ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿಜಯವಾಣಿ ಸಹಾಯಕ ಸಂಪಾದಕ ಪ್ರಭುದೇವ ಶಾಸ್ತ್ರಿಮಠ ಅವರು ಗರುಡನಗಿರಿ ನಾಗರಾಜ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗಳ ವಿವರ:* ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ:ಬಿ.ಎಂ.ಬಶೀರ್, ಮಂಗಳೂರು.* ಗೊಮ್ಮಟ ಮಾಧ್ಯಮ ಪ್ರಶಸ್ತಿ:ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ* ಡಿವಿಜಿ ಪ್ರಶಸ್ತಿ:ವಿ.ವೆಂಕಟೇಶ್, ಬೆಂಗಳೂರು* ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ:ಸಿ.ಜಿ.ಮಂಜುಳ, ಬೆಂಗಳೂರು* ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ:ಮಲ್ಲಿಗೆ ಮಾಚಮ್ಮ, ಮೈಸೂರು.* ಎಸ್.ವಿ.ಜಯಶೀಲರಾವ್ ಪ್ರಶಸ್ತಿ:ಮೋಹನ ಹೆಗಡೆ, ಹುಬ್ಬಳ್ಳಿ* ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:ಸನತ್ ಕುಮಾರ್ ಬೆಳಗಲಿ* ಕಿಡಿ ಶೇಷಪ್ಪ ಪ್ರಶಸ್ತಿ:ಬಿ.ಎಂ.ನಂದೀಶ್, ಹಾಸನ.* ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ:ಆರ್. ಜಯಕುಮಾರ್, ಬೆಂಗಳೂರು.* ಪಿ.ಆರ್.ರಾಮಯ್ಯ ಪ್ರಶಸ್ತಿ:ಸಿ.ಕೆ.ಮಹೇಂದ್ರ, ಮೈಸೂರು.* ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ:ಅಶೋಕ್ ರಾಮ್, ರಾಮನಗರ.* ರಾಜಶೇಖರಕೋಟಿ ಪ್ರಶಸ್ತಿ:ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ* ಪಿ.ರಾಮಯ್ಯ ಪ್ರಶಸ್ತಿ:ಮನೋಹರ ಮಲ್ಲಾಡದ, ರಾಣೆಬೆನ್ನೂರು* ಮ.ರಾಮಮೂರ್ತಿ ಪ್ರಶಸ್ತಿ:ಎಚ್.ಕೆ.ಬಸವರಾಜು, ಬೆಂಗಳೂರು.* ಗರುಡನಗಿರಿ ನಾಗರಾಜ್ ಪ್ರಶಸ್ತಿ:ಪ್ರಭುದೇವ ಶಾಸ್ತ್ರಿಮಠ, ಬೆಂಗಳೂರು* ಮಹದೇವ ಪ್ರಕಾಶ್ ಪ್ರಶಸ್ತಿ:ವಿಜಯಕುಮಾರ್ ವಾರದ, ಕಲಬುರಗಿ* ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ:ಎನ್.ಬಾಬು, ಭದ್ರಾವತಿ.* ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ:ನಾಮದೇವ ವಾಟ್ಕರ್, ಯಾದಗಿರಿ* ಎಂ.ನಾಗೇಂದ್ರರಾವ್ ಪ್ರಶಸ್ತಿ:ರವಿ ಆರ್, ದಾವಣಗೆರೆ*ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ:ಕೆ.ಗೋಪಿಕಾ ಮಲ್ಲೇಶ್, ಕೋಲಾರ.*ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ:ಆರ್.ಸಿ.ಪುಟ್ಟರಾಜು, ಚಾಮರಾಜನಗರ
ವಿಶೇಷ ಪ್ರಶಸ್ತಿ:ಚಿಕ್ಕಪ್ಪನಳ್ಳಿ ಷಣ್ಮುಖ, ಎಸ್.ಬಿ.ರವಿಕುಮಾರ್, ಮಂಜುನಾಥ್ ಹಾಗೂ ರವಿ ಮಲ್ಲಾಪುರ.
ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್​ ಅವರು ತಿಳಿಸಿದ್ದಾರೆ.
ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಪಟ್ಟಭದ್ರ ಹಿತಾಸಕ್ತಿಗಳ ಯತ್ನ: ಸಿಜೆಐಗೆ 600 ವಕೀಲರಿಂದ ಪತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
