| ಕೀರ್ತಿನಾರಾಯಣ ಸಿ. ಬೆಂಗಳೂರು
ಲಘು ಮೋಟಾರು ವಾಹನ (ಎಲ್​ಎಂವಿ) ಚಾಲನಾ ಪರವಾನಗಿ (ಡಿಎಲ್) ಪಡೆದಿರುವ ವ್ಯಕ್ತಿ ಸಾರಿಗೆ/ಗೂಡ್ಸ್ ವಾಹನಗಳನ್ನೂ ಓಡಿಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಈ ಹೊಸ ಆದೇಶದಿಂದ ಡಿಎಲ್ ವಿತರಣೆ ಪ್ರಕ್ರಿಯೆಯಲ್ಲಿ ಹಲವು ಗೊಂದಲ ಶುರುವಾಗಿದ್ದು, ಸ್ಪಷ್ಟನೆ ಕೇಳಿ ರಾಜ್ಯ ಸಾರಿಗೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಸದ್ಯ ಜಾರಿಯಲ್ಲಿರುವಂತೆ ಎಲ್​ಎಂವಿ ಹಾಗೂ ಟ್ರಾನ್ಸ್​ಪೋರ್ಟ್ ವಾಹನಗಳ ಚಾಲನೆಗೆ ಪ್ರತ್ಯೇಕ ಚಾಲನಾ ಪರವಾನಗಿ ಪಡೆಬೇಕು. ಇನ್ನು ಮುಂದೆ ಎಲ್​ಎಂವಿ ಡಿಎಲ್ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ನಿಯಮ ಪಾಲಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ನೂತನ ನಿಯಮ ಪಾಲಿಸಿದರೆ ಕೇಂದ್ರ ಸರ್ಕಾರವೇ ರೂಪಿಸಿರುವ ಮೋಟಾರು ವಾಹನ ಕಾಯ್ದೆಯ ನಿಯಮಗಳೇ ಉಲ್ಲಂಘನೆಯಾಗುತ್ತದೆ.
ಯಾವ ವಾಹನಕ್ಕನ್ವಯ?:ಮೋಟಾರು ಸೈಕಲ್, ಟ್ಯಾಕ್ಸಿ, ಕ್ಯಾಬ್, ಟ್ರಾ್ಯಕ್ಟರ್, ಗೂಡ್ಸ್, ಪ್ಯಾಸೆಂಜರ್ ಲಘು ಮೋಟಾರು ವಾಹನ, ಇ ರಿಕ್ಷಾಕ್ಕೆ ಎಲ್​ಎಂವಿ ಡಿಎಲ್ ಸಾಕು. ಪ್ರತ್ಯೇಕ ಅನುಮತಿ ಪತ್ರ ಬೇಕಿಲ್ಲ.
8 ರೀತಿಯ ವಾಹನಗಳೂ ಲಘು ಮೋಟಾರು ವಾಹನಗಳೇ ಎಂದು ಮೋಟಾರು ವಾಹನ ಕಾಯ್ದೆಯಲ್ಲಿ ಪರಿಗಣಿಸುತ್ತಿರುವಾಗ ಬೇರೆ ಬೇರೆ ಡಿಎಲ್ ಅಗತ್ಯ ಏನಿದೆ. ಎಲ್ಲವನ್ನೂ ವಿಲೀನಗೊಳಿಸಿ ಎಲ್ಲದಕ್ಕೂ ಒಂದೇ ಎಲ್​ಎಂವಿ ಡಿಎಲ್ ಕೊಡಿ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ.
ಕೆಲ ಸೆಕ್ಷನ್​ಗಳ ತಿದ್ದುಪಡಿ ಬಗ್ಗೆ ಗೊಂದಲಗಳಿದ್ದು, ಸ್ಪಷ್ಟನೆ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಗೊಂದಲರಹಿತ ಹೊಸ ನಿಯಮ ಜಾರಿಗೆ ತರಲಾಗುತ್ತದೆ.
| ಶಿವರಾಜಪಾಟೀಲ್,ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಎಲ್​ಎಂವಿ ವಾಹನಕ್ಕೆ ಡಿಎಲ್ ಕೊಟ್ಟ 1 ವರ್ಷದ ನಂತರ ವಾಣಿಜ್ಯ ವಾಹನ ಚಾಲನೆಗೆ ಅನುಮತಿ ಪತ್ರ ಕೊಡಬೇಕು. ಒಂದು ವೇಳೆ ಈಗ ಹೊಸ ಆದೇಶವನ್ನು ಪಾಲಿಸದರೆ ಕೇಂದ್ರ ಸರ್ಕಾರದ ನಿಯಮವನ್ನೇ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸಾರಿಗೆ ಇಲಾಖೆ ಪತ್ರ ಬರೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + seven =
Remember me
