ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ನೀಡುವ 2018ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಈ ಬಾರಿ ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ಗೆ 5 ಪ್ರಶಸ್ತಿಗಳು ಒಲಿದಿವೆ. ಹಿರಿಯ ವರದಿಗಾರ ಶ್ರೀಕಾಂತ್ ಶೇಷಾದ್ರಿಗೆ ಎಚ್.ಎಸ್. ರಂಗಸ್ವಾಮಿ, ವರದಿಗಾರ್ತಿ ಕೆ.ಎಂ.ಪಂಕಜಗೆ ನಾಡಪ್ರಭು ಕೆಂಪೇಗೌಡ, ನವೀನ್ ಕುಮಾರ್​ಗೆ ಅತ್ಯುತ್ತಮ ಪುಟ ವಿನ್ಯಾಸ ಹಾಗೂ ವಿಜಯಪುರ ವರದಿಗಾರ ಶಶಿಕಾಂತ್ ಮಂಡೇಗಾರಗೆ ಮಂಡಿಬೆಲೆ ಶಾಮಣ್ಣ ಪ್ರಶಸ್ತಿ ಘೋಷಿಸಲಾಗಿದೆ.
ಅಲ್ಲದೆ, ದಿಗ್ವಿಜಯ 24×7 ನ್ಯೂಸ್​ ಸಂಪಾದಕ ಎಂ.ಆರ್. ಸುರೇಶ್ ಅವರಿಗೆ ವಿಶೇಷ ಪ್ರಶಸ್ತಿ ಬಂದಿದೆ.
ಮಾ.7 ಮತ್ತು 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುದ್ಲುಲ್ ರಂಗರಾವ್ ಪುರಭವನದಲ್ಲಿ ನಡೆಯುವ 35ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
