ಬೆಂಗಳೂರು:ಕೆಂಗೇರಿ ಸಂಚಾರಿ ಠಾಣಾ ಸಿಬ್ಬಂದಿ ಪ್ರಿಯಾಂಕಾ ಹೃದಯಾಘಾತದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೂಲದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ ಮೃತಪಟ್ಟವರು.
ಇದನ್ನೂ ಓದಿ:ಹೃದಯಾಘಾತಕ್ಕೀಡಾಗಿ ಎಂಟು ತಿಂಗಳ ಮಗು ಸಾವು; ಆರೋಗ್ಯ ಸಚಿವರಿಗೆ ದೂರು
ಪ್ರಿಯಾಂಕ ಅವರು ಆರೋಗ್ಯ ಸರಿ ಇರಲಿಲ್ಲವೆಂದು ಜೂ.17ರಿಂದ ರಜೆಯಲ್ಲಿದ್ದರು. ಭಾನುವಾರ ನಗರದಿಂದ ತಮ್ಮ ಊರಾದ ಅಜ್ಜಂಪುರಕ್ಕೆ ತೆರಳಿದ್ದರು. ರಾತ್ರಿ 11.30ರ ಸಮಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಪ್ರಿಯಾಂಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿಯೂ ಸಾವಿನಿಂದ ಪಾರಾದ ಮಹಿಳೆ!
ಪೊಲೀಸ್ ಕಾನ್‌ಸ್ಟೆಬಲ್ ಕೆಲಸಕ್ಕೆ 2018ರಲ್ಲಿ ನೇಮಕವಾಗಿದ್ದರು. ಅದೇ ವರ್ಷ ಮದುವೆ ಕೂಡ ಆಗಿದ್ದರು. ಆದರೆ 2021ರ ಕರೋನಾ ಸಂದರ್ಭದಲ್ಲಿ ಪ್ರಿಯಾಂಕಾ ಪತಿ ಸಾವಿಗೀಡಾಗಿದ್ದರು. ಪತಿ ಸಾವಿನ ವೇಳೆ ಒಂದು ತಿಂಗಳ ಗರ್ಭಿಣಿಯಾಗಿದ್ದರು. ಒಂದು ವರ್ಷ ಏಳು ತಿಂಗಳ ಮಗುವನ್ನು ಬಿಟ್ಟು ಪ್ರಿಯಾಂಕ ಅಗಲಿದ್ದಾರೆ. ಪ್ರಿಯಾಂಕಾ ಅವರ ಸಾವಿಗೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಂಬಿನಿ ಮಿಡಿದಿದ್ದಾರೆ.
‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × three =
Remember me
