ತುಮಕೂರು:ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತವಾಗಿ ಆಪರೇಷನ್​ ಮಾಡುವ ಮೂಲಕ ಕುಣಿಗಲ್​ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ ಅವರು ಜನರ ಮನ ಗೆದ್ದಿದ್ದಾರೆ.
ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬವರು ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ತಮ್ಮ ಕ್ಷೇತ್ರದ ಶಾಸಕರಾಗಿರುವ ರಂಗನಾಥ್​ ಅವರ ಬಳಿ ಹಣ ಸಹಾಯ ಕೋರಿದ್ದರು.
ಇದನ್ನೂ ಓದಿ:ಸಹೋದರನ ಆರೈಕೆಗೆ ನೇಮಿಸಿದ ಮಹಿಳೆಯಿಂದ ಯುವಿ ತಾಯಿಗೆ ಬೆದರಿಕೆ: ವಂಚಕಿ ಸಿಕ್ಕಿಬಿದ್ದಿದ್ದೇ ರೋಚಕ!
ಸ್ವತಃ ವೈದ್ಯರಾಗಿರುವ ಡಾ. ರಂಗನಾಥ್​, ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಸ್ಪಂದಿಸಿದರು. ತಾವೇ ಖುದ್ದಾಗಿ ಆಪರೇಷನ್ ಮಾಡಲು ಮುಂದಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಿವನಂಜಯ್ಯ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.
ಈ ಹಿಂದೆ ರಂಗನಾಥ್​ ಅವರು ಬಡ ಮಹಿಳೆಯೊಬ್ಬಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮನೆ ಮಾತಾಗಿದ್ದರು.(ದಿಗ್ವಿಜಯ ನ್ಯೂಸ್​)
ತನಗಿಂತ 46 ವರ್ಷ ಚಿಕ್ಕವನ ಜತೆ ಮದುವೆ! 2 ವರ್ಷದ ಬಳಿಕ 83ರ ವೃದ್ಧೆಯ ಪಶ್ಚಾತಾಪದ ಮಾತುಗಳು

ಅವಿಶ್ವಾಸ ನೋಟಿಸ್ ಸ್ವೀಕಾರ; ಸದನ ಮುಂದುವರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
