ವಿಜಯಪುರ:ವಿಧಾನ ಪರಿಷತ್ ಚುನಾವಣೆ ಹಿಂದಿನ ದಿನ ಶಿಕ್ಷಕರಿಗೆ ಹಣ ಹಂಚಲು ಮುಂದಾಗಿದ್ದ ಕಾಂಗ್ರೆಸ್​ನವರು ನಗದು ಸಮೇತ ಸಿಕ್ಕಿಬಿದ್ದಿದ್ದು, ಧನರೂಪದಲ್ಲಿ ಪ್ರಭಾವ ಬೀರಲು ಹೊರಟ ತಂತ್ರ ಬಯಲಾಗಿದೆ.
ಕಾಂಗ್ರೆಸ್​ ಅಭ್ಯರ್ಥಿಯ ಪರವಾಗಿ ಹಂಚಲು ವಿಜಯಪುರದ ಗೋದಾವರಿ ಹೋಟೆಲ್ ಬಳಿ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಸಿಕ್ಕ ಚೀಲದಲ್ಲಿ ಹಣವಿದ್ದ ಲಕೋಟೆಗಳು ಸಿಕ್ಕಿವೆ. ಬಹಳಷ್ಟರಲ್ಲಿ ತಲಾ 10 ಸಾವಿರ ರೂ. ಇದ್ದು, ಒಟ್ಟು 17.4 ಲಕ್ಷ ರೂ. ಪತ್ತೆಯಾಗಿವೆ. ಚುನಾವಣೆಯ ಹಿಂದಿನ ದಿನವಾದ ಇಂದು ರಾತ್ರಿ ಇದನ್ನು ಮತದಾರರಿಗೆ ನೀಡಿ ಪ್ರಭಾವ ಬೀರಲು ಯೋಜನೆ ಹಾಕಿಕೊಳ್ಳಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣೆ ಅಧಿಕಾರಿ (ಎಫ್‌.ಎಸ್‌.ಟಿ) ಎ.ಎಸ್‌. ಕೋಲಾರ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಕನ್ನೂರನಿಂದ ಬರುವಾಗ ತಹಸೀಲ್ದಾರ್‌ ಕಚೇರಿಯಿಂದ ಕರೆ ಬಂತು. ವಾಹನವೊಂದರಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ವಾಹನದಲ್ಲಿ ಒಟ್ಟು 17.40 ಲಕ್ಷ ರೂ.ಇದ್ದು ಕಾಂಗ್ರೆಸ್‌ ಅಭ್ಯರ್ಥಿಯ ಫೋಟೊ ಇವೆ ಎಂದರು.
ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಸಂಪರ್ಕಿಸಲಾಗಿ, ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದು ಹಣ ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ. ದೂರು ದಾಖಲಿಸಿದ ಬಳಿಕವೇ ಸಮಗ್ರ ಮಾಹಿಸಿ ಸಿಗಲಿದೆ ಎಂದರು.
ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!

ಸ್ಫಟಿಕ ಲಿಂಗ ಕಳವು ಪ್ರಕರಣ; ಪತ್ತೆ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ವಿಶ್ವ ಹಿಂದು ಪರಿಷತ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 11 =
Remember me
