ಹಗಲು ಹೊತ್ತು ವಿದ್ಯುತ್ ನೀಡುವ ಯೋಜನೆಯ ಅಡೆತಡೆ ನಿವಾರಣೆ
ರೈತರ ಪಂಪ್​ಸೆಟ್​ಗಳಿಗೆ ಹಗಲು ವೇಳೆ ವಿದ್ಯುತ್ ನೀಡುವ ಕೇಂದ್ರ ಸರ್ಕಾರ ಪ್ರಾಯೋಜಿತ ‘ಪಿಎಂ ಕುಸುಮ್ ಯೋಜನೆ ಅನುಷ್ಠಾನಕ್ಕೆ ಇದ್ದ ಅಡೆತಡೆ ನಿವಾರಣೆಯಾಗುವ ಸಾಧ್ಯತೆ ಗೋಚರಿಸಿದೆ.
ಫೀಡರ್ ಹಂತದ ಸೌರೀಕರಣ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸಲು ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸುವ ಪ್ರಕ್ರಿಯೆಯ ಮೊದಲ ಹಂತದ ಭಾಗವಾಗಿ ಉನ್ನತ ಮಟ್ಟದ ಸಭೆ ನಡೆದಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಅಂದಾಜು ಮೂರು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ 15 ಸಾವಿರ ಎಕರೆ ಜಾಗವನ್ನು ಹುಡುಕಲು ತಹಶೀಲ್ದಾರ್​ಗಳ ನೆರವು ಪಡೆಯಲು ಎಸ್ಕಾಂಗಳ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ.
ಸೌರೀಕರಣ:ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (ಪಿಎಂ- ಕುಸುಮ್ ಕಾಂಪೋನೆಂಟ್- ಸಿ ಅಡಿಯಲ್ಲಿ ಫೀಡರ್ ಮಟ್ಟದ ಸೌರೀಕರಣ ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ಕೃಷಿ ಪಂಪ್​ಸೆಟ್​ಗಳಿಗೆ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಸುವ ಉದ್ದೇಶ ಹೊಂದಲಾಗಿದೆ. ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಮೊದಲ ಹಂತದಲ್ಲಿ 3,37,331 (ಬೆಸ್ಕಾಂ- 2,62,331, ಹೆಸ್ಕಾಂ- 65,000, ಚೆಸ್ಕಾಂ- 10,000) ಕೃಷಿ ಪಂಪ್​ಸೆಟ್​ಗಳಿಗೆ ಯೋಜನೆ ಅಳವಡಿಕೆಗೆ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಿಕೆ ಮಾಡಿದೆ. ಈ ಘಟಕಗಳಿಂದ 1302 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಅಂದಾಜಿಸಲಾಗಿದೆ. ಎರಡನೇ ಹಂತದಲ್ಲಿ 4,29,588 (ಮೆಸ್ಕಾಂ- 75,484, ಹೆಸ್ಕಾಂ- 86,585, ಚೆಸ್ಕಾಂ- 2,53,376, ಜೆಸ್ಕಾಂ-14,143) ಕೃಷಿ ಪಂಪ್ ಸೆಟ್​ಗಳಿಗೆ (ಅಂದಾಜು 1200 ಮೆವಾ) ಮತ್ತು ಮೂರನೇ ಹಂತದಲ್ಲಿ ಅಂದಾಜು 500 ಮೆ.ವಾ.ನಷ್ಟು ಸೇರಿ ಒಟ್ಟಾರೆ ಮೂರು ಸಾವಿರ ಮೆಗಾವಾಟ್​ನಷ್ಟು ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ.
ಕೇಂದ್ರದ ಯೋಜನೆ ಜಾರಿಗೆ ಮಾರ್ಗ ಸೂಚಿ ಸಿದ್ಧ
ಕೇಂದ್ರದ ನೆರವು:ಕೃಷಿ ಫೀಡರ್​ಗಳಿಗೆ ವಿದ್ಯುತ್ ಪೂರೈಸಲು ಸೌರ ವಿದ್ಯುತ್ ಸ್ಥಾವರಗಳನ್ನು ಉಪ-ಕೇಂದ್ರಗಳ ಬಳಿ ಸ್ಥಾಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಇಲಾಖೆಗೆ ಶುಲ್ಕ ರಹಿತವಾಗಿ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಉಪ ಕೇಂದ್ರಗಳ ಬಳಿ ಜಾಗ ನಿಗದಿ ಪಡಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ಮೆಗಾವಾಟ್ ಘಟಕ ಸ್ಥಾಪನೆಗೆ 1.05 ಕೋಟಿ ರೂ. ಅನುದಾನ ನೀಡುತ್ತದೆ ಹಾಗೂ ಯೋಜನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ ದರ ಆಧಾರವಾಗಿಟ್ಟುಕೊಂಡು ವಿದ್ಯುತ್ ಖರೀದಿ ಒಪ್ಪಂದದ ದಿನಾಂಕದಿಂದ ಒಂಬತ್ತು ತಿಂಗಳೊಳಗೆ ಅನುಷ್ಠಾನಗೊಳಿಸಬೇಕಾಗುತ್ತದೆ.
ಪ್ರಸ್ತಾವನೆ:ಪ್ರತಿ ಮೆಗಾವಾಟ್ ಉತ್ಪಾದಿಸುವ ಸೌರ ಘಟಕಕ್ಕೆ ಐದು ಎಕರೆಯಂತೆ ಮೂರು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ ಇಂಧನ ಇಲಾಖೆಯಿಂದ ಗುರುತಿಸಲಾದ ಜಮೀನುಗಳನ್ನು ಉಚಿತವಾಗಿ ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಇಂಧನ ಇಲಾಖೆ ಕೋರಿಕೆ ಸಲ್ಲಿಸಿತ್ತು. ಆ ಪ್ರಕಾರ ಸಂಬಂಧಪಟ್ಟ ಎಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್​ಗಳು ಕುಸುಮ್​ಸಿ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ತಹಶೀಲ್ದಾರ್​ರೊಂದಿಗೆ ಸಮನ್ವಯ ಸಾಧಿಸಿ ಆಯಾ ಉಪ ಕೇಂದ್ರದ ಸುತ್ತುಮುತ್ತ 5ರಿಂದ 10 ಕಿಮೀ ವ್ಯಾಪ್ತಿಯಲ್ಲಿ ಪ್ರತಿ ಮೆಗಾವಾಟ್​ಗೆ ಐದು ಎಕರೆಯಂತೆ ಸರ್ಕಾರಿ ಜಾಗ ಗುರುತಿಸುವ ಜವಾಬ್ದಾರಿ ನೀಡಲಾಗಿದೆ. ಬಳಿಕ ಎಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್​ಗಳು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಬಳಿಕ ಐದು ದಿನಗಳಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕಾಗುತ್ತದೆ. ಕಾಯ್ದಿರಿಸಿದ ಜಮೀನಿನ
ಪಗಣಿಯ ಕಾಲಂ 11ರಲ್ಲಿ ಕುಸುಮ್ ಸಿ ಯೋಜನೆಯಡಿ ಸೌರ ವಿದ್ಯುತ್ ಯೋಜನೆ ಸ್ಥಾಪಿಸುವ ಉದ್ದೇಶಕ್ಕಾಗಿ ಇಂಧನ ಇಲಾಖೆಗೆ ಕಾಯ್ದಿರಿಸಿದೆ ಎಂದು ನಮೂದು ಮಾಡಲಾಗುತ್ತದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
