ಶಿವಮೊಗ್ಗ:ಆನ್​ಲೈನ್​ ಕ್ಲಾಸ್​ಗೆಂದು ನೆಟ್ವರ್ಕ್ ಹುಡುಕುತ್ತ ಗುಡ್ಡ ಪ್ರದೇಶದತ್ತ ಹೋಗುತ್ತಿದ್ದ ಯುವತಿಯನ್ನು ಯುವಕನೊಬ್ಬ ಅಡ್ಡಗಟ್ಟಿ ಮೊಬೈಲ್​ ಫೋನ್​ ಕಸಿದುಕೊಂಡು ಕಿರುಕುಳ ಕೊಟ್ಟ ಪ್ರಕರಣ ನಡೆದಿದೆ. ಊರಿನವರಿಗೆ ವಿಷಯ ತಿಳಿಯುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾರಲಗೋಡು ಸಮೀಪ ಈ ಘಟನೆ ನಡೆದಿದೆ. ಆನ್​​ಲೈನ್​ ಕ್ಲಾಸ್​​ಗಾಗಿ ಯುವತಿಯೊಬ್ಬಳು ಮನೆಯಿಂದ ಅನತಿ ದೂರದ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಾಗ ಯುವಕನೊಬ್ಬ ದಾರಿಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ವಿಷಯ ತಿಳಿದು ಸ್ಥಳೀಯರು ಧಾವಿಸುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಕಿರುಕುಳ ಕೊಟ್ಟವ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದೆ. ಕಿರುಕುಳ ಕೊಟ್ಟವನಿಗಾಗಿ ಈಗ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಮಲೆನಾಡು ಭಾಗದಲ್ಲಿ ಆನ್​ಲೈನ್​ ಕ್ಲಾಸ್ ಹಾಗೂ ವರ್ಕ್ ಫ್ರಂ ಹೋಮ್​ನಲ್ಲಿರುವವರು ನೆಟ್ವರ್ಕ್​ ಹುಡುಕಿಕೊಂಡು ಗುಡ್ಡ ಏರುವ ಪರಿಸ್ಥಿತಿ ಸಾಮಾನ್ಯವಾಗಿದೆ. ನೆಟ್ವರ್ಕ್​ಗಾಗಿ ಈವರೆಗೆ ರೂಪಿಸಿದ ಎಲ್ಲ ಹೋರಾಟಗಳು ವ್ಯರ್ಥ‌ವಾಗಿವೆ. ಶರಾವತಿ ಹಿನ್ನೀರವಾಸಿಗಳ ಬೇಡಿಕೆಯನ್ನು ಪರಿಗಣಿಸದೆ ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರ ಜಾತ್ರೆಗೆ ಸಾರ್ವಜನಿಕರಿಗಿಲ್ಲ ಪ್ರವೇಶ: ರಥೋತ್ಸವಕ್ಕೆ ಕರೊನಾ ಕರಿಛಾಯೆ

ಮೋದಿಯ ಆ ನಡೆಗೆ ಖುಷಿಯಾದ ಮಾಜಿ ಪ್ರಧಾನಿ; ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸಿದ ಎಚ್​.ಡಿ.ದೇವೇಗೌಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
