ಮಂಗಳೂರು:ಕಂಬಳ ಕೂಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕುಕ್ಕುಂದೂರು ರವೀಂದ್ರ ಕುಮಾರ್ ಅವರ ಮುದ್ದಿನ ಕೋಣ ‘ಅಪ್ಪು’ ಮಂಗಳವಾರ ಸಾವನ್ನಪ್ಪಿದೆ.
ಅಪ್ಪುವಿಗೆ ಸುಮಾರು 22 ವರ್ಷ ವಯಸ್ಸಾಗಿದ್ದು, ಕಳೆದೊಂದು ವಾರದಿಂದ ಬೇಧಿಗೆ ಚಿಕಿತ್ಸೆ ನೀಡಿದರೂ, ಸ್ಪಂದಿಸದೆ ಮಂಗಳವಾರ ಮೃತಪಟ್ಟಿದೆ. ಮನೆಯವರು ಕುಟುಂಬ ಸದಸ್ಯರ ಶವಸಂಸ್ಕಾರದಂತೆ ಎಲ್ಲ ಮರ್ಯಾದೆ ಸಲ್ಲಿಸಿ, ಕಂಬಳ ಕೂಟದಲ್ಲಿ ಪಡೆದ ಶಾಲು ಗಂಧದ ಹಾರಗಳನ್ನು ಸಮರ್ಪಿಸಿದರು.
2006ರಲ್ಲಿ ರೆಂಜಾಳ ಬನಂದಬೆಟ್ಟುವಿನಿಂದ ಜ್ಯೂನಿಯರ್ ವಿಭಾಗಕ್ಕಾಗಿ ಅಪ್ಪುವನ್ನು ತಂದಿದ್ದೆವು. ನೇಗಿಲು ಕಿರಿಯ ವಿಭಾಗದಲ್ಲೇ 25 ಪದಕ ಪಡೆದಿದ್ದ, ಜತೆಗೆ ಹಗ್ಗ ಹಿರಿಯ, ಕಿರಿಯ, ನೇಗಿಲು ಕಿರಿಯ ವಿಭಾಗ ಸೇರಿದಂತೆ ಕಂಬಳ ಕೂಟದ ಎಲ್ಲ ವಿಭಾಗದಲ್ಲಿ ಪದಕ ಪಡೆದ ಹೆಗ್ಗಳಿಕೆ ಅಪ್ಪುವಿನದ್ದು. ಕಂಬಳ ಕೂಟದಲ್ಲಿ ತಾನು ಭಾಗವಹಿಸಿದ್ದ 6-7 ವರ್ಷದ ಅವಧಿಯಯಲ್ಲಿ ಪ್ರತಿ ವರ್ಷವೂ ಪದಕ ಪಡೆದು 40-42 ಪದಕ ತನ್ನದಾಗಿಸಿಕೊಂಡಿದ್ದ. ತೀರಾ ಸೌಮ್ಯ ಸ್ವಭಾವದನಾಗಿದ್ದು, ಸಣ್ಣ ಮಗು ಕರೆದುಕೊಂಡು ಹೋದರೂ ಹೋಗುತ್ತಿದ್ದ ಎನ್ನುತ್ತಾರೆ ರವೀಂದ್ರ ಕುಮಾರ್.
ಅಪ್ಪುವಿನ ಜತೆಗಾರನಾಗಿದ್ದ ಕಂಬಳ ಕೂಟದ ಬಂಗಾರದ ಜಿಂಕೆ ಎಂದೇ ಹೆಸರಾಗಿದ್ದ ‘ಕುಕ್ಕುಂದೂರ ಕಾಟಿ’ 2012ರಲ್ಲೇ ಮೃತಪಟ್ಟಿದ್ದ. ಕಾಟಿ 38 ಪದಕಗಳ ಸರದಾರನಾಗಿದ್ದ. ತನ್ನ ಜತೆಗಾರ ಮೃತಪಟ್ಟ ಹಿನ್ನೆಲೆಯಲ್ಲಿ 2012-13ರಲ್ಲೇ ಕಂಬಳದಿಂದ ನಿವೃತ್ತನಾಗಿದ್ದರೂ, ಕಳೆದ 8 ವರ್ಷದಿಂದ ಮನೆಮಂದಿ ತಮ್ಮ ಕುಟುಂಬದ ಸದಸ್ಯನಂತೆ ಆತನನ್ನು ಸಾಕಿ ಸಲಹಿದ್ದಾರೆ. ಇದುವೇ ತುಳುನಾಡಿನ ಕಂಬಳದ ವೈಶಿಷ್ಟೃ ಎನ್ನುತ್ತಾರೆ ಕಂಬಳ ತಜ್ಞ ವಿಜಯ್ ಕುಮಾರ್ ಕಂಗಿನ ಮನೆ.
ಅಪ್ಪು ಪ್ರಸ್ತುತ ಕಂಬಳ ಕಳದಲ್ಲಿ ಹೆಸರು ಪಡೆದಿರುವ ಚೆನ್ನ, ಗಂಗೆ ಮೊದಲಾದ ಕೋಣಗಳ ಸಮಕಾಲೀನ. ಜತೆಗಾರ ಮೃತಪಟ್ಟ ಹಿನ್ನೆಲೆಯಲ್ಲಿ ಆತನನ್ನು ಮನೆಯಲ್ಲೇ ಸಾಕುತ್ತಿದ್ದೆವು. ಕಂಬಳದಲ್ಲೇ ಇರುತ್ತಿದ್ದರೆ ಇನ್ನಷ್ಟು ಪದಕಗಳು ಆತನ ಮುಡಿಗೇರುತಿತ್ತು.ಕಕ್ಕುಂದೂರು ರವೀಂದ್ರ ಕುಮಾರ್, ಕೋಣದ ಮಾಲೀಕ, ಕಂಬಳ ತೀರ್ಪುಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
