ಬೆಂಗಳೂರು:ಜೆಡಿಎಸ್​ನಿಂದ ಉಚ್ಛಾನೆಗೊಂಡಿದ್ದ ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ.
ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುಲು ಫೈಟರ್​ ರವಿ ಒಲವು ತೋರಿದ್ದಾರೆ. ಆದರೆ, ನಾಗಮಂಗಲ ಕ್ಷೇತ್ರದಲ್ಲಿ ಶಿವರಾಮೇಗೌಡ ಅವರಿಗೆ ಬಿಜೆಪಿ ಟಿಕೆಟ್​ ಬಹುತೇಕ ಖಚಿತವಾಗಿದೆ. ಇದೀಗ ಬಂಡಾಯವಾದರೂ ಸರಿಯೇ ನನ್ನ ಸ್ಪರ್ಧೆ ಖಚಿತ ಅಂತ ಫೈಟರ್ ರವಿ ಹೇಳುತ್ತಿದ್ದಾರೆ ಎಂದು ಮಂಡ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:ರಜನಿ ಪುತ್ರಿಯ ಮನೆಯಲ್ಲಿ ಕದ್ದ ಆಭರಣಗಳಿಂದ ದುಬಾರಿ ಮನೆ ಖರೀದಿಸಿದ್ದ ಸೇವಕಿ: ಬೆಲೆ ಕೇಳಿದ್ರೆ ಬೆರಗಾಗ್ತೀರಾ!
ಇದೀಗ ಫೈಟರ್​ ರವಿ ನಡೆ ಬಿಜೆಪಿಗೆ ಹೊಸ ತಲೆನೋವಾಗಿದೆ. ಶಿವರಾಮೇಗೌಡ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲಾನ್ ಮಾಡಿದ್ದಾರೆ. ಸಿಎಂ ಸೇರಿದಂತೆ ಬಿಜೆಪಿ ರಾಜ್ಯ ನಾಯಕನ್ನು ಕರೆಸಿ ನಾಗಮಂಗಲದಲ್ಲೇ ಬಿಜೆಪಿ ಸೇರಲು ಶಿವರಾಮೇಗೌಡ ತಯಾರಿ ನಡೆಸಿದ್ದಾರೆ.
ಶಿವರಾಮೇಗೌಡರ ನಡೆಯಿಂದ ಬಿಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದ ರೌಡಿಶೀಟರ್ ಫೈಟರ್ ರವಿಗೆ ಆಘಾತವಾಗಿದೆ. ನಾಗಮಂಗಲ ಟಿಕೆಟ್ ಸಿಗುವ ಭರವಸೆಯಲ್ಲಿಯೇ ಫೈಟರ್​ ರವಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ. ಕ್ಷೇತ್ರದಲ್ಲಿ ಹಲವು ಬಿಜೆಪಿ ಕಾರ್ಯಕ್ರಮಗಳನ್ನು ರವಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ. ಇದೀಗ ಶಿವರಾಮೇಗೌಡ ಎಂಟ್ರಿಯಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಇದನ್ನೂ ಓದಿ:ಆಸಿಸ್​ ವಿರುದ್ಧ ಏಕದಿನ ಸರಣಿ ಸೋಲು: ರೋಹಿತ್​ರನ್ನು ತರಾಟೆಗೆ ತೆಗೆದುಕೊಂಡ ಸುನೀಲ್​ ಗವಾಸ್ಕರ್​
ಇತ್ತ ಟಿಕೆಟ್ ಸಿಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಬಂಡಾಯವೇಳಲು ಫೈಟರ್​ ರವಿ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಂಡಾಯವಾದ್ರು ಸರಿಯೇ ಸ್ಪರ್ಧೆ ಖಚಿತ ಎಂದು ಫೈಟರ್ ರವಿ ಹೇಳುತ್ತಿದ್ದಾರೆ. ನಾನು ಬೇರೆಯವರ ಗೆಲ್ಲಿಸಲು ಅಥವಾ ಸೋಲಿಸಲು ರಾಜಕಾರಣಕ್ಕೆ ಬಂದಿಲ್ಲ. ನಾನು ಗೆಲ್ಲುವುದ್ದಕ್ಕಾಗಿಯೇ ರಾಜಕಾರಣಕ್ಕೆ ಬಂದ್ದಿದ್ದೇನೆ ಎಂದು ಆಪ್ತ ವಲಯದಲ್ಲಿ ಹೇಳಿಕೊಳ್ಳುತ್ತಿರುವ ಫೈಟರ್ ರವಿ‌, ಶಾಸಕ ಸುರೇಶಗೌಡ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಿಕ್ಕಿಬಿಡ್ತು ಕಟ್ಟುಗಟ್ಟಲೆ ಹಣ; ದಾಖಲೆರಹಿತ 1.9 ಕೋಟಿ ರೂ. ವಶ!

ಯುಗಾದಿ ದಿನವೇ ಮುಗಿದ ಬದುಕು!; ಪತಿಯ ಅನುಮಾನಕ್ಕೆ ಪತ್ನಿ ಬಲಿ

ಯುಗಾದಿ ದಿನದಂದು ಶುರುವಾಯ್ತು ‘ಕಾಂತಾರ 2’ ಚಿತ್ರದ ಬರವಣಿಗೆ …

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 4 =
Remember me
