ಬೆಳಗಾವಿ:ತಾಲೂಕಿನ ಕಾಕತಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ:ಪೆನ್​ಡ್ರೈವ್​ ಹಂಚಿಕೆ ಕೇಸ್​: ಚೇತನ್, ಲಿಖಿತ್‌ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ‌
ಕಾಕತಿ ಗ್ರಾಮದ ಅನಿಲ್ ಮುಂಗಾರಿ ಮತ್ತು ಇದೇ ಗ್ರಾಮದ ಸಿದ್ದರಾಯಿ ತುಂಬರಿ ಕುಟುಂಬದ ನಡುವೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾರಾಮಾರಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಘಟನೆಯಲ್ಲಿ ಕಾಕತಿ ಗ್ರಾಮದ ನಿವಾಸಿ ಅನಿಲ್ ಮುಂಗಾರಿ ಸೇರಿ 7 ಮಂದಿ ಗಂಭೀರ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಜಮೀನನ್ನು ಅನಿಲ್ ಮುಂಗಾರಿ ಕುಟುಂಬ ಬಳಸುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಈ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಸಿದ್ದರಾಯಿ ತುಂಬರಿ ಎಂಬುವರು ಕೆಲ ರೌಡಿಗಳಿಂದ ಕೃಷಿಯಲ್ಲಿ ತೊಡಗಿದ್ದ ಅನಿಲ್ ಮುಂಗಾರಿ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ.
ಕೋರ್ಟ್‌ನಲ್ಲಿರುವ ಅನಿಲ್ ಮುಂಗಾರಿಗೆ ಸೇರಿದ ಜಮೀನನನ್ನು ಬಿಟ್ಟುಕೊಡುವಂತೆ ಸಿದ್ದರಾಯಿ ತುಂಬರಿ ಹೇಳಿದ್ದ, ಇದಕ್ಕೆ ಒಪ್ಪದಾಗ ಅನಿಲ್ ಮುಂಗಾರಿ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಆರೋಪಿಸಿದ್ದಾರೆ. ಬೆಳಗಾವಿಯ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ತಪ್ಪಿದ ದೊಡ್ಡ ದುರಂತ: ಖಾಸಗಿ ಬಸ್ ಪಲ್ಟಿಯಾಗಿ 49 ಪ್ರಯಾಣಿಕರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − one =
Remember me
