ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2020-21ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿಜಯವಾಣಿ ಪತ್ರಿಕೆಯ ಡೆಪ್ಯೂಟಿ ಎಡಿಟರ್ ನಾಗರಾಜ ಭಟ್ ಸೇರಿ ಆರು ಮಂದಿಗೆ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾನಲ್‌ನ ಸಂಪಾದಕ ಸಿದ್ದು ಕಾಳೋಜಿ ಸೇರಿ ಒಟ್ಟು 66 ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ವಿಜಯವಾಣಿಯ ಹಿರಿಯ ಸಂಪಾದಕ ನಾಗರಾಜ ಭಟ್ ಅವರಿಗೆ ಅತ್ಯುತ್ತಮ ಡೆಸ್ಕ್ ಸಂಪಾದಕೀಯ ಪ್ರಶಸ್ತಿ, ವಿಜಯಪುರದ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಅವರಿಗೆ ವಿಶೇಷ ಪ್ರಶಸ್ತಿ, ಹಿರಿಯ ವರದಿಗಾರ ಜಗನ್ ರಮೇಶ್ ಅವರಿಗೆ ನ್ಯಾಯಾಂಗ ವಿಭಾಗದ ಪ್ರಶಸ್ತಿ, ಚೀಫ್ ಗ್ರಾಫಿಕ್ ಡಿಸೈನರ್ ಆರ್. ಹರೀಶ್ ಕುಮಾರ್ ಅವರಿಗೆ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿ, ಮೈಸೂರಿನ ಉಪ ಸಂಪಾದಕ ಅವಿನಾಶ್ ಜೈನಹಳ್ಳಿ ಅವರಿಗೆ ಅತ್ಯುತ್ತಮ ಕ್ರೀಡಾ ವರದಿಗಾರಿಕೆಗಾಗಿ ನೆಟ್ಟಕಲ್ಲಪ್ಪ ಪ್ರಶಸ್ತಿ, ಕಡೂರು ವರದಿಗಾರ ಎಚ್.ಆರ್. ದೇವರಾಜ್ ಗ್ರಾಮಾಂತರ ವರದಿಗಾಗಿ ಮಂಡಿಬೆಲೆ ಶಾಮಣ್ಣ ಪ್ರಶಸ್ತಿ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾಲನ್‌ನ ಸಂಪಾದಕ ಸಿದ್ದುಕಾಳೋಜಿ ಅವರಿಗೆ ವಿದ್ಯುನ್ಮಾನ ವಿಭಾಗದ ಪ್ರಶಸ್ತಿ ಲಭಿಸಿದೆ.
ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಯ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಅಭಿನಂದಿಸಿದ್ದಾರೆ.
ಫೆ. 4 ಮತ್ತು 5ರಂದು ವಿಜಯಪುರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಮಹಿ ಮಹೇಶ್ ಹಾಗೂ ಶರಣು ಪಾಟೀಲ್ (ವಿಶೇಷ ಪ್ರಶಸ್ತಿ), ಕಲಾವತಿ ಬೈಚಬಾಳ ಮತ್ತು ಮಂಜುನಾಥ ಜೂಟಿ (ಜಿ.ನಾರಾಯಣ ಸ್ವಾಮಿ ಪ್ರಶಸ್ತಿ), ವೈ.ಗ.ಜಗದೀಶ್ ಮತ್ತು ಕೂಡ್ಲಿ ಗುರುರಾಜ್ (ಖಾದ್ರಿ ಶಾಮಣ್ಣ ಪ್ರಶಸ್ತಿ), ಕೆ.ಓಂಕಾರಮೂರ್ತಿ ಮತ್ತು ಜಿ.ವಿ.ಸುಬ್ಬರಾವ್ (ಪಟೇಲ್ ಭೈರಹನುಮಯ್ಯ ಪ್ರಶಸ್ತಿ), ವಿಜಯಲಕ್ಷ್ಮಿ ಶಿಬರೂರು ಮತ್ತು ಎಲ್.ಎಸ್. ಶ್ರೀಕಾಂತ್ (ಬಿ.ಎಸ್.ವೆಂಕಟರಾಂ ಪ್ರಶಸ್ತಿ), ಇಬ್ರಾಹಿಂ ಖಲೀಬ್ ಹಾಗೂ ಎಚ್.ಟಿ.ಪ್ರಸನ್ನ (ಗಿರಿಧರ್ ಪ್ರಶಸ್ತಿ), ಡಾ.ಯು.ಬಿ. ರಾಜಲಕ್ಷ್ಮಿ ಮತ್ತು ಎಚ್. ಜಿ.ಶೋಭ (ಮಂಗಳ ಎಂ.ಸಿ. ವರ್ಗೀಸ್ ಪ್ರಶಸ್ತಿ), ಕೆ. ಸ್ಪಂದನ್ ಅವರಿಗೆ (ನೆಟ್ಟಕಲ್ಲಪ್ಪ ಪ್ರಶಸ್ತಿ), ಎಂ.ಎನ್. ಲಕ್ಷ್ಮೀನಾರಾಯಣ ಯಾದವ್, ಕೆ.ಎಸ್. ಶ್ರೀಧರ್ ಹಾಗೂ ಆರ್. ನಾಗರಾಜ್ (ಬಂಡಾಪುರ ಮುನಿರಾಜು ಪ್ರಶಸ್ತಿ), ಎಸ್.ಎಸ್.ಸಚ್ಛಿತ್ ಮತ್ತು ಪಿ.ಎ. ಶ್ರೀನಿವಾಸ (ಆರ್.ಎಲ್.ವಾಸುದೇವರಾವ್ ಪ್ರಶಸ್ತಿ), ನಿರಂಜನ ಕಗ್ಗೆರೆ, ಇಮ್ರಾನ್ ವುಲ್ಲಾ ಹಾಗೂ ಗುರುದತ್ ಭಟ್ (ಆರ್.ಎಲ್.ವಾಸುದೇವ ರಾವ್ ಪ್ರಶಸ್ತಿ), ಕೆ.ಬಿ.ಜಗದೀಶ್, ಅಶೋಕ ಸಾಲವಡಗಿ ಹಾಗೂ ಕೆ.ಎಸ್. ಸೋಮಶೇಖರ (ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ), ರಾಘವೇಂದ್ರ ವೆಂಕಟರಾವ್ ಗುಮಾಸ್ತೆ ಮತ್ತು ಸದಾಶಿವ ರಾಮಪ್ಪ ಬಡಿಗೇರ (ಮಂಡಿಬೆಲೆ ಶಾಮಣ್ಣ ಪ್ರಶಸ್ತಿ), ಎನ್.ಬಿ. ನಾರಾಯಣ, ಆರ್.ಜಿ.ಹಳ್ಳಿ ನಾಗರಾಜ್, ಗಂಗಾಧರ ಕುಷ್ಟಗಿ ಮತ್ತು ಪುಟ್ಟಸ್ವಾಮರಾಧ್ಯ (ನಾಡಪ್ರಭು ಕೆಂಪೇಗೌಡ ಪ್ರಶಸ್ತಿ), ರಾಜು ಖಾರ್ವಿ ಮತ್ತು ಕೆ.ಪ್ರಕಾಶ್ (ಯಜಮಾನ್ ಟಿ.ನಾರಾಯಣಪ್ಪ ಪ್ರಶಸ್ತಿ), ಬಿ.ಎನ್. ಮಲ್ಲೇಶ್ ಮತ್ತು ಪಿ.ಎಸ್.ಗುರು (ನಾಡಿಗೇರ ಕೃಷ್ಣರಾಯರ ಪ್ರಶಸ್ತಿ), ಎಸ್.ಆರ್. ರೋಹಿತ್ (ಅತ್ಯುತ್ತಮ ಪುಟ ವಿನ್ಯಾಸಗಾರ ಪ್ರಶಸ್ತಿ), ಪಿ. ರಾಜೇಂದ್ರ (ನ್ಯಾಯಾಲಯ ವಿಭಾಗದ ಪ್ರಶಸ್ತಿ), ಪಿ.ಪಿ.ಕಾಳಯ್ಯ ಮತ್ತು ಬಸವರಾಜ ಭೋಗಾವತಿ (ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ), ಬಿ.ಎಸ್. ರಶ್ಮಿ, ಪ್ರವೀಣ್ ಎಚ್. ಪರ ಮತ್ತು ಚೇತನಾ ಬೆಳಗೆರೆ ( ಕೆ.ಎನ್. ಸುಬ್ರಹ್ಮಣ್ಯ ಪ್ರಶಸ್ತಿ), ಆನಂದ ಸೌದಿ ಮತ್ತು ಜಿ.ಮಹಾಂತೇಶ್ (ಅತ್ಯುತ್ತಮ ತನಿಖಾ ವರದಿ), ರಾಧಾಕೃಷ್ಣ ಬಡ್ತಿ, ಶಶಿಧರ್ ಮತ್ತು ಡಿ.ಜಿ. ಮಮತಾ ( ಅತ್ಯುತ್ತಮ ಡೆಸ್ಕ್ ಸಂಪಾದಕೀಯ ಪ್ರಶಸ್ತಿ)
ವಿದ್ಯುನ್ಮಾನ ವಿಭಾಗದ ಪ್ರಶಸ್ತಿ:ಸುವರ್ಣ ನ್ಯೂಸ್​ನ ಅಜಿತ್ ಹನುಮಕ್ಕನವರ ಮತ್ತು ಟಿವಿ 9 ನ ಸುಕನ್ಯಾ.
ವಿದ್ಯುನ್ಮಾನ ವಿಭಾಗದ ವರದಿಗಾಗಿ ಪ್ರಶಸ್ತಿ:ರವೀಶ್, ವಿನಾಯಕ ಗಂಗೊಳ್ಳಿ, ಮಾರುತಿ ಪಾವಗಡ, ಎಸ್.ಚಂದ್ರಶೇಖರ್, ಕೆಪಿಎಸ್ ಪ್ರಮೋದ್, ಎಚ್.ಐ.ಶಾಂತಿನಾಥ, ಕೆ.ಎಸ್.ದೀಪ, ಸಿದ್ದುಬಿರಾದರ್
ಜಿಲ್ಲಾ ಪ್ರಶಸ್ತಿ:ಇರ್ಫಾನ್ ಶೇಖ್, ರಶ್ಮಿ ಪಾಟೀಲ ಮತ್ತು ಟಿ.ಕೆ.ಮಲಕೊಂಡ ಅವರಿಗೆ ಸಮ್ಮೇಳನ ನಡೆಯುವ ಜಿಲ್ಲೆಗೆ ನೀಡುವ (ಬದರಿನಾಥ ಹೊಂಬಾಳೆ ಪ್ರಶಸ್ತಿ)
‘ಸತ್ತು ಹೋದವ’ ಸತ್ತ ಮರುದಿನವೇ ತಾನು ಮೃತಪಟ್ಟಿದ್ದ ಆ ಸ್ಥಳದಲ್ಲೇ ಮತ್ತೆ ಕಾಣಿಸಿಕೊಂಡಿದ್ದ!; ಆಗಿದ್ದಾದರೂ ಏನು, ಏಕೆ?

ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + four =
Remember me
