ಚಿಕ್ಕಮಗಳೂರು:ನಾಯ್ಯಕ್ಕಾಗಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರ ಮುಂದೆ ಮಹಿಳೆಯರು ಕಣ್ಣೀರಿಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಚಿಕ್ಕಮಗಳೂರು ನಗರಕ್ಕೆ ವಿಜಯೇಂದ್ರ ಆಗಮಿಸಿದ್ದರು. ಈ ವೇಳೆ ಅವರ ಕಾರಿನ ಬಳಿ ಬಂದ ಪ್ರಸನ್ನ ಎಂಬುವರ ಕುಟುಂಬಸ್ಥರು, ತರೀಕೆರೆ ಶಾಸಕ ಸುರೇಶ್ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ. ನಮಗೆ ನ್ಯಾಯ ಕೊಡಿ ಇಲ್ಲವೇ, ದಯಾಮರಣ ಕೊಡಿ ಎಂದು ಕುಟುಂಬಸ್ಥರು ಕೈಮುಗಿದು ಬೇಡಿಕೊಂಡರು.
ಚಿಕ್ಕಮಗಳೂರು ಮೂಲದ ಪ್ರಸನ್ನ ಕುಟುಂಬ ತರೀಕೆರೆಯ ಲಕ್ಕವಳ್ಳಿಯಲ್ಲಿ 7 ವರ್ಷದ ಹಿಂದೆ 50 ಎಕರೆ ಜಮೀನು ಖರೀದಿ ಮಾಡಿತ್ತು. ಈ ಸಂಬಂಧ ತರೀಕೆರೆ ಶಾಸಕ ಸುರೇಶ್ ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯ ದಲ್ಲಿದ್ದರೂ ಶಾಸಕರು ಹಿಂಬಾಲಕರ ಮೂಲಕ ಹಲ್ಲೆ ನಡೆಸುತ್ತಿದ್ದಾರೆ. ನಮಗೆ ರಕ್ಷಣೆ ನಿಡಿ. ಸೂಕ್ತ ನ್ಯಾಯ ಕೊಡಿಸಿ ಎಂದು ಪಸನ್ನ ಕುಟುಂಬದ ಮಹಿಳೆಯರು ಕಣ್ಣೀರು ಹಾಕುತ್ತ ಪರಿಪರಿಯಾಗಿ ಬೇಡಿಕೊಂಡರು.
ಇದಕ್ಕುತ್ತರಿಸಿದ ವಿಜಯೇಂದ್ರ, ಭಯಪಡಬೇಡಿ. ನಾನು ಅವರೊಂದಿಗೆ ಮಾತನಾಡುವೆ. ಧೈರ್ಯವಾಗಿರಿ ಎಂದು ಭರವಸೆ ನೀಡಿದರು.
ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 3 =
Remember me
