| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗದೇಶದ ಸಾವಿರಾರು ಗ್ರಾಮಗಳಿಗೆ ದೂರವಾಣಿ ಸಂಪರ್ಕ ಜಾಲದ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ 4-ಜಿ ಸ್ಯಾಚುರೇಶನ್ ಪ್ರಾಜೆಕ್ಟ್​ಗೆ ಸಿದ್ದು ಸರ್ಕಾರವೂ ಕೈ ಜೋಡಿಸಿದೆ.
ಆತ್ಮನಿರ್ಭರ ಭಾರತ-ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ದೂರ ಸಂಪರ್ಕ ಜಾಲವಿಲ್ಲದ ದೇಶದ 25 ಸಾವಿರ ಗ್ರಾಮಗಳಿಗೆ 2023 ಡಿ.8 ರೊಳಗೆ 4-ಜಿ ಇಂಟರ್​ನೆಟ್ ಸೌಲಭ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಸಂಪುಟ 2022 ಜು.27 ರಂದು ಅನುಮೋದನೆ ನೀಡಿತ್ತು.
ದೇಶದ ಆರ್ಥಿಕ, ಶೈಕ್ಷಣಿಕ, ಇ-ಆಡಳಿತ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈ ಯೋಜನೆ ಮೂಲ ಸಾಧನವಾಗಲಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆ ಮತ್ತು ಜೀವನ ಮಟ್ಟವೂ ಸುಧಾರಣೆಯಾಗಲಿದೆ. ಈ ಕಾರಣಕ್ಕಾಗಿ ಬಿಎಸ್​ಎನ್​ಎಲ್ ಕರ್ನಾಟಕ ಸರ್ಕಲ್ ಚೀಫ್ ಜನರಲ್ ಮ್ಯಾನೇಜರ್ ಟೆಲಿಕಾಂ ಕಚೇರಿ ಬರೆದಿರುವ ಪತ್ರಕ್ಕೆ ರಾಜ್ಯಸರ್ಕಾರ ಸ್ಪಂದಿಸಿದೆ.
ನೆಟ್​ವರ್ಕ್ ಇಲ್ಲದ ಗ್ರಾಮಗಳಲ್ಲಿ ಟವರ್ ಸ್ಥಾಪಿಸಲು ಅಗತ್ಯ ಭೂಮಿಯನ್ನು ರಿಯಾಯಿತಿ ದರದಲ್ಲಿ ಒದಗಿಸಲು ಹಾಗೂ ಒಎಫ್​ಸಿ ಕೇಬಲ್ ಮತ್ತು ಟವರ್ ಸ್ಥಾಪನೆಗಾಗಿ ರೈಟ್ ಆಫ್ ವೇ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಬಿಎಸ್​ಎನ್​ಎಲ್ ಕೋರಿಕೆ ಸಲ್ಲಿಸಿತ್ತು. ಇದನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಟೆಲಿಕಾಂ ಸ್ಥಾವರಗಳ ಸ್ಥಾಪನೆಗಾಗಿ ಅಗತ್ಯವಿರುವ 2000 ಚದರ ಅಡಿ ಭೂಮಿಯನ್ನು ಬಿಎಸ್​ಎನ್​ಎಲ್​ಗೆ 30 ವರ್ಷಗಳ ಅವಧಿಗೆ ಲೀಸ್ ಕೋಡಲು ಒಪ್ಪಿಗೆ ಸೂಚಿಸಿದ್ದು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಜು.14ರಂದು ಪತ್ರವನ್ನೂ ಬರೆದಿದ್ದಾರೆ. ಬಿಎಸ್​ಎನ್​ಎಲ್​ಗೆ ಒದಗಿಸುವ ಭೂಮಿ ಗೋಮಾಳವಾಗಿದ್ದಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳು 1966 ನಿಯಮ 97(4)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸುವ ಹಾಗೂ ಖರಾಬು ಜಮೀನು ಆಗಿದ್ದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 68ರನ್ವಯ ವಿವಿಧ ಷರತ್ತಿಗೆ ಒಳಪಟ್ಟು ಭೂಮಿ ಒದಗಿಸಲು ಶುಲ್ಕವನ್ನು ಮನ್ನಾ ಮಾಡಲು ಕರ್ನಾಟಕ ಸರ್ಕಾರ ಆದೇಶಿಸಿದೆ.
43 ಗ್ರಾಮಗಳಲ್ಲಿ ಸಂಪರ್ಕವೇ ಇಲ್ಲ:ಚಿತ್ರದುರ್ಗ ಜಿಲ್ಲೆಯ 43 ಗ್ರಾಮಗಳಲ್ಲಿ ಖಾಸಗಿ/ಬಿಎಸ್​ಎನ್​ಎಲ್ ದೂರವಾಣಿ ಸಂಪರ್ಕ ಜಾಲವಿಲ್ಲ ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಂದಲೂ ಶಿಫಾರಸು ಆಗಿರುವ ಗ್ರಾಮಗಳ ಸಹಿತ ಸದ್ಯಕ್ಕೆ ಗುರುತಿಸಿರುವ 43 ಗ್ರಾಮಗಳಲಿ 4ಜಿ’ ಸಂಪರ್ಕ ಜಾಲದ ಸ್ಥಾಪನೆಗೆ ಬಿಎಸ್​ಎನ್​ಎಲ್ ಮುಂದಾಗಿದೆ. ಈ ಪೈಕಿ 28 ಗ್ರಾಮಗಳಲ್ಲಿ ಭೂ ಮಂಜೂರು ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಇಂಥ ಗ್ರಾಮಗಳಿದ್ದರೆ ವರದಿ ಕೊಡುವಂತೆ ಜಿಲ್ಲಾಧಿಕಾರಿ ಜಿಆರ್​ಜೆ ದಿವ್ಯಾಪ್ರಭು, ತಹಸೀಲ್ದಾರ್​ಗಳಿಗೆ ಸೂಚಿಸಿದ್ದಾರೆ. ಅವರ ವರದಿಗಳನ್ನಾಧರಿಸಿ ಸಂಪರ್ಕ ಜಾಲ ಸೌಲಭ್ಯವನ್ನು ಕಲ್ಪಿಸಲು ಸರ್ವೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಬಿಎಸ್​ಎನ್​ಎಲ್ ಮೂಲಗಳು ತಿಳಿಸಿವೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
