ಬೆಂಗಳೂರು:ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಅಚ್ಚರಿಯ ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ವಿದ್ಯಾರ್ಥಿನಿ ತಬಸುಮ್​ ಶೇಖ್​ರನ್ನು ಕುಶು ನಾಯ್ಕ್​ ಮರು ಮೌಲ್ಯಮಾಪನದಲ್ಲಿ ಹಿಂದಿಕ್ಕಿದ್ದಾರೆ.
ಏಪ್ರಿಲ್​ 21ರಂದು ಪ್ರಕಟವಾದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಯನಗರ ಕಾಲೇಜಿನ ವಿದ್ಯಾರ್ಥಿನಿಯಾದ ತಬಸುಮ್ ಶೇಖ್ 593 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು. ಇದೀಗ ಮರು ಮೌಲ್ಯಮಾಪನದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ವಿಶೇಷ ಚೇತನ ವಿದ್ಯಾರ್ಥಿ ಕುಶು ನಾಯ್ಕ್​ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಕ್ಯಾಂಪಸ್​ನಲ್ಲಿ ಸ್ನೇಹಿತೆಗೆ ಗುಂಡು ಹಾರಿಸಿ, ಬಳಿಕ ಹಾಸ್ಟೆಲ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡ ಸ್ನೇಹಿತ
ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಲಾ ವಿಭಾಗದ ಐಚ್ಚಿಕ ಕನ್ನಡ ವಿಷಯದಲ್ಲಿ ಕುಶು ನಾಯ್ಕ್​ಗೆ ಎರಡು ಹೆಚ್ಚು ಅಂಕಗಳು ಬಂದಿವೆ. ಈ ಮೊದಲು 592 ಅಂಕಗಳಿತ್ತು. ಇದೀಗ ಎರಡು ಹೆಚ್ಚುವರಿ ಅಂಕಗಳೊಂದಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಕುಶು ನಾಯ್ಕ್​, ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿ. ಇದೀಗ ಪ್ರಥಮ ಸ್ಥಾನ ಗಳಿಸುವ ಮೂಲಕ ಸತತ ಎಂಟು ಬಾರಿ ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಫಸ್ಟ್ ರ್ಯಾಂಕ್​ ಒಲಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಅಶ್ಲೀಲ ವಿಡಿಯೋ ಅಪ್​ಲೋಡ್​! ನಟಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಿಯಕರ

ಚಾಟ್​ ಜಿಪಿಟಿ ಹೇಳಿದ್ದಕ್ಕೆ ಇಡೀ ತರಗತಿಯನ್ನೇ ಫೇಲ್ ಮಾಡಿದ ಅಧ್ಯಾಪಕ!

ಲಾಲ್​ ಸಲಾಂ ಚಿತ್ರದಲ್ಲಿ ಕಪಿಲ್​ ದೇವ್​: ಕ್ರಿಕೆಟ್​ ಲೆಜೆಂಡ್​ ಜತೆ ನಟಿಸುವುದು ನನ್ನ ಸೌಭಾಗ್ಯ ಎಂದ ರಜನಿಕಾಂತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
