ಬೆಂಗಳೂರು:ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ, ಸಿಗ್ನಲ್​ ಜಂಪ್​ ಮಾಡಿದ ಮಹಿಳೆಯೊಬ್ಬಳನ್ನು ಪ್ರಶ್ನಿಸಿದ್ದಕ್ಕೆ, ಆಕೆ ಪೊಲೀಸರ ಮೇಲೇ ಎಗರಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರ ಜತೆ ಮಹಿಳೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಉತ್ತರ ಪ್ರದೇಶ ಮೂಲದ ಅಪೂರ್ವಿ ಡಿಯಾಸ್​ ಹೆಸರಿನ ಮಹಿಳೆ ಬೆಂಗಳೂರಿನ ಮೈಸೂರು ಬ್ಯಾಂಕ್​ ಸರ್ಕಲ್​ ಬಳಿ ಶನಿವಾರದಂದು ಸಿಗ್ನಲ್​ ಜಂಪ್​ ಮಾಡಿದ್ದಾಳೆ. ಆಗ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಎಎಸ್ಐ ಬಸವಯ್ಯ ಕಾರು ನಿಲ್ಲಿಸಿ, ಸಂಚಾರಿ ನಿಯಮ‌ ಉಲ್ಲಂಘನೆಗೆ ದಂಡ ಕಟ್ಟುವಂತೆ ಕೇಳಿದ್ದಾರೆ. ಆದರೆ ಸಿಟ್ಟಿಗೆದ್ದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದಾಳೆ. ಎಎಸ್ಐ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿ ಕಪಾಳಮೋಕ್ಷ ಮಾಡಿದ್ದಾಳೆ. ನಿಮ್ಮ ವಿರುದ್ಧ ನಾನು ಪೊಲೀಸ್​ ಮೊಕದ್ದಮೆ ದಾಖಲಿಸುತ್ತೇನೆ ಎಂದು ಕೂಗಾಡಿದ್ದಾಳೆ.
ಮಹಿಳೆ ಟ್ರಾಫಿಕ್​ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸುತ್ತಿರುವು ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಎಎಸ್ಐ ಬಸವಯ್ಯ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಎಫ್​ಐಆರ್​ ದಾಖಲಾಗಿದೆ.
ಸಿಗ್ನಲ್​ ಜಂಪ್​ ಮಾಡಿದ್ದಲ್ಲದೆ ಟ್ರಾಫಿಕ್​ ಪೊಲೀಸರ ಮೇಲೆ ಎಗರಾಡಿ, ಕಪಾಳ ಮೋಕ್ಷ ಮಾಡಿದ ಮಹಿಳೆ!ವಿವರಗಳಿಗೆhttps://t.co/JCps2efeGVನೋಡಿ#TrafficPolice#Bangalore#TrafficRules#UttarPradesh#MysoreBankCirclepic.twitter.com/SPOa2Gqw1V
— Vijayavani (@VVani4U)March 7, 2021

ದಿನೇಶ್​ ಕಲ್ಲಹಳ್ಳಿ ದೂರು ವಾಪಸ್​ ಪಡೆದಿದ್ದು ಏಕೆ? ಆ ಪತ್ರದಲ್ಲಿ ಏನಿದೆ?

ಮಗಳ ಹೆಸರೇ ಮನೆಯ ಹೆಸರು! ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ವರಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
