ಶಿವಮೊಗ್ಗ:ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ಸಾಗುತ್ತಿದ್ದು, ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಅಧಿಕಾರ ಕೊಡುವ ಬಗ್ಗೆ ಮತದಾರರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಈ ಬೆನ್ನಲ್ಲೇ ಶಿವಮೊಗ್ಗ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾದ ಗೀತಾ ಶಿವರಾಜ್​ಕುಮಾರ್​ ಕುರಿತು ಕುಮಾರ್​ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ವಿಶ್ವ ಅಸ್ತಮಾ ದಿನ: ಅಸ್ತಮಾಕ್ಕೆ ಪ್ರತಿವರ್ಷ 4.55 ಲಕ್ಷ ಮಂದಿ ಬಲಿ
ಕಳೆದ ಹಲವಾರು ದಿನಗಳಿಂದ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಗೀತಾ ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್, ಮೇ.7 ಎಲೆಕ್ಷನ್ ಮುಗಿಯಲಿ, ಆಮೇಲೆ ದಿನದ 24 ಗಂಟೆ ಕೂಡ ಶಿವಮೊಗ್ಗಕ್ಕೆ ಬಂದು ಹಾಡಿ, ಕುಣಿಯುತ್ತೀನಿ ಎಂದು ಉತ್ಸಾಹದಿಂದ ಹೇಳಿದ್ದರು. ಸದ್ಯ ಈ ಹೇಳಿಕೆಯನ್ನು ಲೇವಡಿ ಮಾಡಿರುವ ಕುಮಾರ್​ ಬಂಗಾರಪ್ಪ, “ನೀವು ಅಷ್ಟಕ್ಕೂ ಡ್ಯಾನ್ಸ್ ಮಾಡಲೇಬೇಕು ಎಂದು ನಿರ್ಧರಿಸಿದ್ರೆ, ವರ್ಷಕ್ಕೊಮ್ಮೆ ನಡೆಯುವ ಚಂದ್ರಗುತ್ತಿ ಜಾತ್ರೆಯಲ್ಲಿ ಬಂದು ಕುಣಿಯಿರಿ, ಅದೇ ಸಾಕು” ಎಂದಿದ್ದಾರೆ.
“ನೀವು ಏನೇ ಮಾಡಿದ್ರೂ 100ಕ್ಕೆ 100 ಸೋಲೋದು ಖಂಡಿತ. ಶಿವಮೊಗ್ಗದಲ್ಲಿ ಗೀತಾ ಸೋಲುವುದು ಪಕ್ಕಾ” ಎಂದು ಗೀತಾ ಶಿವರಾಜ್​ ಕುಮಾರ್​ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
