ಹಾಸನ:ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಕಲೇಶಪುರ ಶಾಸಕ ಹೆಚ್.ಕೆ ಕುಮಾರಸ್ವಾಮಿಯವರ ಹೆಂಡತಿ, ಜಿಲ್ಲಾ ಪಂಚಾಯತ್​ ಸದಸ್ಯೆ ಚಂಚಲಾ ಕುಮಾರಸ್ವಾಮಿ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇವರಷ್ಟೇ ಅಲ್ಲದೇ ಇವರ ಮಗಳಿಗೂ ಸೋಂಕು ತಗುಲಿದೆ. ಚಂಚಲಾ ಅವರು ಬೆಳಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯೆಯಾಗಿದ್ದಾರೆ.
ತಮ್ಮ ಮೊದಲ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್‌ ಬಂದಿದೆ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಬೇರೆ ಮನೆಗೆ ಸ್ಥಳಂತಾರಗೊಂಡಿದ್ದು, ಒಂದು ವಾರ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತೇನೆ. ಹೋಂ ಕ್ವಾರಂಟೈನ್‌ನಲ್ಲಿ ಇರುವ ಕಾರಣ, ಸಾರ್ವಜನಿಕರು,, ಪಕ್ಷದ ಕಾರ್ಯಕರ್ತರು ಅಗತ್ಯವಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸುವಂತೆ ಶಾಸಕ ಹೆಚ್.ಕೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನಟಿ ಸಾರಾ ಅಲಿಖಾನ್ ಡ್ರೈವರ್​ಗೆ ಕರೊನಾ; ಆತಂಕದಲ್ಲಿ ಸೈಫ್​ ಅಲಿಖಾನ್​ ಕುಟುಂಬ
ಇದೇ ವೇಳೆ ಚಂಚಲಾ ಅವರು ಹೇಳಿಕೆ ನೀಡಿದ್ದು, ತಾವು ಚೆನ್ನಾಗಿ ಇರುವುದಾಗಿ ಹೇಳಿದ್ದಾರೆ. ಸದ್ಯ ವೈದ್ಯೆಯಾಗಿರುವ ತಮ್ಮ ಮಗಳ ಮನೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ‘ನನ್ನ ಮಗಳು ವೈದ್ಯೆಯಾಗಿದ್ದು, ಆಸ್ಪತ್ರೆಗೆ ಹೋಗುತ್ತಿದ್ದಾಳೆ. ಅಲ್ಲಿಂದಲೇ ಬಹುಶಃ ಸೋಂಕು ತಗುಲಿರುವ ಸಾಧ್ಯತೆ ಇದೆ. ನಾನು ಅವಳ ಸಂಪರ್ಕಕ್ಕೆ ಬಂದಿರುವ ಕಾರಣ, ನನಗೂ ಸೋಂಕು ತಗುಲಿರಬಹುದು’ ಎಂದಿದ್ದಾರೆ. ಯಾವುದಾದರೂ ಕೆಲಸವಿದ್ದರೆ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.
ಚಂಚಲಾ ಅವರ ಸಂರ್ಪಕ್ಕೆ ಬಂದಿರುವ ಎಲ್ಲರನ್ನೂ ಪ್ರತ್ಯೇಕವಾದ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಕುಮಾರಸ್ವಾಮಿ ಅವರ ಕಾರು ಚಾಲಕನಿಗೂ ಕರೊನಾ ಪಾಸಿಟಿವ್‌ ಬಂದಿದೆ. ಕಳೆದ ವಾರ ಆಲೂರಿನಲ್ಲಿ ಕುಮಾರಸ್ವಾಮಿ ಹಾಗೂ ಅವರ ಆಪ್ತ ಸಹಾಯಕ, ಗನ್ ಮ್ಯಾನ್ ಸೇರಿದಂತೆ ಒಟ್ಟು 11 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಅವರ ಚಾಲಕನಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 9 =
Remember me
