ಬೆಳಗಾವಿ:ನಮ್ಮ ಪಕ್ಷಕ್ಕೆ ಬನ್ನಿ ಎಂದು ಖುದ್ದು ಬಿಜೆಪಿ ನಾಯಕರೇ ಲಖನ್ ಜಾರಕಿಹೊಳಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಗೋಕಾಕ್​ನಲ್ಲಿರುವ ಲಖನ್ ಜಾರಕಿಹೊಳಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಜಗದೀಶ ಶೆಟ್ಟರ್ ಹಾಗೂ ಉಮೇಶ್ ಕತ್ತಿ ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಖನ್​, ಕಾಂಗ್ರೆಸ್​ಗೆ ದೆಹಲಿಯಲ್ಲಿ ಮಾತ್ರ ಹೈಕಮಾಂಡ್ ಇಲ್ಲ. ರಾಜ್ಯದಲ್ಲೇ ನಾಲ್ಕು ಜನ ಹೈಕಮಾಂಡ್ ಇದ್ದಾರೆ. ಈಸ್ಟ್-ವೆಸ್ಟ್-ನಾರ್ತ್-ಸೌತ್ ಅಂತ ನಾಲ್ಕು ಹೈಕಮಾಂಡ್ ಇದ್ದಾರೆ ಎಂದು ಜರಿದರು. ರಾಜ್ಯದಲ್ಲಿರುವ ಹೈಕಮಾಂಡ್​ನಿಂದಾಗಿ ಸತೀಶ್ ಜಾರಕಿಹೊಳಿ ಚುನಾವಣೆಗೆ ನಿಂತಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಘಟಾನುಘಟಿ ನಾಯಕರಿದ್ದರೂ ಸತೀಶ್ ಜಾರಕಿಹೊಳಿಯನ್ನ ಎಲೆಕ್ಷನ್​ಗೆ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಘಟಾನುಘಟಿ ನಾಯಕರು ಭೇಟಿ ಕೊಟ್ಟ ಬೆನ್ನಲ್ಲೇ ಲಖನ್​ ಜಾರಕಿಹೊಳಿ ನಿವಾಸಕ್ಕೆ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಭೇಟಿ ನೀಡಿದರು. ಮಗಳು ಶ್ರದ್ಧಾ ಜತೆ ಲಖನ್ ಅವರನ್ನ ಭೇಟಿಯಾದ ಮಂಗಳ ಅಂಗಡಿ, ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಕೇಳಿಕೊಂಡರು. ಇನ್ನು ಬಿಜೆಪಿಗೆ ಸೇರ್ಪಡೆಯಾಗಲು ಲಖನ್​ ಕೂಡ ಒಪ್ಪಿದ್ದಾರೆ.
ಮೊದಲಿನಂದಲೂ ನಾವು ಮತ್ತು ಸುರೇಶ ಅಂಗಡಿ ಒಂದಾಗಿದ್ವಿ. ಅವರು ಬೇರೆ ಪಕ್ಷದಲ್ಲಿದ್ದರೂ ನಮ್ಮಲ್ಲಿ ಉತ್ತಮ ಸಂಬಂಧವಿತ್ತು. ಮಂಗಳ ಅಂಗಡಿ ಅವರಿಗೆ ನನ್ನ  ಸಂಪೂರ್ಣ ಬೆಂಬಲ ಇದೆ. ಪಕ್ಷ ಸೇರುವ ಬಗ್ಗೆ ರಮೇಶ್ ಮತ್ತು ಬಾಲಚಂದ್ರ ಜತೆ ಚರ್ಚೆ ಮಾಡಿ ಸೇರುವೆ. ಕಾಂಗ್ರೆಸ್​ ಕೇವಲ ಒಬ್ಬರ ಮೇಲೆ ಅವಲಂಬನೆ ಆಗಿದೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಲಖನ್ ಹರಿಹಾಯ್ದರು.
ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​

ಸಾರಿಗೆ ಬಸ್ ಅಪಘಾತ: 25 ವಿದ್ಯಾರ್ಥಿಗಳು ಸೇರಿ 37 ಮಂದಿಗೆ ಗಾಯ

ಐಸಿಯುನಲ್ಲಿದ್ದಾರೆ ರಮೇಶ್​ ಜಾರಕಿಹೊಳಿ, ಪರಿಸ್ಥಿತಿ ಗಂಭೀರ?

2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eighteen =
Remember me
