ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದು, ಇದರಿಂದ ಅಂದಾಜು 2.50 ಕೋಟಿ ರೂ. ನಷ್ಟ ಉಂಟಾಗಿದೆ.
ಪುಷ್ಪಪ್ರಿಯರು, ಪ್ರವಾಸಿಗರು, ಮಕ್ಕಳು, ವೃದ್ಧರು ಸೇರಿ ಎಲ್ಲ ವಯೋಮಾನದವರಿಗೂ ನೆಚ್ಚಿನ ತಾಣವಾಗಿರುವ ಲಾಲ್‌ಬಾಗ್‌ಗೆ ಪ್ರತಿದಿನ ಸಹಸ್ರಾರು ಜನ ಭೇಟಿ ನೀಡುತ್ತಿದ್ದರು. ಲಾಲ್‌ಬಾಗ್ ಪ್ರವೇಶಿಸಲು ಶುಲ್ಕ ಪಾವತಿಸಬೇಕಾಗಿದ್ದು, ಪ್ರತಿವರ್ಷ 6 ಕೋಟಿ ರೂ. ಸಂಗ್ರಹವಾಗುತ್ತಿತ್ತು. ತಿಂಗಳಿಗೆ ಸರಾಸರಿ 50 ಲಕ್ಷ ರೂ. ಆದಾಯ ಬರುತ್ತಿತ್ತು.
ಇದನ್ನೂ ಓದಿನಿರಾಶ್ರಿತರ ಹೊಟ್ಟೆ ತುಂಬಿಸಲು ಮೂಟೆ ಹೊರುತ್ತಿದ್ದಾರೆ ಟೆಕ್ಕಿಗಳು!
ವೈವಿಧ್ಯಮಯ ಹೂ ಗಿಡಗಳಿಂದ ಆಕರ್ಷಕವಾಗಿದ್ದ ಲಾಲ್‌ಬಾಗ್ ನರ್ಸರಿಯಲ್ಲಿ ಪ್ರತಿ ತಿಂಗಳು 80 ರಿಂದ 90 ಲಕ್ಷ ರೂ. ವಹಿವಾಟು ನಡೆಯುತ್ತಿತ್ತು. ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ೋಷಣೆಯಾದ ಬಳಿಕ ಎರಡು ತಿಂಗಳ ಕಾಲ ಈ ಉದ್ಯಾನವನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇಲ್ಲಿನ ಎಲ್ಲ ವ್ಯಾಪಾರ – ವ್ಯವಹಾರಗಳೂ ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಒಟ್ಟಾರೆ 2.50 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಲಾಲ್‌ಬಾಗ್ ನರ್ಸರಿ ಪುನರಾರಂಭಗೊಂಡಿದ್ದು, ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಿಗಳಿಗೆ ಲಾಲ್‌ಬಾಗ್ ಒಳಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಕರೊನಾ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಕೆಲ ದಿನಗಳ ಕಾಲ ಸಾರ್ವಜನಿಕರಿಗೆ ಲಾಲ್‌ಬಾಗ್‌ಗೆ ಪ್ರವೇಶ ಕಲ್ಪಿಸಲು ಅನುಮತಿ ನೀಡುವುದು ಡೌಟ್ ಎನ್ನುತ್ತಾರೆ ಅಧಿಕಾರಿಗಳು.
ಇದನ್ನೂ ಓದಿನಿಲ್ದಾಣ ಸ್ವಲ್ಪ ದೂರ ಇರುವಾಗಲೇ ತುರ್ತು ಸರಪಳಿ ಎಳೆದ ವಲಸೆ ಕಾರ್ಮಿಕರು ಅರೆಸ್ಟ್​
ಲಾಲ್‌ಬಾಗ್ ನರ್ಸರಿಯಲ್ಲಿ ನಡೆಯುತ್ತಿದ್ದ ವಹಿವಾಟುಗಳಲ್ಲಿ ಶೇ.20ರಷ್ಟು ನರ್ಸರಿಗೆ ಬೊಕ್ಕಸಕ್ಕೆ ಲಾಭವಾಗುತ್ತಿತ್ತು. ಇದನ್ನು ಸಿಬ್ಬಂದಿ ಹಾಗೂ ಇನ್ನೀತರ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಇಲ್ಲಿಗೆ ಭೇಟಿ ನೀಡುತ್ತಿದ್ದ ಲಕ್ಷಾಂತರ ಪ್ರವಾಸಿಗರೇ ನರ್ಸರಿಯ ಗ್ರಾಹಕರಾಗಿದ್ದರು. ಪ್ರತಿ ತಿಂಗಳು 6 ಲಕ್ಷ ರೂ. ಗುಲಾಬಿ ಗಿಡದ ವ್ಯಾಪಾರವಾಗುತ್ತಿತ್ತು. ಸದ್ಯ ಇದರ ಪ್ರಮಾಣ ತೀರಾ ಕಡಿಮೆಯಾಗಿದೆ. ಆದಾಯವೇ ಇಲ್ಲದೇ ಲಕ್ಷಾಂತರ ಗಿಡಗಳನ್ನು ನಿರ್ವಹಣೆ ಮಾಡುವ ಸಿಬ್ಬಂದಿಗೆ ವೇತನ ನೀಡುವುದು ಸಮಸ್ಯೆಯಾಗಿದೆ.
ಬಿಲಿಯನೇರ್ ಬಿಲ್ಡಪ್ ಕೊಟ್ಟು ಮಹಿಳೆಯರಿಗೆ ಗಾಳ ಹಾಕುತ್ತಿದ್ದ ಟೆಕ್ಕಿ ಅಂದರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
