ಬೆಂಗಳೂರು:ರಾಜ್ಯದಲ್ಲಿ ಭೂ ಪರಿವರ್ತನೆ ಪ್ರಕರಣಗಳನ್ನು ಏಳೇ ದಿನದಲ್ಲಿ ನೀಡುವಂತಹ ತ್ವರಿತ ಗತಿಯ ನಾಗರಿಕ ಸೇವೆಯನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ಕ್ರೆಡೈ ಕರ್ನಾಟಕ ವಿಭಾಗ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಸ್ಟೇಟ್‌ಕಾನ್’ ಸಮ್ಮೇಳನದಲ್ಲಿ ಸೋಮವಾರ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಕಂದಾಲಯ ಇಲಾಖೆ ಮೂಲಕ ಜನರಿಗೆ ಹೆಚ್ಚು ಅನುಕೂಲವಾಗುವ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಿದೆ. ದಶಕಗಳಿಂದ ಸಮಸ್ಯೆಯ ಗೂಡಾಗಿರುವ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲು ಇದರ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ. ಒಂದು ವೇಳೆ ಈ ಸಮಯದೊಳಗೆ ಡಿಸಿಯವರು ಪ್ರಮಾಣಪತ್ರ ನೀಡದಿದ್ದಲ್ಲಿ ಅರ್ಜಿದಾರನಿಗೆ ತಾನು ಸಲ್ಲಿಸಿರುವ ಭೂಮಿಯ ಭೂ ಪರಿವರ್ತನೆ ಸ್ವಯಂ ಜನರೇಟ್ ಆಗಲಿದೆ. ಆ ರೀತಿಯ ವ್ಯವಸ್ಥೆಯನ್ನು ನಾವು ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಇದರ ಜೊತೆಗೆ ಆಸ್ತಿ ನೋಂದಣಿಗೆ ಹೋಗುವಾಗ ಎಲ್ಲ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಕಾವೇರಿ 2.0 ಜಾರಿಯಿಂದ ಇದೆಲ್ಲವನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಈ ಎಲ್ಲಾ ದಾಖಲೆ ಪತ್ರಗಳು ಸಬ್ ರಿಜಿಸ್ಟರೇಷನ್ ಆಫೀಸ್‌ನಲ್ಲೇ ಲಭ್ಯವಿರಲಿದ್ದು, ಅಲ್ಲಿಯೇ ಹುಡುಕಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮದವರು ಕೇಳಿದ್ದ ಭರವಸೆಗಿಂತ ಹೆಚ್ಚು ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಸ್ಮಾರ್ಟ್ ಆಡಳಿತಕ್ಕಾಗಿ ಕಾವೇರಿ 2.0: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿಆರ್ ಡಾ.ಮಮತಾ ಬಿ.ಆರ್. ಮಾತನಾಡಿ, ಕಾವೇರಿ 2.0ರ ತಂತ್ರಾಂಶದಡಿ ಆನ್‌ಲೈನ್ ನೋಂದಣಿ ವ್ಯವಸ್ಥೆಯು ಪ್ರಸ್ತುತ ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಸ್ಮಾರ್ಟ್ ಆಡಳಿತವನ್ನು ಪ್ರಾರಂಭಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದನ್ನು ಅಭಿವೃದ್ಧಿಪಡಿಸಿದೆ. ಕಾವೇರಿ 2.0ಅನ್ನು ಕರ್ನಾಟಕದ ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂದರು.
ಕಾವೇರಿ 2.0 ಅನ್ನು ಭೂ ದಾಖಲೆಗಳ ಸ್‌ಟಾವೇರ್ ಭೂಮಿ, ಇ-ಆಸ್ತಿ ಮತ್ತು ಇ -ಸ್ವತ್ತು ಜೊತೆ ಸಂಯೋಜಿಸಲಾಗಿದೆ. ಆ ಮೂಲಕ ವಂಚನೆ ರಹಿತ, ಪುರಾವೆ ಸುರಕ್ಷಿತ ವಹಿವಾಟನ್ನು ಖಾತ್ರಿಪಡಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಕ್ರೆಡೈ ಬೆಂಗಳೂರು ವಿಭಾಗದ ಅಧ್ಯಕ್ಷ ಭಾಸ್ಕರ್ ಟಿ ನಾಗೇಂದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಕ್ಕೆ ನಾವು ಪ್ರಶಂಸಿಸುತ್ತೇವೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು, ಕಾಲಮಿತಿಯೊಂದಿಗೆ ಮಂಜೂರಾತಿ ಪ್ರಕ್ರಿಯೆಗೆ, ಅನುಮೋದನೆಗೆ ಏಕಗವಾಕ್ಷಿ ಪದ್ಧತಿಯನ್ನು ತಂದಲ್ಲಿ ರಿಯಾಲ್ಟಿ ವ್ಯವಹಾರ ಸುಲಭಗೊಳಿಸಬಹುದು ಎಂದು ಹೇಳಿದರು.
6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ
ಗಂಡ-ಅತ್ತೆಯನ್ನು ಕೊಂದು ಪೀಸ್​ ಮಾಡಿ ಪಕ್ಕದ ರಾಜ್ಯದಲ್ಲಿ ಎಸೆದ್ಲು; ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ನೆರವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 13 =
Remember me
