
ಬೆಂಗಳೂರುಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2023ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿಜಯವಾಣಿಯ ಅಸಿಸ್ಟೆಂಟ್ ಎಡಿಟರ್ ರಾಜಶೇಖರ ಜೋಗಿನ್ಮನೆ ಸೇರಿ ಎಂಟು ಮಂದಿಗೆ ಪ್ರಶಸ್ತಿ ಲಭಿಸಿದೆ. ಒಟ್ಟು 77 ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ೋಷಿಸಲಾಗಿದೆ.ವಿಜಯವಾಣಿ ಪತ್ರಿಕೆಯ ಬೆಂಗಳೂರು ವಿಭಾಗದ ಅಸಿಸ್ಟೆಂಟ್ ಎಡಿಟರ್ ರಾಜಶೇಖರ ಜೋಗಿನ್ಮನೆ ಹಾಗೂ ಮಂಗಳೂರಿನ ಪಿ.ಬಿ. ಹರೀಶ್ ರೈ ಅವರು ಕೆಯುಡಬ್ಲೂಜೆಯ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಎಚ್.ಆರ್. ಅಶ್ವಿನಿ ‘ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ’ ತರೀಕೆರೆಯ ಡಿ. ಉಮೇಶ್ ನಾಯ್ಕ ಅವರಿಗೆ ‘ಗಿರಿಧರ ಪ್ರಶಸ್ತಿ’, ಹುಬ್ಬಳ್ಳಿಯ ಪ್ರಕಾಶ್ ಎಸ್. ಶೇಟ್ ಹಾಗೂ ರಾಯಚೂರಿನ ಅಮರೇಶ ದೇವದುರ್ಗ ಅವರಿಗೆ ‘ಆರ್.ಎಲ್. ವಾಸುದೇವರಾವ್ ಪ್ರಶಸ್ತಿ’, ಚನ್ನರಾಯಪಟ್ಟಣದ ಬಿ.ಸಿ. ಚನ್ನೇಗೌಡ ಅವರಿಗೆ ‘ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ’ ಹಾಗೂ ಸಮ್ಮೇಳನ ನಡೆಯುವ ಜಿಲ್ಲೆಗೆ ಮೀಸಲಾದ ಪ್ರಶಸ್ತಿಗೆ ದಾವಣಗೆರೆಯ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಆಯ್ಕೆಯಾಗಿದ್ದಾರೆ.ೆ. 3 ಮತ್ತು 4ರಂದು ದಾವಣಗೆರೆಯಲ್ಲಿ ನಡೆಯಲಿರುವ 38ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿಗೆ ನಿರ್ಮಲ ಎಲಿಗಾರ್, ಪ್ರಕಾಶ್ ಮಸ್ಕಿ, ಕೆ.ಎಸ್.ಭಾಸ್ಕರ ಶೆಟ್ಟಿ, ರಾಧಾಕೃಷ್ಣ ಭಟ್, ಟಿ.ಗುರುರಾಜ್, ವೆಂಕಟೇಶ್ ಮೂರ್ತಿ, ಅರವಿಂದ ನಾವಡ, ರಮೇಶ್ ಪಾಳ್ಯ ಆಯ್ಕೆಯಾಗಿದ್ದಾರೆ.ಅತ್ಯುತ್ತಮ ವರದಿಗೆ ಪ್ರಶಸ್ತಿಗಳು:ಮಡಿಕೇರಿಯ ಸಣ್ಣವಂಡ ಕಿಶೋರ್ ನಾಚಪ್ಪ, ಸಂಶುದ್ದೀನ್ ಕೆ. ಎಣ್ಣೂರು (ಜಿ. ನಾರಾಯಣಸ್ವಾಮಿ ಪ್ರಶಸ್ತಿ), ಸಿ.ಎನ್.ಶಿವಶಂಕರ ಹಾಗೂ ಕೋಲಾರ ಎಂ.ಎನ್.ಯೋಗೇಶ್ ಅವರಿಗೆ (ಪಟೇಲ್ ಭೈರಹನುಮಯ್ಯ ಪ್ರಶಸ್ತಿ), ಎಲ್. ದೇವರಾಜ್ (ಗಿರಿಧರ್ ಪ್ರಶಸ್ತಿ), ಚಂದ್ರಹಾಸ ಹಿರೇಮಳಲಿ ಮತ್ತು ಎಸ್. ಶ್ರೀಧರ್ (ಬಿ.ಎಸ್. ವೆಂಕಟರಾಂ ಪ್ರಶಸ್ತಿ), ಮಂಜುನಾಥ, ಜಾದಗೆರೆ ಹಾಗೂ ಇಬ್ರಾಹೀಂ ಖಲೀಲ್ ಬನ್ನೂರು (ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿ), ಶಶಿಧರ ಹೆಗಡೆ ನಂದಿಕಲ್ ಮತ್ತು ಡಿ. ಎಚ್. ಸುಖೇಶ್ (ಖಾದ್ರಿ ಶಾಮಣ್ಣ ಪ್ರಶಸ್ತಿ), ಕೆ.ಆರ್. ಯೋಗೀಶ ಹಾಗೂ ತಾಜುದ್ದೀನ್ ಅಜಾದ್ (ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ), ಕಾರಂತ ಪೆರಾಜೆ ಮತ್ತು ರಾಘವೇಂದ್ರ ತೊಗರ್ಸಿ (ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ), ಪಿ.ಕೆ. ಬಡಿಗೇರ, ನಟರಾಜ್, ಅನುರಾಗ್ ಬಸವರಾಜು (ಅತ್ಯುತ್ತಮ ೆಟೋಗ್ರಫಿ ಪ್ರಶಸ್ತಿ), ಅಖಿಲೇಶ್ ಚಿಪ್ಪಲಿ (ಆರ್.ಎಲ್. ವಾಸುದೇವರಾವ್ ಪ್ರಶಸ್ತಿ), ಶಶಿಕಾಂತ್ ಎಸ್. ಶಂಬಳ್ಳಿ ಮತ್ತು ಪ್ರಕಾಶ್ ಬಾಳಕ್ಕನವರ್ (ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ), ಪಿ. ಶಾಂತಕುಮಾರ್ ಹಾಗೂ ಎಚ್.ಕೆ. ರಾಘವೇಂದ್ರ (ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ)ವಿವಿಧ ಹೆಸರಿನ ಪ್ರಶಸ್ತಿಗಳು ಪ್ರಕಟ:ನಂಜುಂಡಪ್ಪ, ತೃಪ್ತಿ ಕುಮ್ರಗೋಡು (ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ), ಬರಗೂರು ವಿರೂಪಾಕ್ಷಪ್ಪ, ಮಾಳಿಂಗರಾಯ ಪೂಜಾರ (ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ), ರಂಜಿತ್ ಅಶ್ವತ್, ಎನ್. ರಾಘವೇಂದ್ರ (ನಾಡಿಗೇರ ಕೃಷ್ಣರಾಯರ ಪ್ರಶಸ್ತಿ), ಜಿ.ಎಂ.ಕೊಟ್ರೇಶ್, ಹೆಚ್.ಕೆ.ರವೀಂದ್ರನಾಥ ಹೊನ್ನೂರು,(ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿ), ಎಸ್. ಶ್ಯಾಮ್ ಪ್ರಸಾದ್ (ನ್ಯಾಯಾಲಯ), ಅನುಕಾರ್ಯಪ್ಪ (ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ), ಎಚ್. ಪವನ್ ಕುಮಾರ್, ಪಿ.ವಿ. ಅಕ್ಷಯ (ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ), ಸಿದ್ದು ಆರ್.ಜಿ. ಹಳ್ಳಿ, ಶಶಿಕಾಂತ್ ಮೆಂಡೇಗಾರ (ಟಿ.ಕೆ. ಮಲಗೊಂಡ ಪ್ರಶಸ್ತಿ), ಅರುಣ್ ಕುಮಾರ್,ಎಸ್. ಬಬಿತಾ (ಅಪ್ಪಾಜಿಗೌಡ), ಬಿ.ಸಿ. ಚನ್ನೇಗೌಡ, ಗುರುರಾಜ್ ಕುಲಕರ್ಣಿ (ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ), ಕೆ.ಎನ್. ಪುಟ್ಟಲಿಂಗಯ್ಯ, ವೆಂಕಟೇಶ್ ಬಿ. ಇಮ್ರಾಪುರ (ಬದರೀನಾಥ್ ಹೊಂಬಾಳೆ ಪ್ರಶಸ್ತಿ), ವಿರೂಪಾಕ್ಷ ಕೆ. ಕವಟಗಿ, ಶಿವರಾಜ್ ಕೆಂಭಾವಿ (ಅಭಿಮಾನಿ ಪ್ರಕಾಶನ ಪ್ರಶಸ್ತಿ), ಎಂ.ಎನ್.ಅಹೋಬಳಪತಿ,ಚಿತ್ರದುರ್ಗ ಶ್ರೀಧರ್ ನಾಯಕ್ (ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ), ಮಹಿಪಾಲರೆಡ್ಡಿ ಮುನ್ನೂರ,ಜಗದೀಶ್ ಬೆಳ್ಳಿಯಪ್ಪ ( ರವಿ ಬೆಳಗೆರೆ ಪ್ರಶಸ್ತಿ), ನ್ಯೂಸ್ ಸ್ಟ್ (ಅತ್ಯುತ್ತಮ ತನಿಖಾ ವರದಿ).ವಿದ್ಯುನ್ಮಾನ ಟಿ.ವಿ. ವಿಭಾಗ: ಹರೀಶ್ ನಾಗರಾಜ್, ನವಿತಾ ಜೈನ್, ರಾಚಪ್ಪ, ದಶರಥ, ಮನೋಜ್ ಕುಮಾರ್, ಮೋಹನ್ ರಾಜ್, ಕೆ.ಆರ್. ವಸಂತಕುಮಾರ್. ಸಮ್ಮೇಳನ ನಡೆಯುವ ಜಿಲ್ಲೆಗೆ ಮೀಸಲಾದ ಪ್ರಶಸ್ತಿ: ಕೆ.ಏಕಾಂತಪ್ಪ, ಹೆಚ್.ಬಿ.ಮಂಜುನಾಥ್, ಖ್ಯಾತ ವ್ಯಂಗ್ಯ ಚಿತ್ರಕಾರರು, ಎಂ.ಎಸ್.ಶಿವಶರಣಪ್ಪ, ಎ.ಎಲ್.ತಾರಾನಾಥ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 8 =
Remember me
