ಕಾರವಾರ:ಜಿಲ್ಲೆಯಲ್ಲಿ ಹವಾಮಾನ ಇಲಾಖೆ‌ ಮುನ್ಸೂಚನೆ ತಲೆಕೆಳಗಾಗಿದ್ದು, ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿತ್ತು. ಆದರೆ, ನಿರಂತರವಾಗಿ ಮಳೆ ಸುರಿದ ಪರಿಣಾಮ ಕಾರವಾರ, ಶಿರಸಿ ಸೇರಿದಂತೆ ಕೆಲವು ನಗರ ಪ್ರದೇಶಗಳು ಜಲಾವೃತಗೊಂಡಿವೆ. ನೆರೆಯ ಪರಿಸ್ಥಿತಿ ಉಂಟಾಗಿದೆ.‌
ಇದನ್ನೂ ಓದಿ:ಈ ಫೋಟೋದಲ್ಲಿರುವ ಕ್ರಿಕೆಟಿಗನ ನೆನಪಿದೆಯೇ? ಈತ ವಿಕೆಟ್ ಕೀಪಿಂಗ್ ಮಾಡುವ ಎಡಗೈ ಬ್ಯಾಟ್ಸ್‌ಮನ್…
ಕುಮಟಾ ಕತಗಾಲ ಬಳಿ ರಾಷ್ಟ್ರೀಯ ಹೆದ್ದಾರಿ 766ಇ’ನಲ್ಲಿ ನೀರು ನಿಂತಿದ್ದು, ಶಿರಸಿ-ಕುಮಟಾ ವಾಹನ ಸಂಚಾರ ಸ್ಥಗಿತವಾಗಿದೆ. ಶಿರಸಿ ಕುಮಟಾ ಮಾರ್ಗದಲ್ಲಿ ಉದ್ಯೋಗಕ್ಕೆ ತೆರಳುವವರು, ಬೆಂಗಳೂರು ಕಡೆಯಿಂದ ಬಂದ ಬಸ್​ಗಳು ಬೆಳಗ್ಗೆ 10ರವರೆಗೂ ನಿಂತು ಕೊಂಡಿದ್ದವು. ಎರಡೂ ಕಡೆ ಕಿ.ಮೀಗಟ್ಟಲೇ ದೂರ ವಾಹನಗಳು‌ ನಿಂತಿವೆ.
ಗುಂಡಬಾಳ ಹೊಳೆಗೆ ನೆರೆ: ಗುಂಡಬಾಳ ಹೊಳೆ ಉಕ್ಕಿ ಹರಿದಿದ್ದು, ಹೊಳೆಯ ಇಕ್ಕೆಲಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಶಾಲೆಗಳಿಗೆ ರಜೆ ಘೋಷಣೆ:ಈ ಭಾಗದ ಜನತಾ ವಿದ್ಯಾಲಯ ಅನಿಲಗೋಡ್, ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ, ಗುಂಡ ಬಾಳ ನಂ-2, ಗುಂಡಿ ಬೈಲ್ ನಂ 2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ ವಲ್ಕಿ, ಕಿರಿಯ ಪ್ರಾಥಮಿಕ ಶಾಲೆ ಗಂಜಿಗೆರೆ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಇದನ್ನೂ ಓದಿ:ಎಚ್ಚರ! ಹೆಚ್ಚಾಗ್ತಿದೆ ಡೆಂಘೆ ಹಾವಳಿ… ಯಾಮಾರಿದ್ರೆ ಜೀವಕ್ಕೇ ಕುತ್ತು
ಕಾಳಜಿ ಕೇಂದ್ರ:ಗುಂಡ ಬಾಳ ನದಿಗೆ ನೆರೆ ಬಂದು ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ ಮತ್ತು ಹಿತ್ತಲಕೇರಿ ಮಜೇರಿಯ ಮನೆಗಳಿಗೆ ನೀರು ನುಗ್ಗಿದ್ದು, ಈ ಮನೆಯಲ್ಲಿ ವಾಸ್ತವ್ಯ ಇರುವ ಜನರನ್ನು, ಜಿಲ್ಲಾಡಳಿತದ ವತಿಯಿಂದ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕರೆತಂದು ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಅಘನಾಶಿನಿ ನದಿ ನೀರಿನ ಹರಿವು ತೀವ್ರವಾಗಿದ್ದು, ನೀರು ನದಿಯ ಮಟ್ಟಕ್ಕಿಂತ ಮೇಲೆ ಬರುತ್ತಿದ್ದು, ನದಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕಾರಣ ಐಗಳಕುರ್ವೆ ಗ್ರಾಮದ ಸಾರ್ವಜನಿಕರಿಗೆ ಕಾಳಜಿ ಕೇಂದ್ರಕ್ಕೆ ಬರುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಮಳೆ:ಸಿದ್ದಾಪುರ ತಾಲೂಕಿನ ದೊಡ್ಮನೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಎಂದರೆ 366 ಮಿಮೀ ಮಳೆಯಾಗಿದೆ. ವಾಜಗೋಡು, ಕೋಡ್ಕಣಿ ಹಲಗೇರಿಯಲ್ಲಿ 266 ಮಿಮೀ ಮಳೆ ದಾಖಲಾಗಿದೆ. ಅಘನಾಶಿನಿ ನದಿಯಲ್ಲಿ ಕುಮಟಾ ಭಾಗದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ.
ಕಳಪೆ ಫಾರ್ಮ್​​ ದಿನಗಳನ್ನು ನೆನೆದು ದ್ರಾವಿಡ್​ ಮುಂದೆ ವಿರಾಟ್​​​ ಭಾವುಕ! ಹೇಳಿಕೊಂಡ ಮಾತುಗಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
