ಬೆಂಗಳೂರು/ವಿಜಯನಗರ:ಉದ್ಯಮಿ ಗೋವಿಂದಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಬಂಧನಕ್ಕೆ ಒಳಗಾಗಿರುವ ಇನ್ನೊಬ್ಬ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಗೆ ಸಂಬಂಧಿಸಿದಂತೆ ಇನ್ನೊಂದಷ್ಟು ಮಾಹಿತಿ ಹೊರಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿತ 65 ಲಕ್ಷ ರೂ. ಮೊತ್ತವನ್ನು ಹಾಲಶ್ರೀ ಸ್ವಾಮೀಜಿ ತನ್ನ ಚಾಲಕನ ಮೂಲಕ ಮೈಸೂರಿನ ಕಚೇರಿಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ತಲುಪಿಸಿದ್ದ. ಆದರೆ ಬಳಿಕ ಆ ಹಣವನ್ನು ತೆಗೆದುಕೊಳ್ಳಲು ಯಾರೂ ಬಂದಿರಲಿಲ್ಲ. ಹೀಗಾಗಿ ಅಪರಿಚಿತ ವ್ಯಕ್ತಿ ಆ ಹಣವನ್ನು ಮಠಕ್ಕೆ ಕೊಂಡೊಯ್ದು ಇರಿಸಿದ್ದ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿಯ ಮಠಕ್ಕೆ ಇಂದು ಬೆಳಗ್ಗೆ ಬಂದಿದ್ದ ಆ ಅಪರಿಚಿತ ವ್ಯಕ್ತಿ ಹಣ ಇಟ್ಟು, ಅದನ್ನು ವಿಡಿಯೋ ಮಾಡಿ ಹೇಳಿಕೊಂಡಿದ್ದಾನೆ.
ಮಠಕ್ಕೆ ಬಂದು ಪಲ್ಲಕ್ಕಿ ಬಳಿ ಹಣದ ಬ್ಯಾಗ್ ಇಟ್ಟು, ನಾನು ಸ್ವಾಮೀಜಿ ಕೊಟ್ಟಿದ್ದ ಹಣದ ಬ್ಯಾಗ್ ಇಟ್ಟಿದ್ದೇನೆ ಅಂತ ವಿಡಿಯೋ ಮಾಡಿದ್ದ. ಹಣದ ಬ್ಯಾಗ್ ಪತ್ತೆಯಾದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನಂತರ ಸಿಸಿಬಿ ಪೊಲೀಸರು ಬಂದು ಪರಿಶೀಲನೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ. ಈ ಹಣದಲ್ಲಿ ವಕೀಲರ ಫೀಸ್ ಖರ್ಚು ಎಂದು ಚಾಲಕ ರಾಜು 4 ಲಕ್ಷ ರೂ. ತೆಗೆದುಕೊಂಡಿದ್ದ. ಉಳಿದ ಹಣ ಹಾಲಶ್ರೀ ಮಠದ ಬಳಿ ಇಟ್ಟಿದ್ದೇನೆ ಎಂದು ಈ ಅಪರಿಚಿತ ವ್ಯಕ್ತಿ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದ.
ಇನ್ನು ಆ ದಿನ ಸ್ವಾಮೀಜಿ ಚಾಲಕನನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರಿಂದ ಅವರ ಲಾಸ್ಟ್ ಲೊಕೇಷನ್ ಮೈಸೂರಿನಲ್ಲಿ ಟ್ರೇಸ್ ಆಗಿತ್ತು. ನಂತರ ಮೈಸೂರು ಭಾಗದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ ಪೊಲೀಸರು, ಸ್ವಾಮೀಜಿಯ ಚಾಲಕನನ್ನು ವಶಕ್ಕೆ ಪಡೆದಿದ್ದರು. ಇನ್ನು ಆ ಅಪರಿಚಿತ ವ್ಯಕ್ತಿ ಯಾರು? ಆ ಲಕ್ಷಾಂತರ ಹಣ ಗೋವಿಂದಬಾಬು ಪೂಜಾರಿಗೆ ಸೇರಿದ್ದಾ? ಎಂಬಿತ್ಯಾದಿ ನಿಟ್ಟಿನಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.
ಒಳ ಉಡುಪಿನಲ್ಲಿತ್ತು 2 ಕೋಟಿ ರೂಪಾಯಿ ಮೌಲ್ಯದ 3.9 ಕೆ.ಜಿ. ಚಿನ್ನ!

ಅರಣ್ಯದೊಳಗೆ ಟ್ರಾಲಿ ಬ್ಯಾಗ್​ನಲ್ಲಿ ಮಹಿಳೆಯ ಶವ!; 15 ದಿನಗಳ ಹಿಂದೆ ತಂದು ಹಾಕಿರುವ ಶಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
