ಕುಣಿಗಲ್​:ತಾಲೂಕಿನ ಹೇರೂರು ಗ್ರಾಮದಲ್ಲಿ ಇತ್ತೀಚಿಗೆ ರೈತರೊಬ್ಬರ 700 ಅಡಕೆ-ತೆಂಗಿನ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕತ್ತರಿಸಿ ಹಾಕಿದ್ದರು. ಇನ್ನೆರಡು ವರ್ಷದಲ್ಲಿ ಫಸಲು ಬಿಡುವ ಹಂತಕ್ಕೆ ಬಂದ್ದಿದ್ದ ಮರಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತನಿಗೆ ಪಿಎಸ್​ಐ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಸಾಂತ್ವನ ಹೇಳಿದ್ದಾರೆ.
ರೈತ ನಾಗರಾಜ ಅವರ ತೋಟದಲ್ಲಿ ನಳನಳಿಸುತ್ತಿದ್ದ ಅಡಕೆ-ತೆಂಗು-ಬಾಳೆ ಗಿಡಕ್ಕೆ ಆ.18ರ ರಾತ್ರಿ ಕತ್ತಿ ಬೀಸಿದ ಕಿಡಿಗೇಡಿಗಳು ಎಲ್ಲ ಮರಗಳನ್ನೂ ತುಂಡರಿಸಿ ಹೋಗಿದ್ದರು. ಈ ಬಗ್ಗೆ ಕುಣಿಗಲ್​ ಪಟ್ಟಣ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ತೋಟ ಕಳೆದುಕೊಂಡು ಕಣ್ಣೀರಿಡುತ್ತಿದ್ದ ನಾಗರಾಜು ಅವರ ಬಗ್ಗೆ ಮರುಕಪಟ್ಟ ಕುಣಿಗಲ್ ಪಿಎಸ್ಐ ವಿಕಾಸ್ ಗೌಡ ಮತ್ತು ಇವರ ಸ್ನೇಹಿತ ಎಚ್​.ಡಿ. ಕೋಟೆಯ ಶ್ರೀರಾಮ್ ಇಬ್ಬರೂ ಸಂತ್ರಸ್ತನ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ.
ಇದನ್ನೂ ಓದಿರಿಕನ್ನಡಿಗರನ್ನು ಕೆಣಕಿದ ಮಹಾರಾಷ್ಟ್ರ ಪುಂಡರಿಗೆ ಲಾಠಿಏಟು!
ತೋಟ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಏನಾದರೂ ಕೈಲಾದ ಸಹಾಯ ಮಾಡಲು ಯೋಚಿಸಿದ ಪಿಎಸ್​ಐ ಎಸ್​. ವಿಕಾಸ್​ ಗೌಡ ಅವರು ಶ್ರೀರಾಮ್​ರ ಮೂಲಕ ಬರೋಬ್ಬರಿ 650 ಅಡಕೆ ಸಸಿ, 10 ತೆಂಗಿನ ಸಸಿಗಳನ್ನು ಕೊಡಿಸಿದ್ದಾರೆ. ಎಚ್​.ಡಿ. ಕೋಟೆಯಿಂದಲೇ ವಾಹನದಲ್ಲಿ ರೈತನ ಮನೆ ಬಾಗಿಲಿಗೆ ಗಿಡಗಳನ್ನು ಕಳುಹಿಸಿಕೊಡಲಾಗಿದೆ. ಆ ಮೂಲಕ ಮತ್ತೆ ರೈತನ ಬದುಕಲ್ಲಿ ಭರವಸೆಯ ಬೆಳಕನ್ನು ಚೆಲ್ಲಿದ್ದಾರೆ. ಪಿಎಸ್​ಐ ಮತ್ತು ಅವರ ಸ್ನೇಹಿತನ ಮಾನವೀಯತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೊಲೀಸ್​ ವೃತ್ತಿ ಕಾನೂನು ಸುವ್ಯವಸ್ಥೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗುವುದನ್ನು ಕಲಿಸಿದೆ. ಈ ನಿಟ್ಟಿನಲ್ಲಿ ನಾಗರಾಜು ಅವರಿಗೆ ಅಡಕೆ- ಮತ್ತು ತೆಂಗಿನ ಸಸಿಗಳನ್ನು ಕೊಡಿಸಲಾಗಿದೆ. ಇದಕ್ಕೆ ಸಹಕಾರ ನೀಡಿದ ರೈತ ಶ್ರೀರಾಮ್ ಅವರಿಗೆ ಧನ್ಯವಾದ ಎಂದು ಪಿಎಸ್​ಐ ವಿಕಾಸ್​ ಗೌಡ ತಿಳಿಸಿದ್ದಾರೆ.  ತೋಟ ನಾಶ ಮಾಡಿದ ಕಿಡಿಗೇಡಿಗಳು ಸದ್ಯ ಕಂಬಿ ಎಣಿಸುತ್ತಿದ್ದಾರೆ.
video/ ರೈತನ 700 ಅಡಕೆ, ತೆಂಗು, ಬಾಳೆ ಗಿಡಗಳನ್ನು ರಾತ್ರೋರಾತ್ರಿ ಕತ್ತರಿಸಿದ ದುಷ್ಕರ್ಮಿಗಳು!

video/ ಪ್ರಜ್ವಲ್ ರೇವಣ್ಣನ ಕಾಲಿಗೆ ಬಿದ್ದ ಮಧುಗಿರಿ ಶಾಸಕ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 10 =
Remember me
