ಬೆಂಗಳೂರು:ಕರೊನಾ ವಿರುದ್ಧ ಹೋರಾಡುವುದರಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಮಾಸ್ಕ್ ತಯಾರಿಕೆ, ಸ್ಯಾನಿಟೈಜರ್ ಉಚಿತವಾಗಿ ವಿತರಿಸು ವುದರಿಂದ ಹಿಡಿದು ಅನ್ನ ನೀಡುವ ಕೈಂಕರ್ಯದವರೆಗೆ ಸಾವಿರಾರು ಹೆಣ್ಣುಮಕ್ಕಳು ಶ್ರಮಿಸುತ್ತಿದ್ದಾರೆ. ಮತ್ತೆ ಕೆಲವರು ನೀತಿ- ನಿರೂಪಣೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಶ್ರಮಿಸುತ್ತಿದ್ದಾರೆ. ಇಂತಹ ಕೆಲವರನ್ನು ಪರಿಚಯಿಸುವ ಒಂದು ಪ್ರಯತ್ನ ಇಲ್ಲಿದೆ.
1 ಆರ್​. ಲತಾ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
ಕ ರೊನಾ ಪೀಡಿತ ಪ್ರದೇಶಗಳ ಸೀಲ್​ಡೌನ್ ಮಾಡಬೇಕೆಂಬ ಪರಿಕಲ್ಪನೆ ಮೊಳಕೆಯೊಡೆಯುವ ಮುನ್ನವೇ ಅದನ್ನು ಜಾರಿಗೊಳಿಸಿ ಆ ಪ್ರಯೋಗದಲ್ಲಿ ಯಶಸ್ಸು ಕಂಡವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ. ಗೌರಿಬಿದನೂರಿನ ಎರಡು ವಾರ್ಡ್​ಗಳಲ್ಲಿ ಮೂರು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಕೂಡಲೇ ಮಾಡಿದ್ದು ಆ ಎರಡೂ ವಾರ್ಡ್ ಸೀಲ್ ಡೌನ್. ಈಗ ಗೌರಿಬಿದನೂರಿನ ಎಲ್ಲ 31 ವಾರ್ಡ್ಗಳನ್ನೂ ಸೀಲ್ ಮಾಡಲಾಗಿದೆ. ಮೊದಲ ಎರಡುವಾರ್ಡ್​ನ ಎಲ್ಲ ನಿವಾಸಿಗಳ ಕೈಗೂ ಸೀಲ್ಹಾಕಲಾಗಿತ್ತು.
ಈ ವಾರ್ಡ್​ಗಳಲ್ಲಿ ಹೆಲ್ಪ್ ಲೈನ್ ಮಾಡಿ ಪ್ರತಿ ವಾರ್ಡ್​ಗೂ ವಾಟ್ಸಪ್ ಗ್ರೂಪ್ ಮಾಡಿ ಮೆಡಿಸಿನ್ ಸೇರಿದಂತೆ ಜೀವನಾವಶ್ಯಕ ವಸ್ತು ಪೂರೈಸುವ ಕೆಲಸ ಮಾಡುತ್ತಿದ್ದೇವೆ. ಈಗ ಇದು 31 ವಾರ್ಡ್​ಗಳಲ್ಲೂ ಜಾರಿಯಲ್ಲಿದೆ. ಪ್ರತಿ ವಾರ್ಡ್​ಗೆ ಒಬ್ಬರು ನೋಡಲ್ ಅಧಿಕಾರಿ ನೇಮಿಸಿ, ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಂದು, ಜೀವನಾವಶ್ಯಕ ವಸ್ತುಗಳಿಗೆ ಒಂದು ಎರಡು ಮೊಬೈಲ್ ನಂಬರ್ ಕೊಡಲಾಗಿದೆ. ಆ ಮೂಲಕ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ದಿನಸಿ ಸಾಮಾನುಗಳ ಸಂಗ್ರಹಕ್ಕೆಂದೇ ಗೋದಾಮು ಸಿದ್ಧಪಡಿಸಿ ದವಸ ಧಾನ್ಯ ದಾಸ್ತಾನು ಇಡಲಾಗಿದೆ. ಕಡು ಬಡವರಿಗೆ ಉಚಿತವಾಗಿ ದಿನಸಿ ಪೂರೈಸಲಾಗುತ್ತದೆ.
2 ಸಿ. ಶಿಖಾ, ಕೋವಿಡ್-19 ಸಾಮಾಜಿಕ ಜಾಲತಾಣ ನಿರ್ವಹಣಾ ಮುಖ್ಯಸ್ಥೆ, ದೇಶದಲ್ಲೇ ಸರ್ಕಾರಿ ವಲಯದಲ್ಲಿ ಮೊದಲ ಪ್ರಯತ್ನ
ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಶ್ರೇಯಸ್ಸು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಕೋವಿಡ್-19 ಜಾಲತಾಣದ ಮುಖ್ಯಸ್ಥೆ ಸಿ. ಶಿಖಾ ಅವರಿಗೆ ಸಲ್ಲುತ್ತದೆ. ಕರೊನಾ ಜಾಗೃತಿ ಮೂಡಿಸಲು ಪತ್ರಿಕೆ, ಟಿವಿ ಮಾಧ್ಯಮಗಳ ಜಾಹೀರಾತು, ಕ್ರಿಯೇಟಿವ್ ಪೋಸ್ಟರ್ಸ್, ಡಬ್ಲು್ಯಎಚ್​ಒ ಮತ್ತು ಕೇಂದ್ರ ಸರ್ಕಾರದ ಮಾಹಿತಿ ಬಳಸಿಕೊಂಡು ಸ್ಥಳೀಯ ಭಾಷೆಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವವರು ಶಿಖಾ.
ಸರ್ಕಾರಿ ವಲಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೋವಿಡ್-19 ಬಗ್ಗೆ ಟಿಕ್​ಟಾಕ್ ವೀಡಿಯೋ ಮಾಡಿ ಎಚ್ಚರಿಸಿದ್ದಾರೆ. ಸಂಜ್ಞಾಭಾಷೆ ಮೂಲಕ ವಿಡಿಯೋ ಮಾಡಿ ವಿಭಿನ್ನತೆ ಮೆರೆದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ನಿರ್ದೇಶನ, ಮಾಹಿತಿ, ಘೊಷಣೆ, ಭರವಸೆಗಳು, ಜನರಿಗೆ ನೀಡುವ ಸವಲತ್ತುಗಳ ಮಾಹಿತಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
3 ಅನೀಸ್​ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ, ಕೊಡಗು
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಹೆಚ್ಚು ಹಿರಿಯ ನಾಗರಿಕರನ್ನು ಹೊಂದಿದೆ. ಕರೊನಾ ವೈರಸ್ ವಯಸ್ಸಾದವರನ್ನು ಹೆಚ್ಚು ಬಾಧಿಸುವುದರಿಂದ ವಿಶೇಷ ಕಾಳಜಿ ವಹಿಸಲಾಗಿದೆ. ಕೊಡಗು ಜಿಲ್ಲಾಡಳಿತ ಮನೆ ಮನೆ ಸರ್ವೆ ಮಾಡಿಸಿ ಡೇಟಾ ಸಂಗ್ರಹಿಸಿದೆ. ಹಾಗಾಗಿ ರೋಗ ಲಕ್ಷಣಗಳು ಕಂಡ ಕೂಡಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಎಲ್ಲ ಏರ್ಪಾಡು ಮಾಡಿಕೊಂಡಿದೆ. ವಿಶೇಷವಾಗಿ ಟೆಲಿ ಮೆಡಿಸಿನ್ ಸೌಲಭ್ಯ ಕಲ್ಪಿಸಿದೆ.
ಯಾರೂ ವೈದ್ಯರನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಆನ್​ಲೈನ್​ನಲ್ಲೇ ವೈದ್ಯರನ್ನು ಸಂರ್ಪಸಬಹುದು. ವೈದ್ಯರು ವಾಟ್ಸಪ್ ಮೂಲಕ ಪ್ರಿಸ್ಕ್ರಿಪ್ಷನ್ ಕಳುಹಿಸುತ್ತಾರೆ. ಕೊಡಗು ಜಿಲ್ಲೆಯ ಎಲ್ಲ ಗಡಿ ಬಂದ್ ಮಾಡಲಾಗಿದೆ. ಗಡಿ ಜಿಲ್ಲೆಗಳಲ್ಲಿ ಮಾರ್ಚ್, ಏಪ್ರಿಲ್​ನಲ್ಲಿ ಸೋಂಕು ವ್ಯಾಪಕವಾಗಿರುವ ಮುನ್ಸೂಚನೆ ಅರಿತು ಈ ಕಠಿಣ ನಿರ್ಧಾರ ಕೈಗೊಂಡ ಫಲವಾಗಿ ಕರೊನಾ ಸೋಂಕು ಹತೋಟಿಗೆ ಸಹಾಯವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್.
4 ಮಹಿತಾ ನಾಗರಾಜ್ (ಕೇರ್​ವಾಂಗರ್ ಗ್ರೂಪ್ ಸಂಸ್ಥಾಪಕಿ) ಡಿಜಿಟಲ್ ಮಾರ್ಕೆಟರ್, ಬೆಂಗಳೂರು
ಕರೊನಾ ಪೀಡಿತರ ನೂರಾರು ಸಮಸ್ಯೆ ಗಳಿಗೆ ಕೇರ್ ಮಾಂಗರ್ ಗ್ರೂಪ್ ಪರಿಹಾರ ಕಲ್ಪಿಸಿದೆ. ಲಾಕ್​ಡೌನ್ ಮುನ್ನವೇ ಬೆಂಗಳೂರು ಮೂಲದ ಮಹಿತಾ ನಾಗರಾಜ್ ಫೇಸ್​ಬುಕ್ ಮೂಲಕ ನೆರವಿನ ಹಸ್ತ ಚಾಚಲು ಆರಂಭಿಸಿದ್ದರು. ವಿದೇಶದಲ್ಲಿರುವ ಅವರ ಸ್ನೇಹಿತೆಯರಿಬ್ಬರು ಕೋರಮಂಗಲ ಮತ್ತು ಮಲ್ಲೇಶ್ವರಂನಲ್ಲಿರುವ ತಮ್ಮ ಪಾಲಕರಿಗೆ ತಿಂಗಳಿ ಗಾಗುವಷ್ಟು ಮೆಡಿಸಿನ್, ಅಕ್ಕಿ-ಬೇಳೆ ಮತ್ತಿತರ ದಿನಸಿ ಕೊಡಿಸುವಂತೆ ಹೇಳಿದ್ದೇ ಮಾ.17ರಂದು ಈ ಫೇಸ್​ಬುಕ್ ಗ್ರೂಪ್ ಹುಟ್ಟಿಗೆ ಕಾರಣವಾಯಿತು. ಈಗ 33 ಸಾವಿರ ಸದಸ್ಯರನ್ನು ಹೊಂದಿರುವ ಈ ಗ್ರೂಪ್​ನಲ್ಲಿ ಯುಎಸ್, ಯುಕೆ, ಸ್ವೀಡನ್, ಹಾಂಕಾಂಗ್, ಆಫ್ರಿಕಾ, ನೆದರ್ಲ್ಯಾಂಡ್, ಜರ್ಮನಿ, ನ್ಯೂಜಿಲೆಂಡ್, ಸಿಂಗಪುರ, ಮಸ್ಕಟ್, ದುಬೈ, ಕೆನಡಾ ಸೇರಿದಂತೆ 10-15 ದೇಶಗಳ ಸದಸ್ಯರಿದ್ದಾರೆ. ಈ ಗುಂಪಿನ ಸದಸ್ಯರು ದೇಶ, ವಿದೇಶಗಳಲ್ಲಿ ಸಹಸ್ರಾರು ಜನರಿಗೆ ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ 6 ಸಾವಿರ ಮಂದಿ ಸದಸ್ಯರಿದ್ದು, ಸಹಸ್ರಾರು ಅಸಹಾಯಕರಿಗೆ ನೆರವಾಗಿದ್ದಾರೆ. ಕರೊನಾ ಮಾಹಿತಿ, ಮೆಡಿಕಲ್ ಸೇವೆ, ದಿನಸಿ ಪೂರೈಕೆ, ಚಿಕಿತ್ಸೆ, ವಾಹನ ಸೌಲಭ್ಯ ಕಲ್ಪಿಸುವುದು, ಆರೋಗ್ಯ ಮಾಹಿತಿ, ವಯಸ್ಸಾದವರಿದ್ದರೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಡಯಟ್ ಆಹಾರವಿದ್ದರೆ ಕೆಲವರು ತಾವೇ ಸ್ವತಃ ತಯಾರಿಸಿ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮಹಿತಾ ನಾಗರಾಜ್ ಅವರ ಸಹಾಯವಾಣಿ ಸಂಖ್ಯೆ:9591168886
5 ಡಾ. ಸಿ.ಆರ್.ಜಯಂತಿ (ಡೀನ್ ಅಂಡ್ ಡೈರೆಕ್ಟರ್, ಬೆಂಗಳೂರು ಮೆಡಿಕಲ್ ಕಾಲೇಜು)
ಕರೊನಾ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 550 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ಆರಂಭಿಸಲಾಗಿದೆ. ಈ ಆಸ್ಪತ್ರೆಯ ಉಸ್ತುವಾರಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜು ಡೈರೆಕ್ಟರ್ ಮತ್ತು ಡೀನ್ ಆಗಿರುವ ಡಾ.ಸಿ.ಆರ್.ಜಯಂತಿ ನೋಡಿಕೊಳ್ಳುತ್ತಿದ್ದಾರೆ. ಕೋವಿಡ್ ಚಿಕಿತ್ಸೆಗೆ ನಮಗೆ ಮೊದಲು ಎದುರಾದ ಸವಾಲು ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯಲ್ಲಿನ ಆತಂಕ ನಿವಾರಣೆ ಮಾಡುವುದಾಗಿತ್ತು. ಆನ್​ಲೈನ್ ವೀಡಿಯೋ ಮೂಲಕ ಪ್ರಾತ್ಯಕ್ಷಿಕೆ ನೀಡಿ ಅವರಲ್ಲಿನ ಭಯ ನಿವಾರಿಸಲಾಗಿದೆ. ಮತ್ತೆ ಕೆಲವರಿಗೆ ಮನಃಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ಮಾಡಿಸಿ ಚಿಕಿತ್ಸೆಗೆ ಸಜ್ಜುಗೊಳಿಸಲಾಗಿದೆ ಎನ್ನುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗ್ರೀನ್ ರೆನ್(ಯಾವುದೇ ರೋಗ ಲಕ್ಷಣ ಇಲ್ಲದವರು), ಆರೇಂಜ್ ರೆನ್(ಆಕ್ಸಿಜನ್ ಅವಶ್ಯಕತೆ ಇರುವವರು) ಹಾಗೂ ರೆಡ್ ರೆನ್(ಐಸಿಯು ಅವಶ್ಯಕತೆವುಳ್ಳವರು) ಮೂರು ಕೆಟಗರಿ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
| ವಿಲಾಸ ಮೇಲಗಿರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
