ಬೆಂಗಳೂರು:: ಮಾಜಿಬಸಿಎಂ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
ಜ್ಯೋತಿಷ್ಯ ಹೇಳಲು ಯಾವಾಗ ಶುರು ಮಾಡಿದ್ರು ಎಂದು ಗೃಹ ಸಚಿವ ಡಾ.ಜಿ‌. ಪರಮೇಶ್ವರ ಕೇಳಿ ಕುತೂಹಲ ಕೆರಳಿಸಿದರು.ನಮಲ್ಲಿ ಯಾರಿಗೂ ಯಾವ ಅಸಮಾಧಾನ ಇಲ್ಲ. ನಾವೆಲ್ಲ  ಒಗ್ಗಟ್ಟಾಗಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.ಇದು ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಸಂಕ್ರಾಂತಿಗೆ ಸರ್ಕಾರ ಹೋಗುತ್ತದೆ ಎಂದು ಮಾತಾಡುತ್ತಾರೆ.ನಮ್ಮ ಶಾಸಕರ ನಡುವೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.ಡಿಜೆ ಹಳ್ಳಿ ಗೋಲಿಬಾರ್ ವರದಿ ಅಂಗೀಕಾರ ಕುರಿತ ಪ್ರಶ್ನೆಗೆ, ಬಿಜೆಪಿ ಸರ್ಕಾರ ಇದ್ದಾಗಲೇ ವರದಿ ಕೊಟ್ಟಿದ್ದರು.2022ರ ಡಿಸೆಂಬರ್‌ ನಲ್ಲೇ‌ ವರದಿ ಕೊಟ್ಟಿದ್ದರು. ಆ ವರದಿಯನ್ನು ಅವರೇ ಒಪ್ಪಿಕೊಂಡಿದ್ದರು.ಅವರು ಒಪ್ಪಿಕೊಂಡಿದ್ದನ್ನು ನಾವು ತಿರಸ್ಕರಿಸಲು ಆಗುತ್ತಾ? ಎಂದು ಪ್ರಶ್ನಿಸಿದರು.
ಶಿವಮೊಗ್ಗ ಪರಿಸ್ಥಿತಿ ನಿಯಂತ್ರಣ:ಶಿವಮೊಗ್ಗ ಗಲಭೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆತಂಕ ಪಡುವ ಅಗತ್ಯ ಇಲ್ಲ. ಕಾರಣ ಯಾರು ಅನ್ನೋದು ತನಿಖೆಯಾಗುತ್ತಿದೆ. ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿ ಕಳಿಸಿದ್ದೆವು. ಅವರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಎರಡೂ ಕಡೆಯಿಂದಲೂ ಕಲ್ಲು ಹೊಡೆದಿದ್ದಾರೆ.ಕೆಲವರ ಬಂಧನ ಆಗಿದೆ, ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದರು.ಹಿಂದೆಲ್ಲ ಇಂತಹ ಘಟನೆಗಳಾಗಿವೆ. ಹಿಂದೆ ಶಿವಮೊಗ್ಗದಲ್ಲಿ ಘಟನೆ ಆಗಿರ್ಲಿಲ್ವಾ..? ಆ ರೀತಿ ಹೇಳಿದ್ದಕ್ಕೆ ಅದನ್ನೇ ಟ್ವಿಸ್ಟ್ ಮಾಡುತ್ತಿದ್ದಾರೆ. ನಾವು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತಿದ್ದೇವೆ.ಕಾನೂನು ವಿರೋಧಿ ಕೆಲಸಗಳು ಆಗಬಾರದು. ಎಲ್ಲ ಕ್ರಮಗಳನ್ನು ಆಗಿಂದಾಗ್ಗೆ ಕೈಗೊಳ್ಳುತ್ತಿದ್ದೇವೆ.ವಿಪಕ್ಷದವ್ರು ಹೇಳುವುದನ್ನು ಹೇಳುತ್ತಿರುತ್ತಾರೆ. ಅವರುರು ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ.ಅಧಿಕಾರ ಹೋಗಿದೆ ಅಂತ ಅವರಿಗೆ ಬೇಸರ ಆಗಿದೆ. ಹಾಗಾಗಿ ಅವರು ಹಾಗೆಲ್ಲ ಮಾತಾಡುತ್ತಾರೆ.ಅವರು ಹೇಳಿದ್ದರಲ್ಲಿ ಸಲಹೆ ಇದ್ದರೆ ತಗೋತೇವೆ. ನಮ್ಮ ತಪ್ಪಿದ್ರೆ ತಿದ್ದಿಕೊಳ್ಳುತೇವೆ ಎಂದರು.ಬಿಹಾರದಂತೆ ಇಲ್ಲೂ ಜಾತಿ ಗಣತಿ ಅಂಗೀಕಾರ ಕುರಿತ ಪ್ರಶ್ನೆಗೆ ,ನಾವು ಚರ್ಚೆ ಮಾಡುವಾಗ ಅಭಿಪ್ರಾಯ ತಿಳಿಸುತ್ತೇನೆ‌.ನನ್ನ ಅಭಿಪ್ರಾಯ ಮುಖ್ಯ ಆಗುವುದಿಲ್ಲ.ಸರ್ಕಾರ ಇದರ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತದೆ.ವರದಿ ಬಗ್ಗೆಸಿಎಂ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡುತ್ತಾರೆ. ನಂತರ ಅಂತಿಮವಾಗಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.ಅಲ್ಲಿಯವರೆಗೆ ನಾವು ಕಾಯೋಣ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
