ಉತ್ತರಕನ್ನಡ:ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದ ಕೊಲೆಯೊಂದಕ್ಕೆ ಕಾರಣವಾಗಿದೆ. ತಮ್ಮಂದಿರಿಬ್ಬರು ಸೇರಿ ಅಣ್ಣನನ್ನು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ.
ಹನುಮಂತ ಹೊನ್ನಪ್ಪ ನಾಯ್ಕ್ (54) ದಾರುಣವಾಗಿ ಸಾವಿಗೀಡಾದ ವ್ಯಕ್ತಿ. ಈತನ ತಮ್ಮಂದಿರಾದ ವಿನಾಯಕ ನಾಯ್ಕ, ಚಿದಾನಂದ ನಾಯ್ಕ್ ಕೊಲೆ‌ ಆರೋಪಿಗಳು. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಯಂಗಡಿಯ ತೊಟ್ಟಿಲಗುಂಡಿಯಲ್ಲಿ ಈ ಹತ್ಯೆ ನಡೆದಿದೆ. ಈ ಪ್ರಕರಣದಲ್ಲಿ ಮೃತಪಟ್ಟವರ ಸಹೋದರ ಮಾವ ಮಾರುತಿ ನಾಯ್ಕ್ (70) ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಆಸ್ತಿ ವಿವಾದ ಸಂದರ್ಭ ರಾಡ್‌ನಲ್ಲಿ ತಲೆಗೆ ಹೊಡೆದಿದ್ದರಿಂದ ಹನುಮಂತ ನಾಯ್ಕ್ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಈ ಹಿಂದೆ ಕೂಡ ಅಡಕೆ, ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮಂದಿರಲ್ಲಿ ಗಲಾಟೆ ನಡೆದಿತ್ತು. ಇಂದು ಜಗಳ ತಾರಕಕ್ಕೇರಿ ಸಹೋದರರು ಅಣ್ಣನನ್ನು ಕೊಲೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವು!; ಅಪಘಾತ ಮಾಡಿ ಕೊಂದ್ರಾ?
ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
