ಕೆ.ಆರ್.ಪೇಟೆ:ಅಂಬಿಗರಹಳ್ಳಿ-ಸಂಗಾಪುರ-ಪುರ ಗ್ರಾಮಗಳ ತ್ರಿವೇಣಿ ಸಂಗಮ ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುವಂತೆ ಸರ್ಕಾರಿ ಆದೇಶ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಿಸಿದರು. ತ್ರಿವೇಣಿ ಸಂಗಮದಲ್ಲಿ ಭಾನುವಾರ ಆಯೋಜಿಸಿದ್ದ ಮಹಾ ಕುಂಭಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ಇಲ್ಲಿ ನಿತ್ಯವೂ ಧಾರ್ವಿುಕ ಕೈಂಕರ್ಯ ನಡೆಯಲು ಹಾಗೂ ಸಂಗಮದ ಅಭಿವೃದ್ಧಿಗೆ ಅಗತ್ಯ ಅನುದಾನದ ಭರವಸೆ ನೀಡಿದರು.
ಶಂಕರಾಚಾರ್ಯರು ಕುಂಭಮೇಳ ಆರಂಭಿಸಿ, ಸ್ಪಷ್ಟತೆ, ವೈಚಾರಿಕತೆ, ನಿಖರತೆ ಕೊಟ್ಟವರು. ಅವರಿಲ್ಲದಿದ್ದರೆ ಹಿಂದು ಧರ್ಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿತ್ತು. ಭಾರತದ ಮಣ್ಣು ಶ್ರೇಷ್ಠವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದರೆ ಮತ್ತೆ ಪಾಪ ಮಾಡಲು ಮನಸ್ಸಾಗುವುದಿಲ್ಲ. ಅದಕ್ಕಾಗಿಯೇ ಕುಂಭಮೇಳ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.
ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ದಕ್ಷಿಣ ಭಾರತದಲ್ಲಿ ಇದು ಎರಡನೇ ಕುಂಭಮೇಳವಾಗಿದೆ. ಸಿಎಂ ಬೊಮ್ಮಾಯಿ ಅಗತ್ಯ ಅನುದಾನ ನೀಡಿ ಕುಂಭಮೇಳದ ಯಶಸ್ಸಿಗೆ ಸಹಕರಿಸಿದ್ದಾರೆ ಎಂದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಕೋವಿಡ್ ಹಾಗೂ ಪ್ರವಾಹವನ್ನು ಕುಂಭಮೇಳ ಮರೆಸಿದೆ. ಕಷ್ಟಗಳ ನಿವಾರಣೆಗಾಗಿ ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಆಗಿರುವ ಅನಾಹುತಗಳನ್ನು ಸರಿಪಡಿಸಲು ಭರವಸೆ ನೀಡಬೇಕು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಸಿಎಂ ಬಳಿ ಮನವಿ ಮಾಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ವಿನಯ್ ಗುರೂಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಮಾದರಚನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಗುಜರಾತಿನ ಹಿಂದು ಧರ್ಮ ಆಚಾರ್ಯ ಸಭಾದ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ ಮತ್ತಿತರರು ಇದ್ದರು.
ಲಕ್ಷಾಂತರ ಭಕ್ತರು ಭಾಗಿ:ಕುಂಭಮೇಳದ ಕೊನೆಯ ದಿನವಾದ ಭಾನುವಾರ ಲಕ್ಷಾಂತರ ಭಕ್ತರು ಪುಣ್ಯಸ್ನಾನದಲ್ಲಿ ಮಿಂದೆದ್ದರು. ಶ್ರೀ ಮಲೆಮಹದೇಶ್ವರರು ಶ್ರೀಶೈಲದಿಂದ ಬಂದಾಗ ಪಾದಸ್ಪರ್ಶ ಮಾಡಿದ ಪವಿತ್ರ ಸ್ಥಳವಾದ ತ್ರಿವೇಣಿ ಸಂಗಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪುಣ್ಯಸ್ನಾನ ಮಾಡಿ ಧನ್ಯತಾಭಾವ ಅನುಭವಿಸಿದರು.
ಕುಂಭಕಳಸ ಹೊತ್ತ ಮಹಿಳಾ ಅಧಿಕಾರಿಗಳು:ಧಾರ್ವಿುಕ ವಿಧಿ ವಿಧಾನ ಮುಗಿದ ನಂತರ ಪ್ರತಿಷ್ಠಾಪಿಸಿದ ದೈವಿ ಕಳಸವನ್ನು ಡಿಸಿ ಅಶ್ವಥಿ, ಜಿಪಂ ಸಿಇಒ ಶಾಂತ ಹುಲ್ಮನಿ, ತಹಸೀಲ್ದಾರ್ ಎಂ.ವಿ. ರೂಪಾ ಮೆರವಣಿಗೆ ಮೂಲಕ ತ್ರಿವೇಣಿ ನದಿಗೆ ಹೊತ್ತು ತಂದು ವಿಸರ್ಜನೆ ಮಾಡಿದರು. ಸಚಿವ ಕೆ.ಸಿ. ನಾರಾಯಣಗೌಡರ ಪತ್ನಿ ದೇವಕಿ ಹಾಗೂ ಪುತ್ರಿ ಲೀನಾ ಕೂಡ ಕಳಸ ಹೊತ್ತಿದ್ದರು.
ತಡವಾಗಿ ಬಂದ ಸಚಿವ:ನಾಗಮಾಲೆ ಯಾಗ ಶಾಲೆಯಲ್ಲಿ ಮಹಾಕುಂಭಕ್ಕೆ ನಡೆದ ಹೋಮ ಹವನ ಕಾರ್ಯಕ್ಕೆ ಸಚಿವ ನಾರಾಯಣಗೌಡ ಗೈರಾಗಿದ್ದರು. ಪೂಜೆ-ಪುನಸ್ಕಾರ, ಹೋಮ- ಹವನ, ಪೂರ್ಣಾಹುತಿ ಮುಗಿದ ನಂತರ ಕುಂಭಪೂಜೆಗೆ ಸಚಿವರು ಪತ್ನಿ, ಪುತ್ರಿ, ಅಳಿಯನ ಜತೆ ಆಗಮಿಸಿದರು. ನಂತರ ವಿಸರ್ಜನೆಯಲ್ಲಿ ಕುಟುಂಬ ಸಮೇತ ಪಾಲ್ಗೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೇತೃತ್ವ ವಹಿಸಿದ್ದರು.
ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ.:ಮಳವಳ್ಳಿ ತಾಲೂಕಿನಲ್ಲಿ ಮನೆಪಾಠದ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. ಮನುಷ್ಯತ್ವವಿಲ್ಲದವ ಮಾತ್ರ ಇಂತಹ ಕೃತ್ಯ ಮಾಡಲು ಸಾಧ್ಯ. ಏನೂ ತಿಳಿಯದ ಆ ಕಂದಮ್ಮನ ಪರಿಸ್ಥಿತಿ ನೆನೆದರೆ ಕರುಳು ಕಿತ್ತು ಬರುತ್ತದೆ. ವಿಶೇಷ ಪೋಕ್ಸೋ ಕೋರ್ಟ್​ನಲ್ಲಿ ವಿಚಾರಣೆ ಮಾಡಿ ಉಗ್ರ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ರೂಪಾಯಿ ಕುಸಿತವಾಗುತ್ತಿಲ್ಲ, ಡಾಲರ್ ಸಶಕ್ತವಾಗುತ್ತಿದೆ: ಹಣದುಬ್ಬರವನ್ನು ಹೀಗೆ ಸಮರ್ಥಿಸಿಕೊಂಡ ವಿತ್ತಸಚಿವೆ

ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
