ದಾವಣಗೆರೆ:ಹೇ.. ಇದಿಷ್ಟು ನನ್ನದು, ಈ ಜಾಗ ನನ್ನದು, ಇದು ನನಗೆ ಸೇರಿದ್ದು, ನಾನು ಮೊದಲು ಬಂದದ್ದು ಹಾಗಾಗಿ ಇದು ನನಗೇ ಸೇರಬೇಕು… ಎಂಬ ಸದ್ದು-ಗದ್ದಲ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ಭಾನುವಾರ ಜೋರಾಗಿಯೇ ಇತ್ತು.
ಪುಕ್ಕಟ್ಟೆ ಜಾಗ ಸಿಗುತ್ತೆ ಅಂತ ಓಡೋಡಿ ಬಂದ ಸಾವಿರಾರು ಜನ, ಈ ಜಾಗ ನಂದು ಅಂತ ಸಲಾಕಿ-ಗುದ್ದಲಿ ತಂದು ಗೂಟ ನೆಡುತ್ತಿದ್ದರು. ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಿಕೊಳ್ಳುತ್ತಿದ್ದರು. ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂಬರ್ 91 ಮತ್ತು ಲಕ್ಷ್ಮೀಸಾಗರದ ಸರ್ವೇ ನಂಬರ್ 15ರಲ್ಲಿ ಒಟ್ಟು 150 ಎಕರೆ ಜಮೀನು ಫ್ರೀಯಾಗಿದೆ. ಯಾರು ಬೇಕಿದ್ದರೂ ಮನೆ ಕಟ್ಟಿಕೊಳ್ಳಬಹುದು ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ನಾ ಮುಂದು-ತಾ ಮುಂದು ಎಂಬಂತೆ ಜನಸಾಗರವೂ ಅಲ್ಲಿ ಬೀಡು ಬಿಟ್ಟಿತ್ತು.
150 ಎಕರೆ ಜಮೀನು ಫ್ರೀಯಾಗಿದೆ. ಅದರಲ್ಲಿ ಮನೆ ಕಟ್ಟಿಕೊಳ್ಳಬಹುದೆಂದು ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮತ್ತು ಪುರಸಭೆ ಸದಸ್ಯರು ಹೇಳಿದ್ದಾರೆ ಎಂಬ ವದಂತಿಯನ್ನು ಯಾರೋ ಕಿಡಿಗೇಡಿಗಳು ಹಬ್ಬಿಸಿದ್ದರು. ಸುಳ್ಳು ಸುದ್ದಿಯನ್ನ ನಂಬಿದ ಜನರು ಖಾಲಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ‌ ಸಿಬ್ಬಂದಿ, ಇದೆಲ್ಲವೂ ಸುಳ್ಳು ಎಂದು ಜನರನ್ನು ವಾಪಸ್​ ಕಳುಹಿಸಿದರು. ಪುಕ್ಕಟ್ಟೆಯಾಗಿ ಜಾಗ ಸಿಗಲಿದೆ ಎಂಬ ಖುಷಿಯಲ್ಲಿ ಬಂದ ಜನತೆ ಗೊಣಗಾಡುತ್ತ ಹೋದರು.
ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
