ಬೆಂಗಳೂರು:ಕರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ರಾಜ್ಯದಲ್ಲೀಗ ಕಾರ್ವಿುಕರಿಗೂ ಬರ ಎದುರಾಗಿದೆ. ಲಾಕ್​ಡೌನ್ ಪರಿಣಾಮ ಹೊತ್ತಿನ ತುತ್ತಿಗೂ ಹಣ ಸಂಪಾದಿಸಲು ಸಾಧ್ಯವಾಗದೆ ಹೊರ ಜಿಲ್ಲೆ ಹಾಗೂ ರಾಜ್ಯಗಳ 10 ಲಕ್ಷಕ್ಕೂ ಹೆಚ್ಚು ಕಾರ್ವಿುಕರು ರಾಜಧಾನಿ ಬೆಂಗಳೂರಿಗೆ ಗುಡ್​ಬೈ ಹೇಳಿ ತವರು ಸೇರಿರುವುದರಿಂದ ಕನಿಷ್ಠ ಆರು ತಿಂಗಳವರೆಗೆ ಕಾಮಗಾರಿಗಳು ಆರಂಭವಾಗುವುದೇ ಅನುಮಾನವಾಗಿದೆ. ಲಾಕ್​ಡೌನ್ ಬಳಿಕ ದುಡಿಮೆಯಿಲ್ಲದೆ ಹಾಗೂ ಕರೊನಾ ಭಯದಿಂದಾಗಿ ಊರು ತೊರೆದವರಲ್ಲಿ ಐಟಿ-ಬಿಟಿ ಉದ್ಯೋಗಿಗಳಿಂದ ಕೂಲಿ ಕಾರ್ವಿುಕರವರೆಗೆ ಲಕ್ಷಾಂತರ ಜನರಿದ್ದಾರೆ. ಹೀಗೆ ಊರು ಬಿಟ್ಟವರ ಪೈಕಿ 20 ಲಕ್ಷ ಜನರು ಸರ್ಕಾರ ಮತ್ತು ಖಾಸಗಿ ಕಾಮಗಾರಿಗಳಲ್ಲಿ ದಿನಗೂಲಿ ಕಾರ್ವಿುಕರಾಗಿ ಕೆಲಸ ಮಾಡುತ್ತಿದ್ದವರಾಗಿದ್ದಾರೆ.
ಸಾರಿಗೆ ವ್ಯವಸ್ಥೆಯೂ ತತ್ತರ:ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸರಿಯಾಗುವುದಕ್ಕೂ ಸಾಕಷ್ಟು ಸಮಯ ಬೇಕಾಗಲಿದೆ. ಒಲಾ, ಉಬರ್ ಚಾಲಕರ ಪೈಕಿ ಶೇ. 60ಜನ ಈಗಾಗಲೇ ಬೆಂಗಳೂರು ತೊರೆದಿದ್ದಾರೆ. ಅವರೊಂದಿಗೆ ಬಿಎಂಟಿಸಿಯ ಕೆಲ ಚಾಲಕರೂ ಊರು ಸೇರಿದ್ದಾರೆ.
ಮುಂದಿರುವ ಸವಾಲುಗಳೇನು?:ಕರೊನಾ ಭೀತಿ ನಿವಾರಣೆಯಾಗಿ, ಜನಜೀವನ ಸಹಜ ಸ್ಥಿತಿಗೆ ಬಂದ ನಂತರವಷ್ಟೇ ಸರ್ಕಾರಿ ಮತ್ತು ಖಾಸಗಿ ಕಾಮಗಾರಿ ಆರಂಭವಾಗಲಿದೆ. ಹೀಗೆ ಕಾಮಗಾರಿ ಆರಂಭವಾದರೂ, ಸಮರ್ಪಕವಾಗಿ ಕೆಲಸ ನಡೆಯಲು ಕನಿಷ್ಠ 6 ತಿಂಗಳು ಬೇಕಾಗಲಿದೆ. ಬೆಂಗಳೂರು ತೊರೆದವರಲ್ಲಿ ಶೇ. 50 ಕಾರ್ವಿುಕರು ವಾಪಸ್ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ಪ್ರಮುಖ ಯೋಜನೆಗಳಿಗೆ ಕಾರ್ವಿುಕರ ಕೊರತೆ ಎದುರಾಗಲಿದೆ.
ಇರುವ ಕಾರ್ವಿುಕರಿಗೆ ನಿತ್ಯ ಅರೆಹೊಟ್ಟೆ:ಊರಿಗೆ ತೆರಳಲಾಗದೆ ಬೆಂಗಳೂರಿನಲ್ಲೇ ಉಳಿದ ಕಾರ್ವಿುಕರಿಗೆ ಇಂದಿರಾ ಕ್ಯಾಂಟೀನ್ ಆಹಾರ ನೀಡಲಾಗುತ್ತಿದ್ದರೂ, ಅದು ಎಲ್ಲರಿಗೂ ದೊರೆಯುತ್ತಿಲ್ಲ. ಜತೆಗೆ ಅವರನ್ನು ಕೆಲಸ ಆಮಿಷ ನೀಡಿ ಕರೆಸಿದ್ದ ಮಧ್ಯವರ್ತಿ ಗಳಿಂದಲೂ ನೆರವು ಸಿಗುತ್ತಿಲ್ಲ. ನಮ್ಮ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡಲು ಬಂದ ಹೊರರಾಜ್ಯದ 2 ಸಾವಿರಕ್ಕೂ ಹೆಚ್ಚಿನ ಜನರು ಹಸಿವಲ್ಲೇ ದಿನದೂಡುವಂತಾಗಿದೆ.
| ಗಿರೀಶ್​ ಗರಗ
ಬೆಂಗಳೂರಿಗೆ ಸಮಸ್ಯೆ
(ಯಾವ ಯೋಜನೆಗಳಿಗೆ ಸವಾಲು)
* ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ವಿುನಲ್ ನಿರ್ಮಾಣ
* ಬಿಬಿಎಂಪಿಯ ವೈಟ್ ಟ್ಯಾಪಿಂಗ್, ಟೆಂಡರ್ ಶ್ಯೂರ್, ಸಿಗ್ನಲ್ ಫ್ರೀ ಕಾರಿಡಾರ್, ಸ್ಟೀಲ್ ಬ್ರಿಜ್, ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸೇರಿ ಇನ್ನಿತರ ಯೋಜನೆ
* 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ
* ಖಾಸಗಿ ಬಿಲ್ಡರ್​ಗಳಿಂದ ನಿರ್ವಣವಾಗುತ್ತಿರುವ 5 ಸಾವಿರಕ್ಕೂ ಹೆಚ್ಚಿನ ಅಪಾರ್ಟ್​ವೆುಂಟ್ ಸೇರಿ ಇನ್ನಿತರ ಕಟ್ಟಡ ನಿರ್ಮಾಣ ಕಾಮಗಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
