ತುಮಕೂರು:ಹರಾಜಿನಲ್ಲಿ ನಂದಿಧ್ವಜ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕುಣಿಗಲ್​ನ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಹಾಲಿ ಶಾಸಕ ಡಾ. ರಂಗನಾಥ್​ ಅವರು ನಂದಿಧ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜದ ಹರಾಜು ನಡೆಯಿತು. ಕಾಂಗ್ರೆಸ್​ನ ಮಾಜಿ ಶಾಸಕ ರಾಮಸ್ವಾಮಿಗೌಡ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ನಡುವೆ ಧ್ವಜಕ್ಕಾಗಿ ಭಾರೀ ಪೈಪೋಟಿ ನಡೆಯಿತು.
ಇದನ್ನೂ ಓದಿ:ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್; ಮನನೊಂದು ಪ್ರಾಣ ಕಳೆದುಕೊಳ್ಳಲು ಮುಂದಾದ ಅಭಿಮಾನಿ
ಈ ಹಿಂದೆ 5 ರಿಂದ 10 ಲಕ್ಷ ರೂ.ಗೆ ಮಾರಾಟವಾಗುತ್ತಿದ್ದ ನಂದಿಧ್ವಜ, ಈ ಬಾರಿ 16 ಲಕ್ಷ ರೂ.ಗೆ ಮಾರಾಟವಾಗಿದೆ. ಪ್ರತಿ ಬಾರಿ ನಂದಿ ಧ್ವಜ ಗೆದ್ದವರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂಬ ನಂಬಿಕೆ ಇದೆ. ಈ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂರುತ್ತಿದೆ.
ಕಳೆದ ಬಾರಿಯು ನಂದಿ ಧ್ವಜವನ್ನು ರಂಗನಾಥ್​ ಗೆದ್ದಿದ್ದರು. ಬಳಿಕ ಕುಣಿಗಲ್ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು. ಅದೇ ರೀತಿ ಈ ಬಾರಿಯ ಹರಾಜಿನಲ್ಲೂ 16 ಲಕ್ಷ ರೂ.ಗೆ ನಂದಿಧ್ವಜವನ್ನು ಗೆದ್ದಿದ್ದಾರೆ. ಈ ಬಾರಿಯು ಕುಣಿಗಲ್​ನಿಂದ ಅವರೇ ಶಾಸಕರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​)
ಸ್ನೇಹಿತನಿಂದಲೇ ನಂಬಿಕೆ ದ್ರೋಹ: ಮನನೊಂದು ಜೀವನ ಕೊನೆಗೊಳಿಸಿದ ಬಿ.ಟೆಕ್​ ವಿದ್ಯಾರ್ಥಿನಿ

ಹೆಸರಿಗೆ ಬ್ಯೂಟಿ ಪಾರ್ಲರ್​ ಆದ್ರೆ ಮಾಡ್ತಿದ್ದದ್ದು ನೀಚ ಕೃತ್ಯ: ಕಿಲಾಡಿ ಲೇಡಿಯ ಬ್ಯಾಗಲ್ಲಿತ್ತು ಅಕ್ರಮದ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
