ಮೈಸೂರು:ತಂದೆ ಕುವೆಂಪು ಅವರಿಂದ ಪ್ರಭಾವಿತರಾಗಿ ಸಾಹಿತ್ಯದಲ್ಲಿ ಕೃಷಿ ಮಾಡಿದ್ದ ಪೂರ್ಣಚಂದ್ರ ತೇಜಸ್ವಿ ಮತ್ತು ತಾರಿಣಿ ಅವರು ಕುವೆಂಪು ಕುರಿತು ತಮ್ಮ ಅನುಭವವನ್ನು ಪುಸ್ತಕದಲ್ಲಿ ಹಿಡಿದಿಟ್ಟಿರುವುದು ಕನ್ನಡ ಸಾಹಿತ್ಯ ರಸಿಕರಿಗೆ ಗೊತ್ತಿರುವ ಸಂಗತಿ.
ತೇಜಸ್ವಿ ಅವರು ‘ಅಣ್ಣನ ನೆನಪು’ ಮೂಲಕ, ತಾರಿಣಿ ಅವರು ‘ಮಗಳು ಕಂಡ ಕುವೆಂಪು’ ಪುಸ್ತಕದ ಮೂಲಕ ತಂದೆಯೊಂದಿಗಿನ ಒಡನಾಟ, ಬಾಲ್ಯ, ಅವರ ಗುಣ, ಸ್ವಭಾವದ ಜತೆಗೆ, ಹಲವು ಘಟನೆಗಳ ನೆನಪು ಹಂಚಿಕೊಂಡಿದ್ದಾರೆ.
ಇದನ್ನೂ ಓದಿಸಚಿನ್ ಹೊಗಳಿಕೆಯಿಂದ ಪುಳಕಗೊಂಡ ನಟಿ
ಇದೀಗ ಕುವೆಂಪು ಅವರಿಗೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡಿ, ಮಕ್ಕಳ ಲಾಲನೆ-ಪಾಲನೆ, ಬಾಲ್ಯ, ಹಲವು ಘಟನೆಗಳಿಗೆ ಸಾಕ್ಷಿಯಾದ ತಾಯಿ ಹೇಮಾವತಿ ಅವರ ಬಗ್ಗೆ ತಾರಿಣಿ ಅವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
‘ತಂದೆಯ ಬಗ್ಗೆ ಎಲ್ಲ ಬರೆದಿದ್ದೇವೆ. ತಾಯಿಯ ಬಗ್ಗೆ ನೀನು ಬರೆಯಬೇಕು’ ಎಂದು ಪೂರ್ಣಚಂದ್ರ ತೇಜಸ್ವಿ ಅವರು ಸಹೋದರಿ ತಾರಿಣಿಗೆ ಸಲಹೆ ನೀಡಿದ್ದರಂತೆ. ಮತ್ತೊಬ್ಬ ಸಹೋದರ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿರುವ ಕೋಕಿಲೋದಯ ಚೈತ್ರ ಕೂಡ ತಾಯಿಯ ಕುರಿತು ಬರೆಯುವಂತೆ ಇತ್ತೀಚೆಗೆ ಹೇಳಿದ್ದರು. ಹೀಗಾಗಿ, ತಾರಿಣಿ ಅವರು ತಾಯಿಯ ಕುರಿತು ಪುಸ್ತಕ ಬರೆಯಲು ಆರಂಭಿಸಿದ್ದಾರೆ. ಶೀಘ್ರವೇ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕುವೆಂಪು ಅವರ ಅಳಿಯ ಡಾ.ಚಿದಾನಂದಗೌಡ ಮಾಹಿತಿ ನೀಡಿದರು.
ದೇಶವನ್ನು ಸರಿದಾರಿಯತ್ತ ಕೊಂಡೊಯ್ಯುತ್ತಿರುವ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + nine =
Remember me
