ಬೆಂಗಳೂರು:ಅನುಭವ ಸಿನಿಮಾ ತಂದು ಕೊಟ್ಟ ಯಶಸ್ಸಿನ ಬಳಿಕ ಸ್ಟಾರ್​ ನಟಿ ಎನಿಸಿಕೊಂಡಿದ್ದ ಅಭಿನಯಾ ಇದೀಗ ಜೈಲು ಸೇರುವ ಕಥೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ತಮ್ಮ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ ಇಟ್ಟು ಪಾಲಕರ ಜೊತೆ ಸೇರಿ ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಹೈಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. ಈಗ ಅಭಿನಯ ವಿರುದ್ಧ ದೂರು‌ ನೀಡಿದ್ದ ಲಕ್ಷ್ಮಿದೇವಿ ಹೊಸ ಪುರಾಣ ಬೆಳಕಿಗೆ ಬಂದಿದೆ.
ಈಕೆ ಈಗ ಹಣ ತೆಗೆದುಕೊಂಡು ಮೋಸ ಮಾಡಿದ ಆರೋಪಕ್ಕೆ ಸಿಲುಕಿದ್ದಾರೆ. ‘ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ’ ಎಂದು ಹೇಳಿದ ಲಕ್ಷ್ಮಿದೇವಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ ಸೋನುಗೌಡ ಮಾನವ ಹಕ್ಕುಗಳ ಆಯೋಗದೊಂದಿಗೆ ಲಕ್ಷ್ಮಿದೇವಿ ಮನೆಗೆ ಆಗಮಿಸಿದ್ದಾರೆ.
ಈಗ ಈ ಲಕ್ಷ್ಮಿದೇವಿ ಮೇಲೆ ಅನೇಕ ಹೆಣ್ಣು ಮಕ್ಕಳಿಗೆ ಮೋಸ ಮಾಡಿರೋ ಆರೋಪ ಕೇಳಿಬಂದಿದೆ. 75 ಸಾವಿರ ರೂಪಾಯಿಯನ್ನು ಲಕ್ಷ್ಮಿದೇವಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಈಗ ಇವರು ಹೆಣ್ಣುಮಕ್ಕಳಿಗೆ ಸಿನಿಮಾ ಹುಚ್ಚು ಹಿಡಿಸಿ ಹಣ ಕೀಳೋ ಖಯಾಲಿ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಈಗ ಮನೆಗೆ ಆಗಮಿಸಿದ ಸೋನುಗೌಡ ದುಡ್ಡು ವಾಪಾಸ್ ಕೊಡುವಂತೆ ಮನವಿ ಮಾಡಿದ್ದಾರೆ. ಲಕ್ಷ್ಮಿದೇವಿ ಮನೆ ಬಳಿ ಹಣ ಕೊಡಬೇಕು ಎಂದು ವಂಚಿತೆ ಸೋನುಗೌಡ ಕಾಯುತ್ತಿದ್ದಾರೆ. ಈ ಸೋನುಗೌಡ ಸುಮ್ಮನೆ ಬರದೇ ದಾಖಲೆ ಸಮೇತ ಬಂದಿದ್ದು ಈಗ ಲಕ್ಷ್ಮಿದೇವಿ ಮನೆ ಬಳಿ ಠಿಕಾಣಿ ಹೂಡಿದ್ದಾರೆ.
ಲಕ್ಷ್ಮಿದೇವಿ ಅಭಿನಯ ಅವರ ಮೇಲೆ ಆರೋಪದ ವಿಡಿಯೋ ನೋಡಿದ ಸೋನುಗೌಡ, ಮನೆ ಹುಡುಕಿಕೊಂಡು ಬಂದು ಅಲ್ಲೇ ಠಿಕಾಣಿ ಹೂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೋನುಗೌಡ ‘ಒಂದು ವರ್ಷದಿಂದ ಇದೆ ರಾಮಾಯಣ ಆಗಿದೆ. ಇಷ್ಟು ದಿನ ಲಕ್ಷ್ಮಿದೇವಿ ಮನೆ ಅಡ್ರೆಸ್ ಗೊತ್ತಿರಲಿಲ್ಲ. ಈಗ ಮನೆ ಮುಂದೆ ಬಂದಿರೋದಕ್ಕೆ ಸೆಟಲ್ಮೆಂಟ್ ಮಾಡ್ತೀವಿ ಅಂತ ಹೇಳ್ತಿದ್ದಾರೆ’ ಎಂದು ಹೇಳಿದ್ದಾರೆ. ಇಷ್ಟಕ್ಕೇ ನಿಲ್ಲದ ಸೋನುಗೌಡ, ಲಕ್ಷ್ಮಿದೇವಿ ಪಕ್ಕಾ 420 ಎಂದಿದ್ದಾರೆ.
ಘಟನೆ ಬಗ್ಗೆ ವಿವರಿಸಿದ ಸೋನುಗೌಡ ‘ನಂಬಿಸಿ ದುಡ್ಡು ಇಸ್ಕೊಂಡು ಈಗ ಬ್ಲಾಕ್ ಮಾಡಿದ್ದಾರೆ. ನಾನು ಅವರ ಇವರ ಬಳಿ ದುಡ್ಡು ತಗೊಂಡು ಸಾಲ ತೀರಿಸುತ್ತಿದ್ದೇನೆ. ಇವರ ಹತ್ತಿರ ವಂಚನೆ ಮಾಡುವ ಬ್ಯುಸಿನೆಸ್ ಇನ್ನು ತುಂಬಾ ಇದೆ’ ಎಂದಿದ್ದಾರೆ. ಈಗ ಆರೋಪ ಏಳುತ್ತಿದ್ದಂತೆ ‘ಬರ್ತೀನಿ, ಬಂದು ನಿಮ್ ಹಣ ವಾಪಾಸ್ ಕೊಡ್ತೀನಿ’ ಎಂದು ಲಕ್ಷ್ಮಿದೇವಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 13 =
Remember me
