ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 1 ಲಕ್ಷಕ್ಕೂ ಅಧಿಕ (1,04,348) ಕರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು ಪರೀಕ್ಷೆ ಸಂಖ್ಯೆ 55,24,302 ಆಗಿದೆ. ಅಲ್ಲದೆ, ಬುಧವಾರ ಅತೀ ಹೆಚ್ಚು 10,947 ಸೋಂಕು ಪ್ರಕರಣ ದೃಢಪಟಿದ್ದು, ಸೋಂಕಿತರ ಸಂಖ್ಯೆ 6.68 ಲಕ್ಷ ಮೀರಿದೆ. ಈ ಮೊದಲು ಸೆ.29ರಂದು 10,453 ಪ್ರಕರಣ ವರದಿಯಾಗಿದ್ದವು.
ರಾಜ್ಯದ 30 ಜಿಲ್ಲೆಗಳ 146 ಲ್ಯಾಬ್​ಗಳಲ್ಲಿ 55,690 ಆರ್​ಟಿಪಿಸಿಆರ್ ಹಾಗೂ 48,658 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲಾಗಿದೆ. ಈ ಹಿಂದೆ ಹೇಳಿದಂತೆ ನಿಗದಿತ ಗುರಿ ತಲುಪಿದ್ದು, ಪರೀಕ್ಷೆ ಪ್ರಮಾಣವನ್ನು ಶೀಘ್ರವೇ ಪ್ರತಿದಿನ 1.50 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
113 ಮಂದಿ ಸಾವು:9,832 ಸೋಂಕಿತರು ಆಸ್ಪತ್ರೆಯಿಂದ ಬುಧವಾರ ಬಿಡುಗಡೆ ಹೊಂದಿದ್ದು, ಗುಣರಾದವರ ಸಂಖ್ಯೆ 5.42 ಲಕ್ಷಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 113 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 9,574ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚಳದೊಂದಿಗೆ ಸಕ್ರಿಯ ಪ್ರಕರಣ ಏರಿಕೆಯಾಗುತ್ತಿದ್ದು, 1,16 ಲಕ್ಷ ಸೋಂಕಿತರು ರಾಜ್ಯದ ನಾನಾ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ 841 ಮಂದಿ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಕ್ಷಣ ರಹಿತ ಸೋಂಕಿತರು ಮನೆ ಆರೈಕೆಗೆ ಒಳಗಾಗಿದ್ದಾರೆ.
ಬೆಂಗಳೂರಿನಲ್ಲಿ 5 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, 55 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಮೈಸೂರು 979 (9), ಹಾಸನ 471 (5), ಉತ್ತರ ಕನ್ನಡ 462 (7), ದಕ್ಷಿಣ ಕನ್ನಡ 447 (7), ತುಮಕೂರು 250 (5), ಬಳ್ಳಾರಿ 258 (0), ಚಿತ್ರದರ್ಗ 217 (0), ಉಡುಪಿ 209 (2), ಮಂಡ್ಯ 207 (0), ಶಿವಮೊಗ್ಗ 203 (0), ಬೆಂಗಳೂರು ಗ್ರಾಮಾಂತರ 189 (2), ಬೆಳಗಾವಿ 186 (1), ಚಿಕ್ಕಮಗಳೂರು 186 (1), ಕಲಬುರಗಿ 180 (1), ಧಾರವಾಡ 154 (2), ದಾವಣಗೆರೆ 141 (0), ರಾಯಚೂರು 129 (0), ಬಾಗಲಕೋಟೆ 121 (3),ಚಿಕ್ಕಬಳ್ಳಾಪುರ 115 (0), ಚಾಮರಾಜನಗರ 104 (1), ಕೋಲಾರ 104 (4), ಕೊಡಗು 103 (1), ಕೊಪ್ಪಳ 98 (0), ಯಾದಗಿರಿ 98 (0), ರಾಮನಗರ 77 (3), ವಿಜಯಪುರ 73 (1), ಗದಗ 72 (0), ಹಾವೇರಿ 57 (2), ಬೀದರ್ 57 (1) ಸೇರಿದಂತೆ 10,947 ಮಂದಿಗೆ ಸೋಂಕು ದೃಢಪಟ್ಟಿದ್ದು, 113 ಮಂದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರಿಗೆ ಕರೊನಾ; ಮನೆಯಲ್ಲೇ ಕ್ವಾರಂಟೈನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
