
ಬೆಳಗಾವಿ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದಿಂದ ಜ. 5 ರಿಂದ 7 ತನಕ 3ದಿನಗಳ ಕಾಲ ಮಂಗಳೂರು ಆಡ್ಯಾರ್ ಸಹ್ಯಾದ್ರಿ ಎಂಜಿನೀಯರಿಂಗ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್(ಬ್ರ್ಯಾಂಡ್ ಮಂಗಳೂರು ರೋಹನ್ ಕಪ್) ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಸುವರ್ಣ ಸೌಧದಲ್ಲಿ ಮಂಗಳವಾರ ಅನಾವರಣ ಮಾಡಿದರು.ಜ.5ರಂದು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಯಿತು. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ 35ನೇ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಲಾಗಿದ್ದು, ಈಗ ರಾಜ್ಯ ಮಟ್ಟದ ಕ್ರಿಕೇಟ್ ಕ್ರೀಡಾಕೂಟವನ್ನ ಸಂಘಟಿಸಲಾಗುತ್ತಿದೆ ಎಂಬುವುದನ್ನು ಅವರ ಗಮನಕ್ಕೆ ತರಲಾಯಿತು. ಲಾಂಛನ ಅನಾವರಣ ಮಾಡಿದ ಸಿಎಂ, ಕ್ರಿಕೆಟ್ ಟೂರ್ನಮೆಂಟ್‌ಗೆ ಶುಭಕೋರಿದರು.ಲಾಂಛನ ಅನಾವರಣ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂಡಾಜೆ,ಪಂದ್ಯಾವಳಿಯ ಪ್ರಧಾನ ಸಂಚಾಲಕ ಅನ್ನು ಮಂಗಳೂರು, ಉಪಾಧ್ಯಕ್ಷ ಭಾಸ್ಕರ್ ರೈ. ಕೆ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಪದಾಧಿಕಾರಿಗಳಾದ, ರಾಜೇಶ ದಡ್ಡಂಗಡಿ, ರಾಜೇಶ್ ಶೆಟ್ಟಿ, ಸಂದೇಶ ಜಾರ ಮತ್ತಿತರರಿದ್ದರು.
ನೋಂದಣಿಗೆ ಡಿ.20 ಕಡೆ ದಿನ:ಟೂರ್ನಮೆಂಟ್‌ಗೆ ನೋಂದಣಿ ಮಾಡಿಕೊಳ್ಳಲು ಡಿ.20 ಕೊನೆಯ ದಿನವಾಗಿದ್ದು, ಆಯಾ ಜಿಲ್ಲೆಯಿಂದ ಭಾಗವಹಿಸುವ ತಂಡಗಳು ಶೀಘ್ರವೇ ನೋಂದಣಿ ಮಾಡಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂಡಾಜೆ ಕೋರಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
