ಬೆಂಗಳೂರು:ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಲ್ಲಿ ಶೈಕ್ಷಣಿಕ ಜಾಗೃತಿ ಹೆಚ್ಚಾದಂತೆ ವಸತಿ ಶಾಲೆ ಹಾಗೂ ಹಾಸ್ಟೆಲ್ ಅವಲಂಬನೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ವಿಪರೀತವಾಗಿದೆ. ಆದರೆ, ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ವಸತಿ ಶಾಲೆ, ಹಾಸ್ಟೆಲ್​ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಮೊದಲು ಎದುರಾಗುವುದೇ ಸೌಲಭ್ಯಗಳ ಮರೀಚಿಕೆಯ ತೋರಣ. ಇತ್ತೀಚೆಗೆ ಕೋಲಾರ ಜಿಲ್ಲೆಯ ವಸತಿಶಾಲೆಯಲ್ಲಿ ನಡೆದ ಅಮಾನವೀಯ ಘಟನೆ ಹಿನ್ನೆಲೆಯಲ್ಲಿ ವಿಜಯವಾಣಿ ರಾಜ್ಯದುದ್ದಗಲಕ್ಕೂ ವಸತಿ ಶಾಲೆ, ಹಾಸ್ಟೆಲ್​ಗಳ ಕುಂದುಕೊರತೆ ಕುರಿತು ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಕರುಳು ಕಿವುಚುವಂಥ ದಯನೀಯ ಪರಿಸ್ಥಿತಿ ಬೆಳಕಿಗೆ ಬಂದಿದೆ. ಈ ವರದಿಯ ಮೂಲಕ ಸರ್ಕಾರವನ್ನು ಎಚ್ಚರಿಸುವ ಹಾಗೂ ಸಮಾಜಕ್ಕೆ ವಾಸ್ತವಾಂಶ ತಿಳಿಸುವ ಪ್ರಯತ್ನ ಮಾಡಲಾಗಿದೆ.
ವಸತಿ ಶಾಲೆ ಪ್ರವೇಶಕ್ಕೆ ಬೇಡಿಕೆ:ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೖೆಸ್) ಅಧೀನದಡಿ ನಿರ್ವಹಣೆಯಾಗುವ ವಸತಿ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಮೀಣ ಭಾಗದ ಪಾಲಕರು ಮಕ್ಕಳಿಗೆ ಸೌಲಭ್ಯಸಹಿತ ಉತ್ತಮ ಶಿಕ್ಷಣ ಕೊಡಿಸಲು ವಸತಿ ಶಾಲೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್ಚೆಚ್ಚು ಬೇಡಿಕೆ ಬರುತ್ತಿದೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸಲು ಆಸಕ್ತಿ ತೋರುತ್ತಿದ್ದಾರೆ. ಒಟ್ಟಾರೆ ಕ್ರೖೆಸ್​ಗೆ ವಸತಿ ಶಾಲೆ ನಡೆಸಲು ವಾರ್ಷಿಕ 4,500 ಕೋಟಿ ರೂ. ಬೇಕಾಗುತ್ತದೆ. ಅದರಲ್ಲಿ ಕಟ್ಟಡಗಳ ಉದ್ದೇಶಕ್ಕೆ 1,200 ಕೋಟಿ ರೂ. ಬೇಕಾಗುತ್ತದೆ. ಊಟ, ತಿಂಡಿ, ಕೊಡಲು 1,000 ಕೋಟಿ ಅಗತ್ಯ ಇರುತ್ತದೆ. ಪ್ರತಿ ವರ್ಷ ದಿಂಬು, ಹಾಸಿಗೆ, ಸಮವಸ್ತ್ರ, ಪುಸ್ತಕಗಳಿಗೆ 1,000 ಕೋಟಿ ರೂ. ಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ವಸತಿ ಶಾಲೆ ಕಟ್ಟಡಗಳ ಮುಂದುವರಿದ ಕಾಮಗಾರಿ ಮುಗಿಸಲು 789 ಕೋಟಿ ರೂ., ದುರಸ್ತಿ ಮತ್ತು ಹೆಚ್ಚುವರಿ ಶೌಚಾಲಯ, ಸ್ನಾನ ಗೃಹ ನಿರ್ವಣಕ್ಕೆ 300 ಕೋಟಿ ರೂ., ವಸತಿ ಶಾಲೆ ಆವರಣದ ತಡೆ ಗೋಡೆಗೆ 147 ಕೋಟಿ ರೂ., ಶೌಚಗೃಹಗಳನ್ನೊಳಗೊಂಡಂತೆ ಮೂಲಸೌಕರ್ಯಕ್ಕೆ 120 ಕೋಟಿ ರೂ., ನಿವೇಶನ ಲಭ್ಯ ಇರುವ ಕಡೆ ಶಾಲಾ ಕಟ್ಟಡ ನಿರ್ವಣಕ್ಕೆ 700 ಕೋಟಿ ರೂ., ವಸತಿ ಶಾಲೆ ಬೆಂಚ್, ಡೆಸ್ಕ್, ಡೈನಿಂಗ್ ಟೇಬಲ್​ಗೆ 471 ಕೋಟಿ ರೂ. ಬೇಕಾಗುತ್ತದೆಂಬ ಅಂದಾಜು ಸಮಾಜ ಕಲ್ಯಾಣ ಇಲಾಖೆ ಮುಂದಿದೆ.
ದುಡ್ಡಿಗಿಲ್ಲ ಕೊರತೆಸರ್ಕಾರ ಬೇರೆ ಬೇರೆ ಉದ್ದೇಶಕ್ಕೆ ಸಾಕಷ್ಟು ಖರ್ಚು ಮಾಡುತ್ತದೆ. ಅದರಲ್ಲೂ ಎಸ್​ಸಿ ಎಸ್​ಪಿ/ಟಿಎಸ್​ಪಿ ಅನುದಾನ ಬಳಕೆಗಾಗಿ 2013ರಲ್ಲಿ ಕಾನೂನು ಜಾರಿ ಮಾಡಲಾಗಿದ್ದು, ಕಾನೂನು ಜಾರಿಯಾದ ಕಳೆದ 10 ವರ್ಷಗಳಲ್ಲಿ 2.5 ಲಕ್ಷ ಕೋಟಿ ರೂ. ಮೀಸಲಾಗಿದೆ. ಈ ಹಣವನ್ನು ಬಳಸಿಕೊಂಡು ಹಾಸ್ಟೆಲ್​ಗಳನ್ನು ಆಧುನೀಕರಣಗೊಳಿಸಲು ಹಾಗೂ ಮಕ್ಕಳಿಗೆ ಅಗತ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ ನೀಡಲು ಅವಕಾಶವಿದೆ. ಇದೇ ಸಂಗತಿಯನ್ನು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಪ್ರಸ್ತಾಪಿಸಿದ್ದು, ಅನ್ಯ ಉದ್ದೇಶಕ್ಕೆ ಬಳಸಿಕೊಂಡ ಹಣವನ್ನು ಅಥವಾ ವಿವಿಧ ಇಲಾಖೆಗಳಲ್ಲಿ ಉಳಿಕೆಯಾದ ಎಸ್​ಸಿ ಎಸ್​ಪಿ/ಟಿಎಸ್​ಪಿ ಹಣವನ್ನು ವಾಪಸ್ ಪಡೆದು ಹಾಸ್ಟೆಲ್​ಗೆ ಬಳಸಿ ಎಂದು ಸಲಹೆ ನೀಡಿದೆ.
ಮಕ್ಕಳ ಕಣ್ಣೀರು ಒರೆಸೋಣಕಾಲಕಾಲಕ್ಕೆ ಸರ್ಕಾರವು ಸಮಸ್ಯೆಯ ಆಳ ಅರಿಯದ ಪರಿಣಾಮ ವಸತಿ ಶಾಲೆಗಳಲ್ಲಿ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದ್ದು, ಮಕ್ಕಳು ಸೌಲಭ್ಯ ಸಿಗದೇ ಅಕ್ಷರಶಃ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಾಗೆಂದು ಒಮ್ಮಿಂದೊಮ್ಮೆಲೆ ಬಗೆಹರಿಸಲು ಸಾಧ್ಯವಾಗದಂತಹ ಸಮಸ್ಯೆಯೇನೂ ಇದಲ್ಲ. ಇಚ್ಛಾ ಶಕ್ತಿ ಬೇಕಷ್ಟೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಸಚಿವರು, ಇಲಾಖಾ ಮುಖ್ಯಸ್ಥ ಅಧಿಕಾರಿಗಳು ತಮಗೆ ಸಿಕ್ಕ ಅಪರೂಪದ ಅವಕಾಶ ಎಂಬ ಅರಿವು ತಂದುಕೊಂಡು ಮೈಚಳಿ ಬಿಟ್ಟು ಅಖಾಡಕ್ಕಿಳಿದರೆ ಮಕ್ಕಳ ಕಣ್ಣೀರು ಒರೆಸಿ ಭದ್ರ ಭವಿಷ್ಯದ ಭರವಸೆ ಬಿತ್ತಬಹುದು.
ಕೊರತೆಗಳ ತೋರಣ
* ವಾರ್ಡನ್​ಗಳ ತೀವ್ರ ಅಭಾವ
* ಕಂಪ್ಯೂಟರ್ ಶಿಕ್ಷಣ ನೀಡಲು ಕಂಪ್ಯೂಟರ್​ಗಳೇ ಇಲ್ಲ
* ಮಕ್ಕಳ ಸಂಖ್ಯೆ ಹೆಚ್ಚಾಗಿ ಶೌಚಗೃಹಕ್ಕೂ ಪರದಾಟ
* ಸಮಯಕ್ಕೆ ಸರಿಯಾಗಿ ಕೈ ಸೇರದ ಸೋಪು, ಬ್ರಶ್ ಕಿಟ್
* ಹಲವೆಡೆ ಸುರಕ್ಷತೆ ಆತಂಕ
* ಗುಣಮಟ್ಟದ ಆಹಾರವಿಲ್ಲ
* ಕೆಲವೆಡೆ ಮಂಚ, ಹಾಸಿಗೆ, ದಿಂಬು ಕೂಡ ಇಲ್ಲ
* ಕಾಲಕಾಲಕ್ಕೆ ರಿಪೇರಿ ನಡೆಸದೇ ಒಳಚರಂಡಿ ಸಮಸ್ಯೆ
* ಹೊಸ ವಸತಿ ಶಾಲೆಗಳಿಗೆ ಇಲ್ಲ ಬೆಂಚ್, ಡೆಸ್ಕ್
ಸದನ ಸಮಿತಿ ಹೇಳಿದ ಐದು ಕಠೋರ ಸತ್ಯಗಳುವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ವಸತಿ ಶಾಲೆ ಹಾಗೂ ಹಾಸ್ಟೆಲ್ ಕುರಿತು ಇತ್ತೀಚೆಗಷ್ಟೇ ವರದಿಯೊಂದನ್ನು ಶಾಸನ ಸಭೆಯಲ್ಲಿ ಮಂಡಿಸಿತು. ಆ ವರದಿಯಲ್ಲಿ ಅನೇಕ ಕಠೋರ ಸಂಗತಿಗಳನ್ನು ಹೊರಹಾಕಿದೆ.
2. ಸರಿಯಾಗಿ ಹಾಸಿಗೆ, ಮಂಚಗಳಿಲ್ಲದೇ ಒಬ್ಬ ವಿದ್ಯಾರ್ಥಿ ಮಲಗುವ ಸ್ಥಳದಲ್ಲಿ ಇಬ್ಬರು- ಮೂವರು ಮಕ್ಕಳು ಮಲಗುವ ಪರಿಸ್ಥಿತಿ ಇದೆ.
3. ವಿದ್ಯಾರ್ಥಿನಿಯರ ಹಾಸ್ಟೆಲ್​ಗಳಲ್ಲೂ ಸಹ ಇದೇ ಪರಿಸ್ಥಿತಿ ಆಗಿರುವುದು ಶೋಚನೀಯ. ವಾರ್ಡನ್ ಕೊರತೆ ಗಂಭೀರವಾಗಿದೆ.
4. ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಹಾಗೂ ಸರಬರಾಜು ಪರಿಶೀಲಿಸಲು ತಾಲೂಕು, ಜಿಲ್ಲಾಮಟ್ಟದಲ್ಲಿ ಜವಾಬ್ದಾರಿ ಇಲ್ಲ.
5. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್​ಗಳು ದುಸ್ಥಿತಿಯಲ್ಲಿವೆ. ಅಲ್ಲಿ ಸರಿಯಾದ ಶೌಚಗೃಹ, ಸ್ನಾನಗೃಹಗಳು ಇಲ್ಲದೇ ತೆರೆದ ಜಾಗದಲ್ಲಿ ನಿತ್ಯಕರ್ಮ ಪೂರೈಸಬೇಕಿದೆ.
ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

ಮಿಚೆಲ್​ ಸ್ಟಾರ್ಕ್​ಗೆ KKR​ ಅಷ್ಟೊಂದು ದುಡ್ಡು ಸುರಿದಿದ್ದೇಕೆ? 24.75 ಕೋಟಿ ರೂ. ಬಗ್ಗೆ ಸ್ಟಾರ್ಕ್​ ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
