸಂಸ್ಕಾರ ಆರಂಭ:ಕ್ಷೇತ್ರದ ಪ್ರಮುಖ ಸೇವೆ ಸರ್ಪಸಂಸ್ಕಾರವನ್ನು ದಿನಕ್ಕೆ 30ರಂತೆ ನೆರವೇರಿಸಲು ಅವಕಾಶವಿದ್ದು, ಮೊದಲ ದಿನ ನಾಲ್ಕು ಸೇವೆ ನಡೆದಿದೆ. ಸೇವೆಯ ಪೂರ್ವಭಾವಿಯಾಗಿ ವ್ರತ ಕೈಗೊಳ್ಳಬೇಕಿರುವುದರಿಂದ ಮೊದಲ ದಿನ ಹೆಚ್ಚು ಸೇವೆ ನಡೆದಿಲ್ಲ. ಪ್ರತಿ ಸೇವೆಗೆ ಕುಟುಂಬದ ಇಬ್ಬರು ಮಾತ್ರ ಭಾಗವಹಿಸಬಹುದು. ಈ ಭಕ್ತರಿಗೆ ದೇವಳದಿಂದ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 2 ದಿನ ಉಳಿಯಲು ಅವಕಾಶವಿದೆ.
ಕ್ಷೇತ್ರದ ಮತ್ತೊಂದು ಪ್ರಮುಖ ಸೇವೆ ಆಶ್ಲೇಷ ಬಲಿಯನ್ನು ಎರಡು ಪಾಳಿಯಲ್ಲಿ ಭಕ್ತರು ನೆರವೇರಿಸಿದರು. ಪ್ರತಿ ಪಾಳಿಯಲ್ಲಿ 30ರಂತೆ ಒಟ್ಟು 60 ಸೇವೆ ಸಮರ್ಪಣೆಯಾಗಿದೆ. ಸಾಯಂಕಾಲ ನಡೆಯುತ್ತಿದ್ದ ಆಶ್ಲೇಷ ಬಲಿ ಸೇವೆ ಸದ್ಯ ಸ್ಥಗಿತಗೊಂಡಿದೆ.
ಇತರ ಸೇವೆಗಳ ವಿವರ:ನಾಗಪ್ರತಿಷ್ಠೆ 12, ಇಡೀ ದಿನದ ಮಹಾಪೂಜೆ 7, ಮಧ್ಯಾಹ್ನದ ಮಹಾಪೂಜೆ 7, ಕಲಶ ಪೂಜಾಯುಕ್ತ ಪಂಚಾಮೃತಾಭಿಷೇಕ 10, ಪವಮಾನಯುಕ್ತ ಪಂಚಾಮೃತಾಭಿಷೇಕ 10, ರುದ್ರಾಭಿಷೇಕ 17, ಪಂಚಾಮೃತಾಭಿಷೇಕ 27, ಕಾರ್ತಿಕ ಪೂಜೆ 338 ನಡೆಯಿತು.
3 ಸಾವಿರ ಭಕ್ತರಿಗೆ ಭೋಜನ:ಭಕ್ತರಿಗೆ ಹಾಳೆ ತಟ್ಟೆ ಮೂಲಕ ಬಫೆ ಮಾದರಿಯಲ್ಲಿ ಅನ್ನಪ್ರಸಾದ ವಿತರಿಸಲಾಗಿದ್ದು, ಸುಮಾರು ಮೂರು ಸಾವಿರ ಮಂದಿ ಸೋಮವಾರ ಭೋಜನ ಸ್ವೀಕರಿಸಿದರು. ಬಳಿಕ ಭೋಜನ ಶಾಲೆಯ ಸ್ಯಾನಿಟೈಸೇಶನ್, ಸ್ವಚ್ಛತೆ ಕಾರ್ಯ ನಡೆಯಿತು. ರಾತ್ರಿ ಭೋಜನ ಪ್ರಸಾದ ವಿತರಣೆ ಇರಲಿಲ್ಲ. ಸರ್ಪಸಂಸ್ಕಾರ ಸೇವಾರ್ಥಿಗಳಿಗೆ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಭೋಜನ ಶಾಲೆಯಲ್ಲಿ ಮಧ್ಯಾಹ್ನ ಭೋಜನ ಪ್ರಸಾದ ಮತ್ತು ಸಂಜೆಯ ಫಲಹಾರ ವಿತರಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
