ಬೆಂಗಳೂರು: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕ ಪ್ರೇಮ ನಿವೇದನೆ ಮಾಡಿ ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಸಿನಿಮಾ ಸಹಾಯಕ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರುತಿನಗರದ ನಿವಾಸಿ 32 ವರ್ಷದ ಮಹಿಳೆ ವಂಚನೆಗೊಳಗಾದಾಕೆ. ಆರೋಪಿ ವಿಜಯ ಪ್ರಸಾದ್(31) ಎಂಬಾತನ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2018ರಲ್ಲಿ ಫೇಸ್​ಬುಕ್​ನಲ್ಲಿ ವಿಜಯಪ್ರಸಾದ್​ನ ಪರಿಚಯವಾಗಿತ್ತು. ಆತ ಪ್ರತಿ ದಿನ ಫೇಸ್​ಬುಕ್​ನಲ್ಲಿ ಸಂದೇಶ ಕಳುಹಿಸುತ್ತಿದ್ದ. ವಿವಾಹವಾಗುವುದಾಗಿ ಹೇಳಿ ಪ್ರೇಮ ನಿವೇದನೆ ಮಾಡಿದ್ದ. ಆತನ ಮಾತಿಗೆ ಮರುಳಾಗಿ ಸಮ್ಮತಿಸಿದ್ದೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಪ್ರೀತಿಸುವ ನಾಟಕವಾಡಿ ಕೈಕೊಟ್ಟ:ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು. ಈ ನಡುವೆ ವಿಜಯಪ್ರಸಾದ್ ಡಿವಿಜಿ ರಸ್ತೆಯಲ್ಲಿರುವ ಹೋಟೆಲ್​ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ, ವಿವಾಹವಾಗುವುದಾಗಿ ನಂಬಿಸಿ ಹಲವು ಬಾರಿ ಅದೇ ಹೋಟೆಲ್​ಗೆ ಕರೆದೊಯ್ದಿದ್ದ. ಕೆಲ ಸಮಯದ ಬಳಿಕ ವಿವಾಹವಾಗುವಂತೆ ಒತ್ತಾಯಿಸಿದಾಗ ತನಗೆ ಮನೆಯಲ್ಲಿ ಮದುವೆ ಮಾಡಲು ಹುಡುಗಿಯನ್ನು ನೋಡುತ್ತಿದ್ದಾರೆ. ಮನೆಯವರು ನೋಡಿದ ಯುವತಿಯನ್ನೇ ವಿವಾಹವಾಗುವುದಾಗಿ ಹೇಳಿದ್ದ.
ಇದನ್ನೂ ಓದಿ:ಸೆಪ್ಟೆಂಬರ್​ಗೆ 35 ಲಕ್ಷ ಕೇಸ್?: ಕರ್ನಾಟಕದಲ್ಲಿ 2.10 ಲಕ್ಷ ಪ್ರಕರಣ ಸಂಭವ, ಐಐಎಸ್ಸಿ ಅಧ್ಯಯನ
ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಆನಂತರ ವಿಜಯಪ್ರಸಾದ್ ಮದುವೆಯಾಗಲು ಒಪ್ಪಿದ್ದ. ಆದರೆ, ತಾನು ಪ್ರೀತಿಸುತ್ತಿರುವ ವಿಚಾರವನ್ನು ಬೇರೆಯವರ ಬಳಿ ಹೇಳಿಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಆತನ ಒತ್ತಾಯದ ಮೇರೆಗೆ ಸೊಣ್ಣೇನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದೆ. ನಂತರ ಪರಿಚಿತರ ಮೂಲಕ ವಿವಾಹ ದಿನಾಂಕ ಗೊತ್ತುಪಡಿಸಲಾಗಿತ್ತು.
ಇದನ್ನೂ ಓದಿ:VIDEO|PHOTOS: ಲೇಹ್​ ನಲ್ಲಿ ಭಾರತೀಯ ಸಶಸ್ತ್ರಪಡೆಗಳ ಪ್ಯಾರಾ ಡ್ರಾಪಿಂಗ್​ ಕವಾಯತು ಪ್ರದರ್ಶನ
ಆದರೆ, ಆತ ಹಲವು ನೆಪ ಹೇಳಿ ದಿನಾಂಕ ಮುಂದೂಡಿದ್ದ. ಕಳೆದ ಜ. 12ರಂದು ಮನೆಗೆ ಬಂದು ಲೈವ್​ಬ್ಯಾಂಡ್ ನಡೆಸಲು 5 ಲಕ್ಷ ರೂ. ಕೊಡುವಂತೆ ಕೇಳಿದ್ದ. ಆದರೆ, ಅಷ್ಟೊಂದು ಹಣ ಕೊಡಲು ನಿರಾಕರಿಸಿದ್ದೆ. ಸಂಜೆ ಮತ್ತೆ ಬರುವುದಾಗಿ ಹೇಳಿ ಹೋದವನು ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಆತನ ಫೋನ್​ನಲ್ಲಿ ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ. ನನ್ನಿಂದ 1 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗೆ ತೆರಳಲು ರಜೆ ಕೊಟ್ಟಿಲ್ಲ, ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ: ಐವರ ಪ್ರಾಣ ಹೀಗೇ ಹೋಗಿಯೇ ಬಿಡ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
