ಮೈಸೂರು:ನೂರು ಇಲಿಗಳು ಆಳುವ ಬದಲು ಒಂದು ಹುಲಿ ನಮ್ಮನ್ನು ಆಳಿದರೆ ಸಾಕು. ನಮ್ಮ ಸಮುದಾಯದ ಬಿ.ಎಸ್​.ಯಡಿಯೂರಪ್ಪ ರಾಜಾಹುಲಿ. ಅವರ ಪುತ್ರ ಮರಿ ರಾಜಾಹುಲಿ. ಅವರ ಕೈಯಲ್ಲಿ ನಮ್ಮ ಭವಿಷ್ಯ ಸುರಕ್ಷಿತ ಎಂದು ಕುಂದೂರು ಮಠದ ಡಾ. ಶರತ್​ಚಂದ್ರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ರಜತ ಮಹೋತ್ಸ ಪ್ರಯುಕ್ತ ನಗರದ ಸುತ್ತೂರು ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸಂಕಲ್ಪ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಶ್ರೀಗಳು, ಬಿ.ವೈ.ವಿಜಯೇಂದ್ರರ ಕೈಯಲ್ಲಿ ನಮ್ಮ ಭವಿಷ್ಯ ಸುರಕ್ಷಿತವಾಗಿದೆ ಎಂದರು.
ಬಸವಣ್ಣ ಅವರ ಸಮುದಾಯದಲ್ಲಿ ಹುಟ್ಟಿದವರು ನಾವು ಎಂಬುದಕ್ಕೆ ಹೆಮ್ಮೆ ಇದೆ. ಆದರೆ ಅದರ ಪೇಟೆಂಟ್​ ಇಟ್ಟುಕೊಂಡು ಕುಳಿತರೆ ಸಾಲದು, ಬಸವಣ್ಣರ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು. 365 ದಿನ ಬಸವ ಮಾರ್ಗದಲ್ಲಿ ಸಾಗದೆ, ಕೇವಲ ಒಂದು ದಿನ ಬಸವ ಜಯಂತಿ ಆಚರಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಯುವಜನರು ಎತ್ತ ಸಾಗುತ್ತಿದ್ದಾರೆ ಎಂಬುದು ಗುರುಗಳಿಗೆ ಗೊತ್ತಾಗುತ್ತಿಲ್ಲ. ಯುವಜನರ ಸಮಸ್ಯೆ ಏನು ಎಂಬುದನ್ನು ಗುರುತಿಸುತ್ತಿಲ್ಲ. ಆದರೆ ಪರಿಹಾರದ ಹುಡುಕಾಟದಲ್ಲಿ ನಿರತವಾಗಿದ್ದೇವೆ. ಯುವಜನರಿಗೆ ಮಾರ್ಗದರ್ಶನ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಏಕೆಂದರೆ ಅವರು ನಮ್ಮ ಸಮುದಾಯದ ಭವಿಷ್ಯ. ಭತ್ತವನ್ನು ಹದವಾಗಿ ಕುಟ್ಟಿದರೆ ಮಾತ್ರ ಅಕ್ಕಿ ದೊರೆಯುತ್ತದೆ, ಇಲ್ಲವಾದರೆ ನುಚ್ಚಾಗುತ್ತದೆ. ಅದೇ ರೀತಿ ಯುವಜನರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಮಾತ್ರ ಅಕ್ಕಿ ಆಗುತ್ತಾರೆ, ಇಲ್ಲವಾದರೆ ನುಚ್ಚಾಗುತ್ತಾರೆ ಎಂದು ಎಚ್ಚರಿಸಿದರು.
ಐಎಎಸ್​, ಐಪಿಎಸ್​ ಅಧಿಕಾರಿಗಳು, ಸಾಹಿತ್ಯ, ಶಿಕ್ಷಣ, ಸಿನಿಮಾ, ಉದ್ಯಮ, ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲೂ ನಮ್ಮ ಸಮುದಾಯದವರು ಕ್ಷೀಣಿಸುತ್ತಿದ್ದಾರೆ. ಪ್ರಸ್ತುತ ಸಮುದಾಯದಲ್ಲಿ ಶೂನ್ಯಾವಸ್ಥೆ ಕಾಡುತ್ತಿದೆ. ಮಾರ್ಗದರ್ಶನ ಮಾಡಬೇಕಾದ ಮಠಗಳು ಕೂಡ ಸಮಸ್ಯೆಗೆ ಸಿಲುಕಿವೆ ಎಂಬ ಸತ್ಯವನ್ನು ನಾವೆಲ್ಲರೂ ಒಪ್ಪಬೇಕು. ಆದರೆ, ವೀರಶೈವ ಲಿಂಗಾಯತ ಸಮುದಾಯದ ಜೀವ ಮಠದಲ್ಲಿ ಇದೆ. ಸುತ್ತೂರು, ಸಿದ್ಧಗಂಗಾದಂತಹ ಮಠಗಳು ಇಲ್ಲದೆ ಹೋಗಿದ್ದರೆ ಕೋಟಿ ಕೋಟಿ ಮನೆಗಳಲ್ಲಿ ದೀಪ ಉರಿಯುತ್ತಿರಲಿಲ್ಲ. ಹಾಗಾಗಿ, ಮಠಗಳನ್ನು ಉಳಿಸಬೇಕು. ಮಠ ಉಳಿಸುವ ಸಂಕಲ್ಪವನ್ನು ಯುವಜನರು ತೊಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಭೂತಿಪುರದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ನಿರಂಜನ್​ ಕುಮಾರ್​, ಮಹಾಸಭಾ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಾಂತೇಶ್​ ಪಾಟೀಲ್​, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್​ ಬಿ. ಅಬ್ಬಿಗೆರೆ, ಮಹಾಸಭಾ ಅಧ್ಯಕ್ಷ ಎಲ್​.ಎಸ್​. ಮಹದೇವಸ್ವಾಮಿ ಲಲಿತಾದ್ರಿಪುರ ಇತರರು ಇದ್ದರು.
ಪತ್ನಿಯನ್ನ 10 ವರ್ಷ ಬಲವಂತವಾಗಿ ಪರಪುರುಷರೊಂದಿಗೆ ಮಲಗಿಸಿ ಗಂಡ ಕೊಟ್ಟ ಕಾಟ ಅಷ್ಟಿಷ್ಟಲ್ಲ! ಅಕ್ಕ-ತಂಗಿಯ ನೋವಿನ ಕಥೆ ಇಲ್ಲಿದೆ

ಡಿ.16ರಂದು ಶ್ರೀನಿವಾಸ ಕಲ್ಯಾಣೋತ್ಸವ: ಎಚ್​ಡಿಕೆ ಹುಟ್ಟುಹಬ್ಬದ ದಿನದಂದೇ ರಾಮನಗರದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
