| ಸುನಿಲ್ ಪೊನ್ನೇಟಿ ಮಡಿಕೇರಿ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ ಎಂಬ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗೆ ವ್ಯತಿರಿಕ್ತವಾಗಿ ಭಾರತೀಯ ಭೂ ವೈಜ್ಞಾನಿಕ ಸರ್ವೆಕ್ಷಣ ಇಲಾಖೆ ನಿವೃತ್ತ ಉಪ ಮಹಾನಿರ್ದೇಶಕ ಡಾ.ಎಚ್.ಎಸ್.ಎಂ. ಪ್ರಕಾಶ್ ಮಾಹಿತಿ ನೀಡಿದ್ದಾರೆ. ಭಾರತದ ಸುತ್ತಲಿನ ಜ್ವಾಲಾಮುಖಿಗಳ ಚಟುವಟಿಕೆಗಳ ಅಧ್ಯಯನವನ್ನು ತಮ್ಮ ವಾದಕ್ಕೆ ಆಧಾರವನ್ನಾಗಿ ನೀಡಿದ್ದಾರೆ. ಜೂನ್ ಆರಂಭಕ್ಕೆ ಎಲ್​ನಿನೋ ಪರಿಣಾಮ ಅಂತ್ಯವಾಗಲಿರುವುದರಿಂದ ಜೂನ್​ನಿಂದ ಸೆಪ್ಟೆಂಬರ್​ವರೆಗಿನ ನೈಋತ್ಯ ಮುಂಗಾರು ಅವಧಿಯಲ್ಲಿ ದೇಶದಲ್ಲಿ ಹೆಚ್ಚು ಮಳೆ ಸುರಿಯಲಿದೆ. ಈ ಬಾರಿ ಶೇ.106 ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಎಲ್​ನಿನೋ ಬಳಿಕ ಲಾ ನೀನಾ ಪರಿಸ್ಥಿತಿಗಳ ಸಹಾಯದಿಂದ ಆಗಸ್ಟ್, ಸೆಪ್ಟೆಂಬರ್​ನಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದೂ ಐಎಂಡಿ ಹೇಳಿದೆ. ಇದು ಅನ್ನದಾತರ ಮುಖದಲ್ಲಿ ಸಂತಸ ಮೂಡಿಸಿದೆ. ಆದರೆ ಜಿಯೋಮೀಟಿಯೋರೋಲಜಿ ವಿಜ್ಞಾನ ಸಿದ್ಧಾಂತದ ಮೂಲಕ ಮಳೆಯ ಅಧ್ಯಯನ ನಡೆಸುತ್ತಿರುವ ಭಾರತೀಯ ಭೂ ವೈಜ್ಞಾನಿಕ ಸರ್ವೆಕ್ಷಣ ಇಲಾಖೆ ಈ ಬಾರಿ ಮಳೆ ಕೊರತೆ ಆಗುತ್ತದೆ ಎಂದು ಹೇಳಿದೆ.
ಕಳೆದ ವರ್ಷ ಮುಂಗಾರು ಮಳೆ ಸಾಮಾನ್ಯವಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಆದರೆ ಶೇ.26 ಕೊರತೆಯಾಗಿದೆ. ಸ್ಕೈಮೆಟ್ ಕೂಡ ಸಾಮಾನ್ಯ ಮುಂಗಾರಿನ ಮುನ್ಸೂಚನೆ ನೀಡಿದೆ. ಅಲ್ಲಿಯ ತಜ್ಞರು ಸಂಖ್ಯಾಶಾಸ್ತ್ರ ಮತ್ತು ಗಣಿತದ ಮಾದರಿಗಳನ್ನು ಅನುಸರಿಸುತ್ತಾರೆ. ಆದರೆ, ಇದನ್ನು ಅರಿಯಲು ಭೂ ವಿಜ್ಞಾನ ಅನುಸರಿಸಬೇಕು ಎಂದು ಪ್ರಕಾಶ್ ತಿಳಿಸಿದ್ದಾರೆ.
ಪ್ಲೇಟ್ ಟೆಕ್ಟೋನಿಕ್ಸ್, ಜ್ವಾಲಾಮುಖಿ ಚಟುವಟಿಕೆ ಇತ್ಯಾದಿಗಳನ್ನು ಗಮನಿಸಿ ಮಳೆಯ ಮುನ್ಸೂಚನೆ ನೀಡುವಂತಾಗಬೇಕು ಎಂದ ಅವರು ತಮ್ಮ ಮಾನದಂಡಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಭಾರತ ಸುತ್ತುವರಿದಂತೆ ನೆಲದ ಮೇಲೆ ಅಥವಾ ಸಮುದ್ರದ ಒಳಗೆ ಇರುವ ಹಲವಾರು ದೊಡ್ಡ ಜ್ವಾಲಾಮುಖಿಗಳು ನಿಷ್ಕ್ರಿಯ ಆಗಿವೆ. ಇದರಿಂದ ಆವಿಯ ಮೂಲಗಳು ಸ್ಥಗಿತಗೊಂಡಿವೆ. ಜ್ವಾಲಾಮುಖಿಗಳ ಚಟುವಟಿಕೆಗಳು ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೊಡ್ಡ ಜ್ವಾಲಾಮುಖಿಗಳು 2017, 2018 ಹಾಗೂ 2019ರಲ್ಲಿ ಸಕ್ರಿಯವಾಗಿದ್ದವು. ಹೀಗಾಗಿ, ಆ ವರ್ಷಗಳಲ್ಲಿ ಭಾರಿ ಮಳೆಯಾಗಿತ್ತು. ಈ ಬಾರಿ ಅಂಥ ವಿದ್ಯಮಾನಗಳು ಕಾಣದಿರುವುದರಿಂದ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎನ್ನುತ್ತಾರೆ ಪ್ರಕಾಶ್.
ಸಕ್ರಿಯ ಭೂಕಂಪನ ಮತ್ತು ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಪೂರಕವಾಗಿ 2017, 2018 ಹಾಗೂ 2019ರ ಕೊಡಗು, ಕೇರಳದಲ್ಲಿ ಮಹಾಮಳೆ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಭಾರತಕ್ಕೆ ನಿಕಟವಾಗಿರುವ ಜ್ವಾಲಾಮುಖಿ ವಲಯಗಳು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದವು. ಆದರೆ, ಈ ವರ್ಷ ಭಾರತಕ್ಕೆ ಸಮೀಪದಲ್ಲಿ ಇಂತಹ ಸಕ್ರಿಯ ಜ್ವಾಲಾಮುಖಿಗಳು ಇಲ್ಲದ ಕಾರಣ ಮಳೆಯ ಪ್ರಮಾಣ ಕಡಿಮೆಯೇ ಇರುತ್ತದೆ ಎನ್ನುತ್ತಾರೆ ಪ್ರಕಾಶ್. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಪ್ರಕಾಶ್ ಮಳೆಯ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಸ್ಥಳೀಯ ಭೂರಚನೆ, ಹವಾಮಾನ, ಜಲಮೂಲಗಳ ಮಾಹಿತಿ ಕಲೆ ಹಾಕಿದ್ದು, ಪ್ರಾಕೃತಿಕ ಬದಲಾವಣೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
ಉ.ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮೇನಲ್ಲಿ 45-46ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಕನಿಷ್ಠದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ವರದಿಯಾಗುತ್ತಿದೆ. ಮೇ 15ರ ನಂತರ ರಾಜ್ಯದಲ್ಲಿ ತಾಪಮಾನ ಇಳಿಮುಖವಾಗಬಹುದು.
| ಸಿ.ಎಸ್. ಪಾಟೀಲ್ ಹವಾಮಾನ ಇಲಾಖೆ ನಿರ್ದೇಶಕ
ಬೆಂಗಳೂರು:ರಾಜ್ಯದ 15 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಶಾಖ ಅಲೆ ಮುಂದುವರಿಯಲಿದೆ. ಕಲಬುರಗಿ, ಬೀದರ್, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೇ 5ರವರೆಗೆ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಏ.28ರಿಂದ ಮೇ 1ರವರೆಗೆ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಮುಂದಿನ ಐದು ದಿನಗಳಲ್ಲಿ ರಾಜ್ಯದ ಹಲವೆಡೆ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿ.ಸೆ. ಹೆಚ್ಚಳವಾಗಲಿದೆ. ಕೆಲವೆಡೆ ಮಾತ್ರ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಶನಿವಾರ ಕಲಬುರಗಿಯಲ್ಲಿ 42.4 ಡಿ.ಸೆ. ವರದಿಯಾಗಿದೆ. ರಾಯಚೂರು 42.2, ವಿಜಯಪುರ 40.6, ಬಾಗಲಕೋಟೆ 41.6, ಚಿಕ್ಕನಾಯಕನಹಳ್ಳಿ 41.4, ಮಂಡ್ಯ 39.2, ಚಾಮರಾಜನಗರ 39.1 ಡಿ.ಸೆ. ದಾಖಲಾಗಿದೆ.
ಬೆಂಗಳೂರಿನಲ್ಲಿ ಅಧಿಕ ಬಿಸಿ:ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಅತ್ಯಧಿಕ 38 ಡಿ.ಸೆ.ಉಷ್ಣಾಂಶ ಕಂಡುಬಂದಿದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಮುಂದಿನ ದಿನಗಳಲ್ಲಿ 40 ಡಿ.ಸೆ.ಉಷ್ಣಾಂಶ ವರದಿಯಾಗುವ ಸಾಧ್ಯತೆ ಇದೆ. ದೀರ್ಘಾವಧಿವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವವರು, ಚಿಕ್ಕ ಮಕ್ಕಳು, ವೃದ್ಧರು, ಗಂಭೀರ ಕಾಯಿಲೆಗಳಿಂದ ಒಳಲುತ್ತಿರುವವವರು, ಜಮೀನಿನಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಬೇಕು.

| ಪಂಕಜ ಕೆ.ಎಂ. ಬೆಂಗಳೂರು
ದಿನೇದಿನೆ ಏರುತ್ತಿರುವ ತಾಪಮಾನದಿಂದಾಗಿ ಕ್ಯಾಂಡಿಡಾ ಇನ್ಪೆಕ್ಷನ್, ಫಂಗಲ್ ಇನ್ಪೆಕ್ಷನ್, ಚಿಕನ್ ಪಾಕ್ಸ್, ಮೆಲಾಸ್ಮಾ, ಸನ್ ಟ್ಯಾನ್​ನಂತಹ ಚರ್ಮ ಸಮಸ್ಯೆಗಳು ಜನರನ್ನು ಹೈರಾಣಾಗಿಸಿವೆ. ನಗರದಲ್ಲಿ ಬಿಸಿಲ ಜಳದ ಜತೆಗೆ ನೀರಿನ ಸಮಸ್ಯೆ ಎದುರಾಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚರ್ಮದ ಸಮಸ್ಯೆ ಶೇ.40 ಹೆಚ್ಚಳವಾಗಿದೆ. ತ್ವಚೆಯ ಕಾಳಜಿ ವಹಿಸದಿದ್ದರೆ ಸನ್ ಟ್ಯಾನ್, ಚರ್ಮದ ಡೀಹೈಡ್ರೇಷನ್, ಕೆಂಪು ದದ್ದು, ಬೆವರು ಹಾಗೂ ಧೂಳಿನ ಅಲರ್ಜಿಯಂತಹ ಸಮಸ್ಯೆ ಕಾಡಲಿದೆ ಎನ್ನುತ್ತಾರೆ ಚರ್ಮರೋಗ ತಜ್ಞರು. ಬೇಸಿಗೆಯಲ್ಲಿ ದೇಹವು ಹೆಚ್ಚು ಬೆವರುವುದು ಸಾಮಾನ್ಯ, ಬಹಳಷ್ಟು ಮಂದಿಗೆ ಇದು ಸೋಂಕಾಗಿ ಬಾಧಿಸಲಿದೆ. ಅತಿಯಾದ ಬೆವರಿನಿಂದ ಅಲರ್ಜಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ಹೀಗಾಗಿ ದೇಹಾರೋಗ್ಯದ ಜತೆಗೆ ಚರ್ಮದ ರಕ್ಷಣೆಗೂ ಗಮನಹರಿಸುವ ಅಗತ್ಯವಿದೆ.
ಚಿಕನ್ ಪಾಕ್ಸ್: ವಾತಾವರಣ ಧೂಳಿನಿಂದ ಕೂಡಿರುವುದರಿಂದ ಮಕ್ಕಳಲ್ಲಿ ಚಿಕನ್​ಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇದಲ್ಲದೆ ಕೈಕಾಲುಗಳ ಬೆರಳು ಸಂದು, ಕಿವಿಯ ಹಿಂಭಾಗದಲ್ಲಿ ಕೆಂಪು ಗುಳ್ಳೆಗಳಿಂದ ಕೂಡಿದ ಅಲರ್ಜಿ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದು ನೋವಿನಿಂದ ಕೂಡಿರುವ ಪರಿಣಾಮ ಮಕ್ಕಳಲ್ಲಿ ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.
ಕೂದಲಿನ ಸಮಸ್ಯೆ:ಬೇಸಿಗೆಯಲ್ಲಿ ಕೂದಲ ಬುಡದಲ್ಲಿ ಬೆವರು ಅಂಟಿ ತಲೆಹೊಟ್ಟು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಆರೋಗ್ಯ, ಚರ್ಮದ ಜತೆಗೆ ಕೂದಲಿನ ಸಮಸ್ಯೆಗಳಿಂದ ಪಾರಾಗಲು ಹೆಚ್ಚು ದ್ರವರೂಪದ ಆಹಾರ ಸೇವಿಸಬೇಕು. ಗಂಜಿ, ತಿಳಿಮಜ್ಜಿಗೆ, ಎಳನೀರು, ಹಣ್ಣಿನ ರಸ, ಸೌತೆಕಾಯಿ, ಕಲ್ಲಂಗಡಿ ಹಣ್ಣು, ಮೋಸಂಬಿ, ಕಿತ್ತಲೆ, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬೇಕು. ಮೊಳಕೆ ಕಾಳು, ತರಕಾರಿ, ಹಣ್ಣಿನ ಸಲಾಡ್ ಹೆಚ್ಚು ಸೇವಿಸುವುದು ಉತ್ತಮ.
ಜಿಯೋಮೀಟಿಯೋರೋಲಜಿ ವಿಜ್ಞಾನದ ಅಧ್ಯಯನದ ಆಧಾರದಲ್ಲಿ ಇದು ನೂರಕ್ಕೆ ನೂರು ವೈಜ್ಞಾನಿಕ ಮುನ್ಸೂಚನೆ. ಸಕ್ರಿಯ ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬಾರಿ ಭಾರತಕ್ಕೆ ಹತ್ತಿರದಲ್ಲಿ ಇಂತಹ ಜ್ವಾಲಾಮುಖಿಗಳು ಕಂಡುಬರುತ್ತಿಲ್ಲ. 2019ರಲ್ಲಿ ಭಾರಿ ಮಳೆಯ ನನ್ನ ಭವಿಷ್ಯ ಸರಿಯಾಗಿತ್ತು. 2020, 2021, 2022 ರಲ್ಲಿ ನಾನು ಸಾಮಾನ್ಯ ಮುಂಗಾರು ಊಹಿಸಿದ್ದೆ. 2023ಕ್ಕೆ ನೈಋತ್ಯ ಮತ್ತು ಈಶಾನ್ಯ ಮುಂಗಾರಿನಲ್ಲೂ ಮಳೆಯ ಕೊರತೆಯನ್ನೂ ಊಹಿಸಿದ್ದು, ಎಲ್ಲವೂ ಸರಿ ಎಂದು ಸಾಬೀತಾಗಿದೆ.
| ಡಾ. ಎಚ್.ಎಸ್.ಎಂ. ಪ್ರಕಾಶ್ ಭೂ ವಿಜ್ಞಾನಿ
ಬಿಸಿಲ ತೀವ್ರವಾಗಿರುವ ಪರಿಣಾಮ ಕಳೆದ ಕೆಲ ದಿನಗಳಿಂದ ಫಂಗಲ್ ಇನ್​ಫೆಕ್ಷನ್ (ನಿತ್ಯ ಶೇ. 40) ಪ್ರಕರಣಗಳು ವರದಿಯಾಗುತ್ತಿವೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರವಾಗಲಿದೆ. ಬೊಜ್ಜು, ಮಧುಮೇಹ, ಸೂಕ್ಷ್ಮ ಚರ್ಮದವರಲ್ಲಿ ಹಾಗೂ ಬಿಸಿಲು ಮತ್ತು ಧೂಳಿನಲ್ಲಿ ಹೆಚ್ಚು ಸಮಯ ಕಳೆಯುವವರಲ್ಲಿ ಸಮಸ್ಯೆ ಕಂಡುಬರುತ್ತಿದೆ.
| ಡಾ. ಗಿರೀಶ್ ಚರ್ಮರೋಗ ತಜ್ಞರು, ಇಎಸ್​ಐ ಆಸ್ಪತ್ರೆ, ರಾಜಾಜಿನಗರ
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಎಸ್​​ಐಟಿ ತನಿಖೆಗೆ ಸಿಎಂ ಆದೇಶ, ವಿದೇಶಕ್ಕೆ ಹಾರಿದ್ರಾ ಹಾಸನ ಸಂಸದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
