ಬೆಂಗಳೂರು:ಲಾಕ್​ಡೌನ್​ ಸಮಯದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚಿಸಿದ್ದ ಮಹಿಳೆಯೊಬ್ಬಳನ್ನು ಇದೀಗ ಮೋಸ ಹೋದವರೇ ಹಿಡಿದು ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ಐಟಿ ಕಂಪನಿಗಳಿಗೆ ಕಾಫಿ-ಟೀ, ಊಟ ಸರಬರಾಜು ಮಾಡುವುದಾಗಿ ಹೇಳಿಕೊಂಡಿದ್ದ ಆಕೆ ನೂರಾರು ಜನರಿಗೆ ಸಾವಿರಾರು ರೂಪಾಯಿ ಮೋಸ ಮಾಡಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಮರ್ಮಾಂಗವನ್ನೇ ಕತ್ತರಿಸಿ ಕೊಂದ ಪಾಪಿಗಳು! ಆಣೆಕಟ್ಟಿನ ಮೇಲಿತ್ತು ಯುವಕನ ಮೃತದೇಹ
ನಂದಿನಿ ಹೆಸರಿನ ಮಹಿಳೆಯನ್ನು ಇದೀಗ ಅಮೃತಹಳ್ಳಿ ಠಾಣೆಗೊಪ್ಪಿಸಲಾಗಿದೆ. ಈಕೆ ತಾನು ಐಟಿ ಕಂಪನಿಗಳಿಗೆ ಕಾಫಿ-ಟೀ, ಊಟ ಸರಬರಾಜು ಮಾಡುವುದಾಗಿ ಹೇಳಿಕೊಂಡಿದ್ದಳು. ಅದಕ್ಕೆಂದು ನೀವು ಕಾಫಿ ಟೀ ಮತ್ತು ಊಟ ಸಿದ್ಧಮಾಡಿಕೊಡಿ ಎಂದು ಕೆಂಪಾಪುರ ವ್ಯಾಪ್ತಿಯ ಅನೇಕ‌ ಜನರಿಗೆ ಖಾಯಂ ಉದ್ಯೋಗದ ಭರವಸೆ ನೀಡಿದ್ದಳು. ಡೆಪಾಸಿಟ್ ಹಣವೆಂದು ಒಂದೊಂದು ಲಕ್ಷ ಹಣ ಕೊಡಿ ಎಂದು ಹೇಳಿ ವಸೂಲಿ ಮಾಡಿದ್ದಳು.
ಇದನ್ನೂ ಓದಿ:ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿ ಇರಬೇಕಿತ್ತು ಆದರೆ ವಿಧಾನಸೌಧವನ್ನೇ ಹುಚ್ಚಾಸ್ಪತ್ರೆ ಮಾಡಿಕೊಂಡಿದ್ದಾರೆ ಎಂದ ವಾಟಾಳ್​!
ನಂದಿನಿಯ ಆರ್ಡರ್​ನಂತೆ ಜನರು ಕಾಫಿ, ಟೀ, ಊಟ ತಯಾರಿಸಿ ಕೊಡುತ್ತಿದ್ದರು. ಆರಂಭದಲ್ಲಿ ಕೆಲವರಿಗೆ ನಂದಿನಿ ಹಣ ಪಾವತಿಸಿದ್ದಳು. ಇತ್ತೀಚಿನ ದಿನಗಳಲ್ಲಿ ಹಣವನ್ನ ನೀಡದೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಈ ಕುರಿತಾಗಿ ಅನೇಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಫುಡ್ಡೂ ಹೋಯ್ತು, ದುಡ್ಡೂ ಹೋಯ್ತು ಎಂದು ದೂರು ನೀಡಿದ್ದರು. ಇದೀಗ ದೂರದಾರರೇ ಆರೋಪಿಯನ್ನು ಹುಡುಕಿ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.
‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 11 =
Remember me
