ಬಾಗಲಕೋಟೆ: ತಡರಾತ್ರಿ ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದಿದ್ದ ವೃದ್ಧರೊಬ್ಬರು ಈಜಿ ದಡ ಸೇರಿರುವ ಘಟನೆ ಕುಳಲಿ ಗ್ರಾಮದಲ್ಲಿ ನಡೆದಿದೆ.
ಶಂಕರಪ್ಪ ಈಜಿ ದಡ ಸೇರಿದ ವೃದ್ದರು. ಇವರೊಂದಿಗೆ ಕಾಲುವೆಗೆ ಬಿದ್ದಿದ್ದ ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್ ಲಾಡಕಾನ್ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗೆ ಶೋಧ ನಡೆಯುತ್ತಿದ್ದೆ.
ಕುಳಲಿ ಗ್ರಾಮದ ಹೊಲದಲ್ಲಿ ಭಾನುವಾರ ರಾತ್ರಿ ಕೆಲಸ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಶಂಕರಪ್ಪ, ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್​ ಮನೆಗೆ ತೆರಳುತ್ತಿದ್ದರು. ಟ್ರ್ಯಾಕ್ಟರ್​ ಇಂಜಿನ್​ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿತ್ತು.
ಮೂವರು ನೀರಿನಲ್ಲಿ ಮುಳುಗಿದ್ದರು. ಶಂಕರಪ್ಪ ಈಜಿ ದಡ ಸೇರಿದರು. ಆದರೆ ಉಳಿದ ಇಬ್ಬರು ನಾಪತ್ತೆಯಾಗಿದ್ದಾರೆ. ಕಾಲುವೆಯಲ್ಲಿದ್ದ ಟ್ರ್ಯಾಕ್ಟರ್​ ಇಂಜಿನ್​ ಅನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಇಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
