* ಆಸ್ಪತ್ರೆಯ ಪ್ರತಿ ಭೇಟಿಯಲ್ಲಿ 433 ಸ್ವಂತ ಹಣ ಖರ್ಚು ಮಾಡಿ ಔಷಧಿ ಖರೀದಿಸುತ್ತಿರುವ ರೋಗಿಗಳು

ಬೆಂಗಳೂರು:ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಗಳ ಲಭ್ಯತೆ ಕೊರತೆ ವ್ಯಾಪಕವಾಗಿದ್ದು, ಇಲ್ಲಿ ಚಿಕಿತ್ಸೆಗಾಗಿ ಭೇಟಿ ನೀಡುವ ರೋಗಿಗಳು ಪ್ರತಿ ಭೇಟಿಗೆ ಸರಾಸರಿ 433 ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ. ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ ( ಎಸ್‌ಎಎಕೆ)ಸಮೀಕ್ಷೆ ಇದನ್ನು ಬಹಿರಂಗ ಪಡಿಸಿದೆ.
ಎಸ್‌ಎಎಕೆ ವಿವಿಧ ನಾಗರಿಕ ಸಮಾಜ ಮತ್ತು ಪ್ರಗತಿಪರ ಸಂಘಟನೆಗಳು, ಕಾರ್ಮಿಕರ ಸಂಘಗಳು, ಕಾರ್ಯಕರ್ತರು ಮತ್ತು ಜನರ ಆರೋಗ್ಯ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಶೋಧಕರ ಜಾಲವಾಗಿದೆ. ಈ ಸಂಸ್ಥೆ ರಾಜ್ಯದ 12 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಹೊರಗಿನ ಔಷಧಾಲಯಗಳಲ್ಲಿ 600 ರೋಗಿಗಳೊಂದಿಗೆ ಮೌಖಿಕ ವಿಚಾರಣೆ ನಡೆಸುವ ಮೂಲಕ ಸಮೀಕ್ಷೆ ಮಾಡಿದೆ.
ಕಳೆದ ಜು. 1 ರಿಂದ 19ರವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಅಸ್ಪತ್ರೆ ಹೊರಗಿನ ಔಷಧಾಲಯಗಳಲ್ಲಿ ಔಷಧಿ ಖರೀದಿಗಾಗಿ 2,58,809 ಖರ್ಚು ಮಾಡಿದ್ದಾರೆ.
ಸಮೀಕ್ಷೆ ಕುರಿತು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಎಸ್‌ಎಎಕೆ ಸದಸ್ಯರಾದ ಮನೋಹರ ಎಳವರ್ತಿ, ನಿಶಾ ಗೂಳೂರು, ಮತ್ತು ಪ್ರಸನ್ನ ಸಾಲಿಗ್ರಾಮ ಅವರು ಮಾಹಿತಿ ನೀಡಿದರು. ಯಾವುದೇ ರೀತಿಯ ಸೌಲಭ್ಯ ಮತ್ತು ಭೌಗೋಳಿಕತೆ ಲೆಕ್ಕಿಸದೆ ಸರ್ಕಾರಿ ವೈದ್ಯರಿಂದ ಔಷಧಿ ಚೀಟಿ ಬರೆಯುತ್ತಿದ್ದು, ರೋಗಿಗಳು ಹೊರಗಿನ ಔಷಧಾಲಯಗಳಲ್ಲಿ ಸ್ವಂತ ಹಣದಿಂದ ಔಷಧಿಗಳನ್ನು ಖರೀದಿಸಲು ಪ್ರೇರೇಪಿಸುತ್ತಿದ್ದಾರೆ ಎಂದರು.
ಹನ್ನೆರಡು ಜಿಲ್ಲೆಗಳಲ್ಲಿ ಸಮೀಕ್ಷೆ: ಸಮೀಕ್ಷೆಯ ಅವಧಿಯಲ್ಲಿ, ಕೋಲಾರ, ಧಾರವಾಡ, ದಾವಣಗೆರೆ, ಬಳ್ಳಾರಿ, ಬೀದರ್, ಹಾಸನ, ಕಲಬುರ್ಗಿ, ವಿಜಯನಗರ, ಬೆಂಗಳೂರು ನಗರ, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನ ಔಷಧಾಲಯಗಳಲ್ಲಿ ಎಸ್‌ಎಎಕೆ ಸದಸ್ಯರು ಆಸ್ಪತ್ರೆಯಿಂದ ನೇರವಾಗಿ ಔಷಧಾಲಯಕ್ಕೆ ಬಂದ ರೋಗಿಗಳೊಂದಿಗೆ ಚರ್ಚಿಸಿ ಈ ಮಾಹಿತಿ ಕಲೆಹಾಕಲಾಗಿದೆ. ಸಮೀಕ್ಷೆಗೆ ಒಳಗಾದ ರೋಗಿಗಳು ಪ್ರತಿ ಭೇಟಿಗೆ ಸರಾಸರಿ 433 ರಿಂದ 1,800 ರವರೆಗೆ ಸ್ವಂತ ಹಣ ಪಾವತಿಸಿ ಔಷಧಿ ಖರೀದಿಸಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ಮನೋಹರ ಎಳವರ್ತಿ ಹೇಳಿದರು.
ಎಸ್‌ಎಎಕೆ ಆಗ್ರಹ: ಸಮೀಕ್ಷೆ ವರದಿ ಬಹಿರಂಗ ಪಡಿಸಿರುವ ಎಸ್‌ಎಎಕೆ ರಾಜ್ಯದಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಉಚಿತ ಔಷಧ ದೊರೆಯುವಂತಾಗಬೇಕು. ರೋಗಿಗಳು ಮೂಲಭೂತ ಔಷಧಿಗಳನ್ನೂ ಹೊರಗಿನಿಂದ ಖರೀದಿಸಲು ಒತ್ತಾಯಿಸಿದರೆ ಸರ್ಕಾರಿ ಆಸ್ಪತ್ರೆಗಳ ಉದ್ದೇಶವೇನು? ತಮಿಳುನಾಡು ಸರ್ಕಾರದ ಕ್ರಮಗಳನ್ನು ಯಾವುದೇ ವಿಳಂಬ ಮಾಡದೆ ಕರ್ನಾಟಕದಲ್ಲಿ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜಸ್ಥಾನದ ಮಾದರಿಯಲ್ಲಿ ಕರ್ನಾಟಕದಲ್ಲಿ ಆರೋಗ್ಯ ರಕ್ಷಣೆಯ ಹಕ್ಕು ಕಾನೂನನ್ನು ಜಾರಿಗೆ ತರಬೇಕು. ಕರ್ನಾಟಕ ಆರೋಗ್ಯ ದೃಷ್ಟಿ ಸಮಿತಿಯ ಶಿಫಾರಸಿನಂತೆ ಆರೋಗ್ಯದ ಮೇಲಿನ ವೆಚ್ಚವನ್ನು ಈಗಿರುವ ಶೇ. 0.8 ರಿಂದ ಶೇ. 2.5 ಕ್ಕೆ ಹೆಚ್ಚಿಸುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಪೌಷ್ಠಿಕಾಂಶದ ಬೆಂಬಲದ ಅಗತ್ಯ: ಎಚ್‌ಐವಿ ಮತ್ತು ಕ್ಷಯ ರೋಗಿಗಳಿಗೆ ಸರ್ಕಾರ ಪೌಷ್ಟಿಕಾಂಶದ ಬೆಂಬಲದ ಅಗತ್ಯವಿದ್ದು, ಈ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ವಹಿಸಬೇಕು. ಸರ್ಕಾರವು ಸಾರ್ವಜನಿಕ-ಖಾಸಗಿ- ಸಹಭಾಗಿತ್ವದ (ಪಿಪಿಪಿ) ಮೂಲಕ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. ಆರೋಗ್ಯ ಸೇವೆಯನ್ನು ಪಡೆಯಲು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಮುಂತಾದ ದಾಖಲೆಗಳ ಅಗತ್ಯವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
